ಕರ್ನಾಟಕ : ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಬಿಜೆಪಿ ಶಾಸಕರಿಗೆ ಹೈಕಮಾಂಡ್ ತಣ್ಣೀರೆರಚಿದೆ. ಸದ್ಯಕ್ಕೆ ಈ ಸಂಬಂಧ ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ ಹೀಗಾಗಿ ಈ ಕುರಿತ ಚರ್ಚೆ ಅನಗತ್ಯ ಎಂದು ಹೇಳಿದೆ.
ಸಂಪುಟ ಸರ್ಜರಿ ಪ್ರಕ್ರಿಯೆ ಕುರಿತಂತೆ ತಮ್ಮ ಜೊತೆ ಚರ್ಚೆ ನಡೆಸಬೇಕಿದೆ ಅದಕ್ಕಾಗಿ ಸಮಯ ಕೊಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.ಅದರೆ, ಇಲ್ಲಿಯವರೆಗೆ ಅವರಿಂದ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.ಆದರೆ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೈಕಮಾಂಡ್ ಸೂಚನೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ. ವರಿಷ್ಟರು ಸಂಪುಟ ಸರ್ಜರಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರಿಗೆ ರಾಜ್ಯ ಸರ್ಕಾರದ ವರ್ಚಿಸ್ಸಿನ ಬಗ್ಗೆ ಚಿಂತೆಯಿದೆ ಹೀಗಾಗಿ ಸರ್ಕಾರದ ವರ್ಚಸ್ಸಿ ವೃದ್ಧಿಸುವ ಕಡೆ ಗಮನ ಹರಿಸಿ ಅಲ್ಲಿಯವರೆಗೆ ಸಂಪುಟ ಸರ್ಜರಿಯ ಚರ್ಚೆಯೇ ಬೇಡ ಎಂದು ಹೇಳಿದರೆನ್ನಲಾಗಿದೆ.
ಈ ನಡುವೆ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ದೆಹಲಿ ಪ್ರವಾಸದಲ್ಲಿ ಯಾವುದೇ ಕೇಂದ್ರ ಸಚಿವರು ಹಾಗೂ ಪಕ್ಷದ ನಾಯಕರನ್ನು ಭೇಟಿ ಮಾಡುವುದಿಲ್ಲ. ಆದರೆ ಅಮಿತ್ ಷಾ 3ಕ್ಕೆ ರಾಜ್ಯಕ್ಕೆ ಬರುತ್ತಾರೆ. ಅವಾಗ ಅವರಿಂದ ಸಮಯ ತಗೊಂಡು, ಸಂಪುಟದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಈಗಾಗಲೇ ಖಾಲಿ ಇರುವ ಸಚಿವ ಸ್ಥಾನ ತುಂಬುವ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ಹೀಗಾಗಿ ಅಮಿತ್ ಷಾ ಅವರು ಬೆಂಗಳೂರಿಗೆ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
Previous Articleಕೆ ಆರ್ ಎಸ್ ಡ್ಯಾಮ್ ನೀರಿನ ಕುಸಿತ
Next Article ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ರದ್ದು..