Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಂತೋಷ್ ಸಾವಿಗೆ ಈಶ್ವರಪ್ಪ ಎಷ್ಟು ಹೊಣೆ…
    ಸುದ್ದಿ

    ಸಂತೋಷ್ ಸಾವಿಗೆ ಈಶ್ವರಪ್ಪ ಎಷ್ಟು ಹೊಣೆ…

    vartha chakraBy vartha chakraಏಪ್ರಿಲ್ 13, 2022Updated:ಏಪ್ರಿಲ್ 13, 2022ಯಾವುದೇ ಟಿಪ್ಪಣಿಗಳಿಲ್ಲ3 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರ ತಲೆದಂಡ ಆಗಬಹುದಾ..?ಅವರು ಸಚಿವ ಸ್ಥಾನ ಕಳೆದುಕೊಳ್ಳಬಹುದಾ? ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನವಾಗಬಹುದಾ..?
    ಇಂಥಾದ್ದೊಂದು ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಆರಂಗೊಂಡಿದೆ.
    ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಅವರ ತಲೆದಂಡವಾಗಿತ್ತು. ಟಿವಿಗಳಿಗೆ ಸಂದರ್ಶನ ನೀಡಿದ್ದ ಗಣಪತಿ, ಬಳಿಕ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅಂದು ಜಾರ್ಜ್ ವಿರುದ್ದ ಹೋರಾಟ ಮಾಡಿದ್ದ ಬಿಜೆಪಿ, ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕಾಂಗ್ರೆಸ್ ಕೂಡಾ ಬಿಜೆಪಿ ವಿರುದ್ಧ ಸಚಿವ ಈಶ್ವರಪ್ಪ ವಿರುದ್ಧ ಹೋರಾಟ ರೂಪಿಸುತ್ತಿದ್ದು ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
    ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ,ಈ ಹೋರಾಟ, ವಾದ-ಪ್ರತಿವಾದಗಳೆಲ್ಲಾ ರಾಜಕೀಯ ಪ್ರೇರಿತವಷ್ಟೇ.. ವಾಸ್ತವವಾಗಿ ಈ ಪ್ರಕರಣದಲ್ಲಿ ಸಾವಿಗೂ ಮುನ್ನ ಗುತ್ತಿಗೆದಾರ ಸಂತೋಷ್ ಪಾಟೀಲ್ ವಾಟ್ಸಾಪ್ ನಲ್ಲಿ ಸಂದೇಶವೊಂದನ್ನು ಕಳುಹಿಸಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ತಾನು ಮಾಡಿದ ಕಾಮಗಾರಿ ಗುತ್ತಿಗೆ ಹಣ ನೀಡಲಿಲ್ಲ ಬಿಲ್ ಪಾವತಿ ಮಾಡಲು ಶೇಕಡಾ 40 ರಷ್ಟು ಕಮೀಷನ್ ಕೊಡುವಂತೆ ತಮ್ಮ ಹಿಂಬಾಲಕರ ಮೂಲಕ ಹೇಳಿಸಿದ್ದರು. ಈ ಎಲ್ಲಾ ವಿದ್ಯಮಾನಗಳಿಂದ ಬೇಸರಗೊಂಡು ಸಾವಿಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
    ಇದನ್ನು ಬಿಟ್ಟರೆ ಬಿಜೆಪಿ ವರಿಷ್ಟರಿಗೆ ಈತ ಬರೆದಿದ್ದ ಪತ್ರ ಹಾಗೂ ಈ ಸಂಬಂಧ ಸಂತೋಷ್ ಪಾಟೀಲ್ ನಡೆಸಿದ ಪತ್ರಿಕಾಗೋಷ್ಟಿ ಬಿಟ್ಟರೆ ಬೇರೆ ಯಾವುದೇ ದಾಖಲೆಗಳಿಲ್ಲ.
    ಇನ್ನು ಈತ ನಡೆಸಿದ್ದಾನೆ ಎನ್ನಲಾದ ರಸ್ತೆ, ಒಳಚರಂಡಿ ಮೊದಲಾದ 108 ಕಾಮಗಾರಿಗಳು ಯಾವುವು..? ಇದಕ್ಕೆ ಯಾವಾಗಾ ಯೋಜನಾ‌ ವರದಿ ತಯಾರಾಗಿದೆ…? ಇವುಗಳ ಅಂದಾಜು ವೆಚ್ಚ ಎಷ್ಟು..? ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ‌ ನೀಡಿದೆಯಾ..? ಕಾಮಗಾರಿಗಳ ಟೆಂಡರ್ ಆಗಿದೆಯಾ…? ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿದೆಯಾ…? ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಇಲ್ಲಾ ಎನ್ನುವುದಾಗಿದೆ.
    ಹಾಗಾದರೆ ಸಚಿವ ಈಶ್ವರಪ್ಪ ಎನಾದರೂ ಈ ಕಾಮಗಾರಿ ಮಾಡುವಂತೆ ಪತ್ರ ನೀಡಿದ್ದರಾ..? ಅದೂ ಇಲ್ಲ…ಹೋಗಲಿ ಈಶ್ವರಪ್ಪ ಕಚೇರಿಯಲ್ಲಿನ ಯಾವುದಾದರೂ ಸಿಬ್ಬಂದಿ ನೀಡಿದ್ದಾರಾ…? ಅದು ಕೂಡಾ ಇಲ್ಲ.ಹೀಗೆ ಸಚಿವ ಈಶ್ವರಪ್ಪ ಮತ್ತವರ ಆಪ್ತರು ಹೀಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಯಾರೊಬ್ಬರು ಈ ಕಾಮಗಾರಿ ಸಂಬಂಧ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ. ಈ ಕುರಿತು ಯಾವುದೇ ಲಿಖಿತ ದಾಖಲೆಗಳಿಲ್ಲ.ಹೀಗಾದರೆ ಆರೋಪ ನಿಲ್ಲುವುದೆಲ್ಲಿ.
    ಸಂತೋಷ್ ಪಾಟೀಲ್ ಈ ಹಿಂದೆ ಲಂಚದ ಆರೋಪ ಮಾಡಿದಾಗಲೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ ನೀಡಿ, ಈ ಕಾಮಗಾರಿಗೂ ಇಲಾಖೆಗೂ ಸಂಬಂಧವಿಲ್ಲ.ಇಲಾಖೆಯಿಂದ ಯಾರಿಗೂ ಈ ರೀತಿಯ ಕಾಮಗಾರಿ ಕೈಗೊಳ್ಳಲು ಸೂಚಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
    ಆದರೆ, ಇದೀಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದಕ್ಕೆ ಸಚಿವ ಈಶ್ವರಪ್ಪ ಕಾರಣ ಎಂದು ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದಾರೆ.ಇದು ಹಾಗೂ ಹಿಂದಿನ ಘಟನಾವಳಿ ಆಧರಿಸಿ ಮೃತರ ಸೋದರ ನೀಡಿರುವ ದೂರು ಆಧರಿಸಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಇವೆಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು. ಆದರೆ ತನಿಖೆ ನಡೆಸುವ ಸಂಸ್ಥೆಗಳು, ನ್ಯಾಯಾಲಯ ಸಾಕ್ಷಿಗಳು, ದಾಖಲೆ ಹಾಗೂ ಪೂರಕ ಅಂಶಗಳನ್ನು ಪರಿಗಣಿಸುತ್ತವೆ. ಆದರೆ ಈ ಪ್ರಕರಣದಲ್ಲಿ ಈ ಹಿಂದೆ ನಡೆದ ಪೊಲೀಸ್ ಅಧಿಕಾರಿ ಗಣಪತಿ ಪ್ರಕರಣದಲ್ಲೂ ಬಹುತೇಕ ಇಂತಹದೆ ಸಾಮ್ಯತೆಯಿತ್ತು.ಅಂದು ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡಿ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದಿದ್ದನ್ನು ಬಿಟ್ಟರೆ ಬೇರೇನೂ‌ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ಮಾಡಿದ ಯಾವುದೇ ಆರೋಪಗಳು ತನಿಖಾ ಸಂಸ್ಥೆ ಹಾಗು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ರಾಜಕೀಯ ಕಾರಣಕ್ಕಾಗಿ ಆರೋಪಗಳನ್ನೆದುರಿಸಿದ ಕೆ.ಜೆ.ಜಾರ್ಜ್ ಆರೋಪ ಮುಕ್ತರಾಗಿದ್ದು ಇದೀಗ ಇತಿಹಾಸ.
    ಈಗ ಬಹುತೇಕ ಇದಕ್ಕೆ ಸಾಮ್ಯತೆಯಿರುವಂತೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣವಿದೆ.
    ರಾಜಕೀಯ ಹಾಗೂ ವಾಟ್ಸಾಪ್ ಸಂದೇಶ ಹೊರತು ಪಡಿಸಿ ಯಾವ ದೃಷ್ಟಿಯಿಂದ ನೋಡಿದರೂ ಈ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ.ಯಾವೊಂದು ದಾಖಲೆಗಳು ಇದಕ್ಕೆ ಪೂರಕವಾಗಿ ಮೇಲ್ನೋಟಕ್ಕೆ ಲಬ್ಯವಿಲ್ಲ.ಹಾಗೆಂದ ಮಾತ್ರಕ್ಕೆ ಇಲ್ಲಿ ಸಚಿವ ಈಶ್ವರಪ್ಪ ತಪ್ಪಿತಸ್ಥರಲ್ಲ ಎಂದು ಹೇಳುತ್ತಿಲ್ಲ.
    ಇಲ್ಲೊಂದು ಅಮೂಲ್ಯ ಜೀವ ಪ್ರಾಣ ಕಳೆದುಕೊಂಡಿದೆ.ಇದರಿಂದ ಆತನ ಕುಟುಂಬ ಅನಾಥವಾಗಿದೆ.ಈ ನಷ್ಟವನ್ನು ಮೃತರ ಕುಟುಂಬಕ್ಕೆ ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾವಿಗೂ ಮುನ್ನ ಆತ ಅನುಭವಿಸಿದ ಮಾನಸಿಕ, ದೈಹಿಕ‌ ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.ಯಾಕೆಂದರೆ ಮೃತ ಸಂತೋಷ್ ಒಂದು ದಿನ ಆರೋಪ ಮಾಡಿ ಮತ್ತೊಂದು ದಿನ ಮೃತ ಪಟ್ಟಿಲ್ಲ, ತಿಂಗಳ ಕಾಲ ಆರೋಪ ಮಾಡಿದರು.ಈ ಆರೋಪದ ಹಿನ್ನೆಲೆಯಲ್ಲಿ ಈಶ್ವರಪ್ಪ ಕೋರ್ಟ್ ಮೊರೆ ಕೂಡಾ ಹೊಕ್ಕಿದ್ದಾರೆ.
    ಒಟ್ಟಾರೆ ಯಾವುದೇ ಯೋಜನೆ,ಅನುಮೋದನೆ, ಟೆಂಡರ್ ಇಲ್ಲದೆ ಕಾಮಗಾರಿ ಮಾಡುವ ವ್ಯವಸ್ಥೆ ಹೇಗೆ ರೂಪಿತವಾಯಿತು.ಇದರ ಹಿಂದಿರುವ ವ್ಯಕ್ತಿಗಳಾರು..ಈಶ್ವರಪ್ಪ ಕಚೇರಿ, ಮನೆಯಲ್ಲಿ ಇಂತಹ ವ್ಯವಸ್ಥೆ ಇದೆಯಾ ಎಂಬೆಲ್ಲಾ ಅಂಶಗಳ ಬಗ್ಗೆ ಅತ್ಯಂತ ಆಳಕ್ಕಿಳಿದು ತನಿಖೆ ಮಾಡಬೇಕು ಕೆಟ್ಟು ಹೋಗಿರುವ ವ್ಯವಸ್ಥೆಗೆ ಮುಲಾಮು ಹಚ್ಚಿ ಸರಿದಾರಿಗೆ ತರಬೇಕಿದೆ.
    ಇವೆಲ್ಲಾ ಅಂಶಗಳು ವಾದ-ಪ್ರತಿವಾದಕ್ಕೆ ಅವಕಾಶ ಕಲ್ಪಿಸಲಿವೆ ಇದಕ್ಕಿಂತ ಹೊರತಾಗಿ‌ ನೈತಿಕತೆಯ ಪ್ರಶ್ನೆ ಪ್ರಮುಖವಾಗಲಿದೆ. ಜನ ಸಾಮಾನ್ಯರು ಹೇಳುವುದು ಬಿಜೆಪಿಯೆಂದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳಲ್ಲಿ ನಂಬಿಕೆಯಿಟ್ಟವರು.ಶ್ರೀರಾಮ ಕೇವಲ ಒಂದು ಆರೋಪ ಬಂದ ಮಾತ್ರಕ್ಕೆ ತನ್ನ ಪತ್ನಿಯನ್ನೇ ಕಾಡಿಗೆ ಕಳುಹಿಸಿ ನೈತಿಕತೆಯ ಪಾಠ ಮಾಡಿದ ವ್ಯಕ್ತಿತ್ವ . ಇಂತಹ ವ್ಯಕ್ತಿತ್ವವನ್ನು ಆರಾಧಿಸುವ ಈಶ್ವರಪ್ಪ ನೈತಿಕತೆ‌ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ತೊರೆಯಬಾರದೇಕೆ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ‌ ಈಗ ಉತ್ತರ ಹೇಳಬೇಕಾದ್ದು ಈಶ್ವರಪ್ಪ ಮಾತ್ರ

    #eshwarappa Politics
    Share. Facebook Twitter Pinterest LinkedIn Tumblr Email
    Previous Articleಈಶ್ವರಪ್ಪ ವಜಾಕ್ಕೆ ಪಟ್ಟು
    Next Article ಈಶ್ವರಪ್ಪ ಪ್ರಕರಣ-ಸಿಐಡಿ ತನಿಖೆ
    vartha chakra
    • Website

    Related Posts

    Electionಗೆ ಮುನ್ನವೇ DK ವ್ಯೂಹ ಛಿದ್ರ

    ಮಾರ್ಚ್ 21, 2023

    Facebookನಿಂದ ಮನೆಗೆ ಹೊರಟ10000 ಮಂದಿ #meta #jobs

    ಮಾರ್ಚ್ 15, 2023

    ರಾಮನಗರದಲ್ಲಿ ನಿಖಿಲ್ ಸ್ಪರ್ಧೆ Doubt! #jds #kumaraswamy #ramanagara

    ಮಾರ್ಚ್ 15, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    BJP ಸೇರಿದ ರೋಷನ್ ಬೇಗ್! #bjp #karnataka #congressparty #elections

    ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ

    Electionಗೆ ಮುನ್ನವೇ DK ವ್ಯೂಹ ಛಿದ್ರ

    BJP ಸಿಎಂ ಅಭ್ಯರ್ಥಿ ಯಾರು?

    About
    About

    We're social, connect with us:

    Facebook Twitter YouTube
    Software Training
    Recent Posts
    • BJP ಸೇರಿದ ರೋಷನ್ ಬೇಗ್! #bjp #karnataka #congressparty #elections ಮಾರ್ಚ್ 21, 2023
    • ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ ಮಾರ್ಚ್ 21, 2023
    • Electionಗೆ ಮುನ್ನವೇ DK ವ್ಯೂಹ ಛಿದ್ರ ಮಾರ್ಚ್ 21, 2023
    • BJP ಸಿಎಂ ಅಭ್ಯರ್ಥಿ ಯಾರು? ಮಾರ್ಚ್ 20, 2023
    • ರಮೇಶ್ ಜಾರಕಿಹೊಳಿಗೆ BJP ಗೇಟ್ ಪಾಸ್? ಮಾರ್ಚ್ 19, 2023
    • ಆರೋಗ್ಯ ನೌಕರರ ಮೇಲೆ ESMA ಬ್ರಹ್ಮಾಸ್ರ್ತ ಮಾರ್ಚ್ 19, 2023
    • ಹಿರಿಯೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪೂರ್ಣಿಮಾ ಶ್ರೀನಿವಾಸ್ ಕಣಕ್ಕಿಳಿಯಲಿದ್ದಾರೆ ಮಾರ್ಚ್ 18, 2023
    • ದಾರಿ ಕಾಣದಾದ ಸಿದ್ದರಾಮಯ್ಯ #siddaramaiah #congress #kharge ಮಾರ್ಚ್ 18, 2023
    • Ola ಮತ್ತು Uber ಗೆ ಸೆಡ್ಡು ಹೊಡೆದ ನಮ್ಮ ಯಾತ್ರಿ ಮಾರ್ಚ್ 18, 2023
    • ಬಯಲಾಯ್ತು Express ಹೆದ್ದಾರಿ ‌ಬಣ್ಣ! ಮಾರ್ಚ್ 18, 2023
    Popular Posts

    BJP ಸೇರಿದ ರೋಷನ್ ಬೇಗ್! #bjp #karnataka #congressparty #elections

    ಮಾರ್ಚ್ 21, 2023

    ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ

    ಮಾರ್ಚ್ 21, 2023

    Electionಗೆ ಮುನ್ನವೇ DK ವ್ಯೂಹ ಛಿದ್ರ

    ಮಾರ್ಚ್ 21, 2023
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    A free roll of viewpoints in a political interview.
    H Vishwanath in Bicchu Maatu #jds #congressparty #kpcc #dkshivakumar #mysore #mysuru #siddaramaiah
    Subscribe