ಬೆಂಗಳೂರು,ಅ.11- ಈದ್ ಮಿಲಾದ್ ಆಚರಣೆ ದಿನದಂದು ಕುರಾನ್ ಪಠಣೆ, ಪ್ರಾರ್ಥನೆ ಸಂಜೆ ಮೆರವಣಿಗೆ ನಡೆಸಲಿದ್ದು,ಆದರೆ ಈದ್ ಮಿಲಾದ್ ದಿನದಂದು ಸಿದ್ದಾಪುರದಲ್ಲಿ ಯುವಕರು ಲಾಂಗ್ ಹಿಡಿದು ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧಿಸಿದಂತೆ 19 ಮಂದಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಯುವಕರು ಲಾಂಗೂ, ಮಚ್ಚು ಹಿಡಿದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹೋದರ ಅಕ್ಬರುದ್ದಿನ್ ಓವೈಸಿ ಮಾಡಿದ ಭಾಷಣಕ್ಕೆ ಡಿಜೆ ಸಾಂಗ್ಸ್ ಬಳಸಿ ಯುವಕರು ಲಾಂಗ್ ಹಿಡಿದು ಸಂಭ್ರಮಿಸಿದ್ದಾರೆ.
ಹಿಂದೂಸ್ತಾನದ ಹಿಂದೂಗಳೇ ನೀವು ನೂರು ಕೋಟಿ ಜನಸಂಖ್ಯೆ ಇದ್ದೀರಲ್ಲ ಸರಿ. ನಮಗಿಂತ ನೀವು ಇಷ್ಟೊಂದು ಜನಸಂಖ್ಯೆ ಹೆಚ್ಚಾಗಿದ್ದೀರಾ ಅಲ್ವ. ನಾವು ಕೇವಲ 25 ಕೋಟಿ ಇದ್ದೀವಿ ಅಷ್ಟೇ. ಆದರೆ ಯಾರಲ್ಲಿ ತಾಕತ್ತು ಇದೆ ನೋಡೋಣ. ಪೊಲೀಸರು ಹತ್ತು ನಿಮಿಷ ಸೈಲೆಂಟ್ ಆಗಿ ಇರಲಿ ನೋಡೋಣ ಎಂದು ವೇದಿಕೆ ಮೇಲೆ ದ್ವೇಷದ ಭಾಷಣ ಮಾಡಿದ್ದ ಆಡಿಯೋಗೆ ಡಿಜೆ ಸಾಂಗ್ಸ್ ಮೂಲಕ ಡ್ಯಾನ್ಸ್ ಮಾಡಿದ್ದಾರೆ.
ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣ ದಾಖಲಿಸಿ ಸಿದ್ದಾಪುರ ಪೊಲೀಸರು
ಲಾಂಗ್ ಮಚ್ಚು ಪ್ರದರ್ಶಿಸಿದ 19 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದೋರಿಗೆ ಬಿತ್ತು ಕೇಸ್
Previous Articleನಿಧಿಯಾಸೆಗೆ ಮಹಿಳೆಯರ ಬಲಿ
Next Article 97ವರ್ಷದ ಮಹಾತೀರ್ ಮತ್ತೊಮ್ಮೆ ಮಲೇಷ್ಯಾದ ಸಂಸದರಾಗುತ್ತಾರಂತೆ