ಹಾವೇರಿ.
ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿರುವಂತೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಬಿಜೆಪಿ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದೆ
ಯಾಸೀರ್ ಖಾನ್ ಪಠಾಣ್ ಒರ್ವ ರೌಡಿ ಶೀಟರ್ ಈತನ ವಿರುದ್ಧ ಹಲವು ಅಪರಾಧ ಪ್ರಕರಣಗಳಿವೆ. ಆದರೂ, ಈತ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ಮರೆಮಾಚಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹಲವು ಕೇಸ್ಗಳು ಇವೆ. ಆದ್ರೆ,ಅವರು ಅಫಿಡೆವಿಟ್ನಲ್ಲಿ ತಿಳಿಸಿಲ್ಲ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಚುನಾವಣೆಗೆ ನಾವು ಅರ್ಜಿ ಸಲ್ಲಿಸ್ತೇವೆ. ಕೂಡಲೇ ಚುನಾವಣಾಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿ ಎಂದು ಆಗ್ರಹಿಸಿದ್ದರು.
ಕೇಂದ್ರ ಮಂತ್ರಿ ಮಾಡಿದ ಈ ಆರೋಪ ಚುನಾವಣೆ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಆಧರಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ್ದರು. ಆದರೆ,ಈ ವಿಷಯವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸುಳ್ಳು ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ.
ಯಾಸೀರ್ ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಪ್ರಕರಣದ ಬಗ್ಗೆ ಸ್ವತಃ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಇದರೊಂದಿಗೆ ಪ್ರಹ್ಲಾದ್ ಜೋಷಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇಲ್ಲ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ
Previous Articleಮಹಿಳಾ ಆರೋಪಿಗಳನ್ನು ಮಂಚಕ್ಕೆ ಕರೆದರಾ ಪೊಲೀಸರು..
Next Article ಚುರುಕಾದ ನಕ್ಸಲರು.


3 ಪ್ರತಿಕ್ರಿಯೆಗಳು
Porta il tuo gioco al livello successivo con Betano Casino https://betanogame.org/it/. Prendi un fantastico bonus di benvenuto da €500 e tuffati in centinaia di giochi premium. Che tu ami le slot, il poker o le scommesse sportive, abbiamo tutto per te. Unisciti al cerchio dei vincitori oggi.
Mostbet te dГЎ o empurrГЈo perfeito para viver grandes emoГ§Гµes – https://mostbetpt.pro/ , Mostbet – cassino feito para quem quer sentir a emoГ§ГЈo de verdade .
One spin One chance One legendary story — yours – https://clobetasolbuy.com , Play like the universe already said yes .