ಬೆಂಗಳೂರು,ನ.25-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಬಳಿಕವೂ ವಿವಿಧ ಅಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಕರಣದ ಹದಿನೇಳು ಆರೋಪಿಗಳ ಹಣಕಾಸಿನ ಮೂಲಕ್ಕೆ ತನಿಖಾಧಿಕಾರಿಗಳು ಕೈ ಹಾಕಿದ್ದಾರೆ.
ಕೊಲೆ ಪ್ರಕರಣ ಮುಚ್ಚಿ ಹಾಕಲು ನಟ ದರ್ಶನ್ ವ್ಯವಹಾರ ನಡೆಸಿದ್ದಾರೆ, ಆನ್ಲೈನ್ ಮೂಲಕವೂ ಹಣದ ವ್ಯವಹಾರ ನಡೆದಿರುವ ಬಗ್ಗೆ ಗುಮಾನಿ ಇದೆ.
ಈ ಕಾರಣದಿಂದ ಪೊಲೀಸರು ಈ ವಿಚಾರವಾಗಿ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಬೆಂಗಳೂರಿನ ವಿವಿಧ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಅವುಗಳ ಮಾಹಿತಿ ಪಡೆಯಲಾಗಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್ಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್ಗಳ ಮ್ಯಾನೇಜರ್ನ ಸಂಪರ್ಕಿಸಿ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ.
ಮಾಗಡಿ ರೋಡ್ನ ಒಂದು ಬ್ಯಾಂಕ್ನಿಂದ 14 ಮಂದಿ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೆವೈಸಿ ಮಾಹಿತಿ ಪಡೆದಿದ್ದಾರೆ. ಇ-ಮೇಲ್ ಮೂಲಕ ಮಾಹಿತಿ ಸಂಗ್ರಹ ಆಗಿದೆ. ಕೊಲೆಯ ಹಿಂದೆ ಅಥವಾ ನಂತರದ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯಲಿದೆ. ಒಂದೊಮ್ಮೆ ಇದು ನಡೆದಿದ್ದರೆ ದರ್ಶನ್ಗೆ ಸಂಕಷ್ಟ ಉಂಟಾಗಲಿದೆ.
ದರ್ಶನ್ ಅವರು ಕೊಲೆ ಮುಚ್ಚಿ ಹಾಕಲು ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎನ್ನುವ ಆರೋಪ ಇದೆ. ಒಂದಷ್ಟು ಹಣದ ವ್ಯವಹಾರ ಕ್ಯಾಶ್ ಮೂಲಕ ಆಗಿದೆ.
ಒನ್ನೊಂದಷ್ಟು ಹಣದ ವ್ಯವಹಾರ ಆನ್ಲೈನ್ ಮೂಲಕ ಆಗಿರೋ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಆರೋಪಿಗಳ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರ ನೀಡುವಂತೆ ಪೊಲೀಸರು ಈ ಮೊದಲು ಬ್ಯಾಂಕ್ನವರಿಗೆ ಮನವಿ ಮಾಡಿದ್ದರು. ಅದರಂತೆ ಎಲ್ಲಾ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.