ಕಾಸರಗೋಡು ಮೂಲದ ಮಲಯಾಳಂ ನಟಿ ಶಹಾನಾ (20) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೇರಳ ಕೋಝಿಕೋಡ್ ನಲ್ಲಿ ನಟಿ ಶಹಾನಾ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಶಹಾನಾ ಸಾವಿನ ಹಿನ್ನೆಲೆಯಲ್ಲಿ ಆಕೆಯ ಪತಿ ಸಾಜದ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಸಾಜದ್ ಜೊತೆ ವಿವಾಹವಾಗಿದ್ದ ನಟಿ ಶಹಾನಾ, ದಾಂಪತ್ಯ ಕಲಹ ಹಿನ್ನೆಲೆ ಮನನೊಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತ ಶಹಾನಾ ಕನ್ನಡದ ‘ಲಾಕ್ಡೌನ್’ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಶಹಾನಾ ತಾಯಿ ಆಕೆಯ ಪತಿ ಅವಳಿಗೆ ಹಿಂಸೆ ಕೊಡುತ್ತಿದ್ದನೆಂದು ಆರೋಪಿಸಿದ್ದಾರೆ.