ಮಂಡ್ಯ: ಬಿಜೆಪಿ ಸರ್ಕಾರದ ವಿರುದ್ದ ಇಲ್ಲ ಸಲ್ಲದ ಆರೋ ಪ ಮಾಡ್ತಿರೋ ವಿರೋದ ಪಕ್ಷದ ನಾಯಕರ ವಿರುದ್ದ ಸಚಿ
ವ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದು,ವಿರೋಧ ಪಕ್ಷದ ನಾಯಕ ವಿರುದ್ದ ಮುಗಿಬಿದ್ದಿದ್ದಾರೆ.
ಮಂಡ್ಯದಲ್ಲಿ ಈ ಸಂಬಂಧ ಮಾತನಾಡಿರುವ ಸಚಿವ ನಾ ರಾಯಣಗೌಡ ವಿರೋಧ ಪಕ್ಷದವರಿಗೆ ಟೀಕೆ ಟಿಪ್ಪಣಿ ಮಾಡುವ ಕೆಲಸ ಬಿಟ್ರೆ ಬೇರೆ ಕೆಲಸ ಇಲ್ಲ ಎಂದು ಕಿಡಿ ಕಾರಿದ್ದು PSI ನೇಮಕಾತಿ ಅಕ್ರಮದ ವಿಚಾರದಲ್ಲಿ ಬಿಜೆಪಿ ಸರ್ಕಾರ ಹಗರಣವನ್ನು ಮುಚ್ಚಿ ಹಾಕುವ ಪ್ರಶ್ನೆನೇ ಇಲ್ಲಯೇ ಎಂದಿದ್ದು, ನಮ್ಮ ಪಕ್ಷದವರಾಗಿದ್ರು ಸರಿ.. ಹೊರಗಿನವರಾದ್ರು ಸರಿ ಆಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ.ಅವರೆಲ್ಲರ ಮೇಲೆ FIR ಆಗಿದೆ, ತನಿಖೆಯಾಗ್ತಿದೆ. ಹಗರಣ ಮುಚ್ಚಿ ಹಾಕುವ ಹಾಗಿದ್ರೆ ಅರೆಸ್ಟ್ ಮಾಡ್ತಿರಲಿಲ್ಲ. ಕಾಂಗ್ರೆಸ್ನ ವರು 2015 ರಲ್ಲಿ ಸರ್ಕಾರ ಇದ್ದಾಗ ಏನು ಮಾಡಿದ್ರು? ನಾವು ಯಾರ ಬಗ್ಗೆನು ಟೀಕೆ ಮಾಡಲ್ಲ. ಕಾಂಗ್ರೆಸ್-ಜೆಡಿಎಸ್ ರಾಜಕಾರಣ ಮಾಡೋದನ್ನ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದ್ರು.
ಇನ್ನು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ನಾರಾಯಣಗೌಡ2015 ರಲ್ಲಿ ಸಿದ್ದರಾಮಯ್ಯ ಸಿ. ಎಂ ಆಗಿದ್ರು, ಆಗ ಅವರು ಏನು ಮಾಡಿದ್ದಾರೆ ಯೋಚನೆ ಮಾಡಬೇಕು. ಕಾಂಗ್ರೆಸ್ ನವರು ಹಗರಣ ಮುಚ್ಚಾಕಿದ್ರು, ನಾವು ಮುಚ್ಚಿ ಹಾಕುತ್ತಿಲ್ಲ. ಹಗರಣದಲ್ಲಿ ಶಾಮೀಲಾಗಿಲ್ಲ ಅಂದ್ರೆ, ಅವ್ರನ್ನ ಸುಮ್ಮನೆ ಕೂಡಿಹಾಕಲು ಆಗುತ್ತಾ? ತನಿಖೆ ನಡೆಯುತ್ತಿದೆ, ಅಪರಾಧಿ ಆಗಿಲ್ಲ ಆಗಾಗಿ ಅವ್ರನ್ನ ಬಿಟ್ಟು ಕಳಿಸಿದ್ದಾರೆ ಎಂದು ಕೆಲವರನ್ನು ಪೊಲೀಸರು ಕೆಲವರನ್ನು ವಿಚಾರಣೆ ಮಾಡಿ ಬಿಟ್ಟು ಕಳಿಸಿರೋ ಕ್ರಮವನ್ನು
ಸಮರ್ಥಿಸಿಕೊಂಡರು. ಅಲ್ಲದೆ ಆ ರೀತಿ ಸಾಕ್ಷಿ ಇದ್ರೆ ಕೊಡಲಿ, ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ. ಅಶ್ವಥ್ ನಾರಾಯಣ ಆಗಲಿ ನಾನಾದ್ರು ಸರಿ ಎಲ್ಲರಿಗೂ ಕಾನೂನು ಒಂದೇ ಎಂದರು.
ಇನ್ನು ನಮ್ಮ ಬಿಜೆಪಿ ಪಕ್ಚ ಕೇಂದ್ರದ ಕಂಟ್ರೋಲ್ ನಲ್ಲಿದೆ. ನಮ್ಮ ವರಿಷ್ಠರು ನಮ್ಮೆಲ್ಲರ ಮೇಲೆ ಕಣ್ಣಿಟ್ಟಿದ್ದಾರೆ. ನಾವು ಯಾವುದೇ ತಪ್ಪು ಮಾಡುವುದಕ್ಕೆ ಬಿಡಲ್ಲ. ವಿರೋಧ ಪಕ್ಷದವರು ದಯವಿಟ್ಟು ಅಭಿವೃದ್ಧಿಗೆ ಕೈ ಜೋಡಿಸಿ. ಯಾರೇ ಕಳ್ಳರುಕಾಕರು ಇದ್ರೆ ಲಿಸ್ಟ್ ಕೊಡಿ ತನಿಖೆ ಮಾಡ್ತೇವೆ. ವಿರೋಧ ಪಕ್ಷದವರಿಗೆ ಟೀಕೆ ಟಿಪ್ಪಣಿ ಮಾಡುವ ಕೆಲಸ ಬಿಟ್ರೆ ಬೇರೆ ಏನು ಕೆಲಸ ಇಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ದ ಸಚಿವ ನಾರಾಯಣ್ ಗೌಡ ಕಿಡಿ ಕಾರಿ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಜೆಡಿಎಸ್ ಶಾಸಕರ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ
ಮಾತನಾಡಿ ಬಿಜೆಪಿ ಸರ್ಕಾರದ ಬಳಿ ಅನುದಾನ ಕೇಳಲು ಮಂಡ್ಯ ಜಿಲ್ಲೆಯ ಶಾಸಕರಿಗೆ ಮುಜುಗರ ಅವ್ರಿಗೆ ಮುಂದೆ
ನಾವು ಜಿಲ್ಲೆಯಲ್ಲಿ 5 MLA ಸೀಟ್ ಹಾಗು MP ಸ್ಥಾನವನ್ನು ಗೆದ್ದು, ಜಿಲ್ಲೆಯನ್ನುಮಾದರಿ ಜಿಲ್ಲೆ ಮಾಡ್ತೇವೆ ಎಂದ್ರು.
ಅಲ್ದೆ ನಾನು ಬಿಜೆಪಿಯಲ್ಲಿ ಶಾಸಕನಾಗಿ ಟಾರ್ಗೇಟ್ ಇಟ್ಟುಕೊಂಡು ಕೆಲಸ ಮಾಡ್ತಿದ್ದೇನೆ. ತಾಲ್ಲೂಕು ಅಭಿವೃದ್ಧಿ ಕನಸು ನೋಡದೇ ರಾಜಕಾರಣಕ್ಕೆ ಬಂದವನು ನಾನು. ಆ ಕನಸು ಜೆಡಿಎಸ್ ನಲ್ಲಿ ಸಾಕಾರ ಆಗದಿದ್ದರಿಂದ ಪಕ್ಷ ಬದಲಾವಣೆ ಮಾಡಿದೆ. ನನ್ನ ಹೋರಾಟದ ಮೂಲಕ ನಮ್ಮ ತಾಲ್ಲೂಕು ಅಭಿವೃದ್ಧಿ ಮಾಡ್ತೇನೆ. ಬೇರೆ ತಾಲ್ಲೂಕಿನ ಶಾಸಕರು ಕೂಡ ಈ ಹೋರಾಟ ಮಾಡಬೇಕು. ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಅನುದಾನ ಮಾಡ್ಸಿದ್ದೇವೆ. ಜಲಧಾರೆಗೆ 1200 ಕೋಟಿ, 4 ತಾಲೂಕುಗಳಾದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರಕ್ಕೆ 600ಕೋಟಿ ರೂ ಅನುದಾನ ಕೊಟ್ಟಿದ್ದೇವೆ. ಸ್ಟೇಡಿಯಂ ಗೆ 10 ಕೋಟಿ ಅನುದಾನ ಕೊಡ್ಸಿದ್ದೇನೆ.ಅಲ್ದೆ 500 ಕೋಟಿಗೆ ರಿಂಗ್ ರೋಡ್ ಮಾಡಿಸಲು ಪ್ಲಾನ್ ಮಾಡ್ತಿದ್ದೇವೆ .ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಆಗಿಸಲು ಪತ್ರ ಬರೆದಿದ್ದೇನೆ, ಅದು ಮಂಡ್ಯದಲ್ಲೆ ಆಗುವುದು. ನಾನು ಜಿಲ್ಲೆಯ ಅಭಿವೃದ್ದಿಗಾಗಿ ಫಾಲೋ ಮಾಡ್ತಿದ್ದೇವೆ ಎಂದರು.
ಇನ್ನು ಜಿಲ್ಲೆಯ ಜೆಡಿಎಸ್ ಶಾಸಕರು ರಾಜಕಾರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. BJP ಗೆ ಹೆಸರು ಬರುತ್ತೆ ಅಂತ ಈಗ ಕಿತಾಪತಿ ರಾಜಕಾರಣ ಮಾಡ್ತಿದ್ದಾರೆ. ಜಿಲ್ಲೆಯ ಈ ಶಾಸಕರಿಗೆ ಈ ಕಿತಾಪತಿ ರಾಜಕಾರಣ ಮಾಡೋದು ಬಿಟ್ರೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ಜೆಡಿಎಸ್ ಶಾಸಕ ರ ವಿರುದ್ದ ಕಿಡಿಕಾರಿ, ಜಿಲ್ಲೆಯ ಅಭಿವೃದ್ದಿಗೆ ಅನುದಾನವನ್ನು ಬಿಜೆಪಿ ಸರ್ಕಾರವೇ ಕೊಡಬೇಕು. ಬಿಜೆಪಿ ಬಳಿ ಅನುದಾನ ಕೇಳಲು ಶಾಸಕರಿಗೆ ಮುಜುಗರ. ಆದ್ರೆ ಅವ್ರು ಹಿಂದುಗಡೆಯಿಂದ ಹೋಗಿ ತರ್ತಿದ್ದಾರೆ, ಅದನ್ನ ಜನರ ಮುಂದೆ ಹೇಳಿಕೊಳ್ತಿಲ್ಲ ಅವ್ರು. ನಮ್ಮ ಸರ್ಕಾರದಿಂದ ಮಂಡ್ಯ ಅಭಿವೃದ್ಧಿಯಾಗ್ತಿದ್ದೆ. ನಾವೆಲ್ಲರು ಮಂಡ್ಯವನ್ನ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗ್ತೇವೆ. ಭಾರತ ಸರ್ಕಾರದ ಹಾಗು ರಾಜ್ಯ ಸರ್ಕಾರದ ಫಂಡ್ ತರ್ತಿವೆ. ಈ MLA ಗಳು ಟೀಕೆ ಟಿಪ್ಪಣಿ ಮಾಡ್ತರೆ, ಬರಲಿ ನಮ್ಮ ಸರ್ಕಾರ ಇದೆ, ಮುಜುಗರ ಏನಿದೆ? ಅನುದಾನ ಕೇಳಲಿ ಬಂದು ನಾವು ಖಂಡಿತ ಸಹಕಾರ ಮಾಡ್ತೇವೆ. ಟೀಕೆ ಟಿಪ್ಪಣಿ ಮಾಡೋದು, ಬಿಜೆಪಿ ಹೆಸರು ಬರುತ್ತೆ ಅಂತ ಕಾಲು ಎಳೆಯುವುದು. ನಾವು ಬೆಳೆದುಕೊಳ್ತೇವೆ, ನೀವು ಟೀಕೆ ಟಿಪ್ಪಣಿ ಮಾಡಿ. ನೆಕ್ಟ್ ಮಂಡ್ಯದಲ್ಲಿ 5 MLA ಸೀಟ್, MP ಸ್ಥಾನವನ್ನು ಗೆದ್ದು, ಮಾದರಿ ಜಿಲ್ಲೆ ಮಾಡ್ತೇವೆ ಎಂದು ಜಿಲ್ಲೆಯ ಜೆಡಿಎಸ್ ಶಾಸಕರ ವಿ ರುದ್ದ ಸಚಿವ ಕೆ.ಸಿ.ನಾರಾಯಣ್ ಗೌಡ ವಾಗ್ದಾಳಿ ನಡೆಸಿ ಹರಿಹಾಯ್ದರು.