ರಿಲಯನ್ಸ್ ಜನರಲ್ ಬಾಡಿ ಮೀಟಿಂಗ್ ಇಂದು ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು. ರಿಲಾಯನ್ಸ್ ಕಂಪನಿಯ ಬಹುನಿರೀಕ್ಷಿತ 45 ನೇ ವಾರ್ಷಿಕ ಸಾಮಾನ್ಯ ಸಭೆ (AGM) ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳನ್ನು ಎತ್ತುವಲ್ಲಿ ವಿಫಲವಾಗಿದೆ. ಹೊಸ ಚಿಂತನೆಯ ಅವಿಷ್ಕಾರಿಕ ಸೂಚನೆಗಳ ಕೊರತೆ ರಿಲಯನ್ಸ್ ಕಂಪನಿಯ ಎಲ್ಲಾ ಉದ್ಯಮಗಳಲ್ಲಿ ಇದೆ ಎನ್ನುವುದು ಹೂಡಿಕೆದಾರರು ರಿಲಾಯನ್ಸ್ ಕಂಪನಿಗಳ ಮೇಲೆ ಭರವಸೆ ಇಡುವಲ್ಲಿ ಹಿಂದೇಟು ಹಾಕಲು ಕಾರಣವಾಯಿತು ಮತ್ತು ಇದರಿಂದ ರಿಲಾಯನ್ಸ್ ಷೇರುಗಳ ಮೌಲ್ಯ ಶೇಕಡಾ 0.7 ರಷ್ಟು ಕಡಿಮೆಯಾಗಿದೆ. ಇದರ ಮುಂದುವರಿದ ಭಾಗವಾಗಿ ಇನ್ನಿತರ ಷೇರುಗಳ ಮೌಲ್ಯದಲ್ಲೂ ಇಳಿಮುಖ ಕಾಣಲಾಯಿತು.
ಕಂಪನಿಯು ಮುಂದಿನ ಎರಡು ತಿಂಗಳಲ್ಲಿ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ಜಿಯೋ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ. ಅಲ್ಲದೆ, ರಿಲಯನ್ಸ್ ರಿಟೇಲ್ ಈ ವರ್ಷ ತಮ್ಮ ಎಫ್‌ಎಂಸಿಜಿ ವ್ಯವಹಾರವನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಮುಕೇಶ್ ಅವರು ತಮ್ಮ ಮಗ ಆಕಾಶ್ ಅಂಬಾನಿ ಟೆಲಿಕಾಂ, ಮಗಳು ಇಶಾ ಅಂಬಾನಿ ರಿಟೇಲ್ ಮತ್ತು ಇನ್ನೊಬ್ಬ ಮಗ ಅನಂತ್ ಅಂಬಾನಿ ನವಶಕ್ತಿ ವರ್ಟಿಕಲ್‌ಗೆ ಸೇರ್ಪಡೆಗೊಳ್ಳುವುದರೊಂದಿಗೆ ತಮ್ಮ ಉತ್ತರಾಧಿಕಾರದ ಯೋಜನೆಯನ್ನು ಪ್ರಕಟಿಸಿದರು.
ಜಾಕ್ಸನ್ ಹೋಲ್‌ನಲ್ಲಿ ಯುಎಸ್ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ತೀಕ್ಷ್ಣ ಹೇಳಿಕೆಯ ನಂತರ ಜಾಗತಿಕ ಹೂಡಿಕೆ ಮನಸ್ಥಿತಿಯೂ ಈ ಹಿಂಜರಿಕೆಗೆ ಕಾರಣವಾಗಿದೆ. ಮುಂಚೂಣಿಯ S&P BSE Sensex 861 ಪಾಯಿಂಟ್‌ಗಳು ಅಥವಾ ಶೇಕಡಾ 1.46 ರಷ್ಟು ಕಡಿಮೆಯಾಗಿ 57,973 ಕ್ಕೆ ಸ್ಥಿರವಾಯಿತು. Nifty 50 ಕೂಡ 246 ಪಾಯಿಂಟ್‌ಗಳು ಅಥವಾ ಶೇಕಡಾ 1.4 ರಷ್ಟು ಕುಸಿದು 17,312 ನಲ್ಲಿ ದಿನದ ವ್ಯವಹಾರವನ್ನು ಮುಗಿಸಿತು.
ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.8 ರಷ್ಟು ಕುಸಿದವು. ವಲಯಗಳಲ್ಲಿ, ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕವು ಕೇವಲ 0.3 ಶೇಕಡಾ ಏರಿಕೆಯಾಗಿದೆ. ಫ್ಲಿಪ್‌ಸೈಡ್‌ನಲ್ಲಿ, ನಿಫ್ಟಿ ಐಟಿ ಸೂಚ್ಯಂಕ (ಶೇ. 3.5) ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕ (ಶೇ. 2 ರಷ್ಟು) ನಷ್ಟಕ್ಕೆ ಕಾರಣವಾಯಿತು.