ಮಂಡ್ಯ : ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿ ಪುಟ್ಟೆಗೌಡನದೊಡ್ಡಿ ಗ್ರಾಮದ ಚನ್ನೆಗೌಡರ ಮಗನಾದ ರಮೇಶ್ 35 ವರ್ಷ ಒಕ್ಕಲಿಗರು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಮನೆ ಮುಂಭಾಗ ಇರುವ ಲೈಟ್ ಕಂಬದ ಬಳಿ ರಮೇಶ್ ರವರ ಸ್ನೇಹಿತರ ಪೋನ್ ಕರೆ ಸ್ವೀಕರಿಸಿ ಮಾತನಾಡುವ ವೇಳೆ ಕಂಬದ ಬಳಿ ಹೋದಾಗ ವಿದ್ಯುತ್ ಪ್ರಸರಣಗೊಂಡು ಪ್ರಸರಿಸಿ ನಂತರ ಈ ಅವಘಡದಿಂದ ರಮೇಶ್ ಅವರನ್ನು ಅವಘಡದಿಂದ ತಪ್ಪಿಸಲು ತನ್ನ ಸ್ನೇಹಿತರಾದ ಶಂಕರ್ ಬಿನ್ ಪುಟ್ಟಸ್ವಾಮಿ ಅವರಿಗೂ ವಿದ್ಯುತ್ ಪ್ರಸರಿಸಿ ಇವರುಗಳನ್ನು ಕೂಡಲೇ ಅಕ್ಕಪಕ್ಕದಲ್ಲಿದ್ದ ಕುಟುಂಬದವರು ಇವರನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದಾರೆ.
ಮೃತರ ಶವಗಳು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು. ತನಿಖೆ ಕಾರ್ಯ ಕೈಗೊಂಡಿದ್ದಾರೆ.