ಬೆಂಗಳೂರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕೇಳಿ ಬರುತ್ತಿರುವ ಈ ಹೇಳಿಕೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಹಿರಿಯ ಶಾಸಕ ಶಾಸಕ ಎಚ್.ಸಿ. ಬಾಲಕೃಷ್ಣ ಬಾಯಿ ಚಪಲಕ್ಕೆ ಮಾತನಾಡಬೇಡಿ ಎಂದು ಹೇಳಿದ್ದಾರೆ.
ಸುದ್ದಿಗಾರದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು, ತಮ್ಮ ಬಾಯಿ ಚಪಲ ಹಾಗೂ ತೀಟೆಗೋಸ್ಕರ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುತ್ತಾರೆ. ಶಾಸಕರು ಸಹ ಹಾದಿಬೀದಿಯಲ್ಲಿ ಹೋಗುವವರು ಮಾತನಾಡುವಂತೆ ಮಾತನಾಡಬಾರದು ಎಂದು ಮನವಿ ಮಾಡುವೆ ಎಂದು ಹೇಳಿದರು.
ಪಕ್ಷದ ನಾಯಕರು ಕಾರ್ಯಕರ್ತರ ಅಭಿಪ್ರಾಯಕ್ಕೆ ಗೌರವ ಕೊಡಬೇಕು. ಅವರ ಮನಸ್ಸಿಗೆ ನೋವಾಗದಂತೆ, ಧಕ್ಕೆಯಾಗದಂತೆ ಮುಖಂಡರು ನಡೆದುಕೊಳ್ಳಬೇಕು ಎಂದರು.
ನಾವು ಯಾರನ್ನೂ ಮುಖ್ಯಮಂತ್ರಿ ಮಾಡೋಕೆ ಆಗಲ್ಲ, ಇಳಿಸೋಕು ಆಗಲ್ಲ. ನಮ್ಮದೇ ಪಕ್ಷದ ತತ್ವ- ಸಿದ್ದಾಂತ ಹಾಗೂ ಹೈಕಮಾಂಡ್ ಇದೆ. ಸಿ.ಎಂ ಸ್ಥಾನದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ.
ಅದು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
Previous ArticleDCM ಹುದ್ದೆಯ ಬಗ್ಗೆ ಮಾತನಾಡುವುದು Nonsense.
Next Article ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ.


1 ಟಿಪ್ಪಣಿ
Förvandla ditt tur till förmögenhet på Betano Casino. Nya medlemmar får upp till €500 bonus och free spins på toppslots. Spela https://betanogame.org/sv/mobile-app/ när som helst, var som helst med vår smidiga mobilapp. Spänningen i segern är bara ett klick bort.