ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಸೇರಿದಂತೆ 57 ಮಂದಿ ರಾಜ್ಯಸಭಾ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ಇದರಿಂದ ತೆರವಾಗಲಿರುವ ಸ್ಥಾನಗಳಿಗೆ ಚುನಾವಣಾ ನಡೆಸಲು ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 57 ಸ್ಥಾನಗಳಿಗಾಗಿ ಜೂನ್ ೧೦ರಂದು ಚುನಾವಣಾ ನಡೆಯಲಿದೆ. ಮೇ ೨೪ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದ್ದು ಮೇ 31 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 10ರಂದು ಬೆಳಗ್ಗೆ 6ರಿಂದ 4ಗಂಟೆಯವರೆಗೆ ಮತದಾನ ನಡೆಯಲಿದ್ದು ಅದೇ ದಿನ ಸಂಜೆ 5ಗಂಟೆಗೆ ಮತಗಾಳ ಎಣಿಕೆ ನಡೆಯಲಿದೆ. ಕರ್ನಾಟಕದಿಂದ ಆಯ್ಕೆಯಾಗಿದ್ದ ಸಚಿವೆ ನಿರ್ಮಲ ಸೀತಾರಾಮನ್, ಬಿಜೆಪಿ ಮುಖಂಡ ಕೆ ಸಿ ರಾಮಮೂರ್ತಿ ಕಾಂಗ್ರೆಸ್ ನ ಜಯರಾಮ ರಮೇಶ್ ಮತ್ತು ದಿವಂಗತ ಆಸ್ಕರ್ ಫೆರ್ನಾಂಡಿಸ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ 121 ಸದಸ್ಯರನ್ನ ಹೊಂದಿದ್ದು, ಸುಲಭವಾಗಿ ಇಬ್ಬರು ಆಯ್ಕೆಯಾಗಲಿದ್ದಾರೆ. 69 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ನಲ್ಲಿ ಒಬ್ಬರು ಆಯ್ಕೆಯಾಗಲಿದ್ದು, 4ನೇ ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ಅಥವ ಜೆಡಿಎಸ್ ನ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಹಾಗಾಗಿ ಕನಾಟಕ ರಾಜ್ಯಸಭೆ ಚುನಾವಣೆ ಕುತೂಹಲ ಮೂಡಿಸಿದೆ.