ಬೆಂಗಳೂರು,ಸೆ.1- ದಂಪತಿಯೊಬ್ಬರಿಗೆ 200 ಕೋಟಿ ವಂಚನೆ ಮಾಡಿರುವ ಆರೋಪದಲ್ಲಿ ಜೈಲು ಪಾಲಾಗಿರುವ ನಗರದ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿರುವುದು ಜಾರಿ ನಿರ್ದೇಶನಾಲಯ(ಇಡಿ) ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ನಟಿ ಜಾಕ್ವೆಲಿನ್ ಹಣಕ್ಕಾಗಿಯೇ ಸುಕೇಶ್ ಸ್ನೇಹ ಬೆಳೆಸಿದ್ದು, ಇಲ್ಲದೇ ಹೋದರೆ ಈ ಪ್ರಮಾಣದ ದುಬಾರಿ ಗಿಫ್ಟ್ ಗಳನ್ನು ಕೊಡುವುದಕ್ಕೆ ಹೇಗೆ ಸಾಧ್ಯ? ಸುಕೇಶ್ ಬಗ್ಗೆ ಎಲ್ಲವೂ ತಿಳಿದಿದ್ದರೂ, ಗಿಫ್ಟ್ ಗಳನ್ನು ನಿರಾಕರಿಸದೇ ಪಡೆದಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಬಗ್ಗೆ ಇದೊಂದು ದುಡ್ಡಿಗಾಗಿ ನಡೆದಿರುವ ಸ್ನೇಹ ಎಂದು ಉಲ್ಲೇಖಿಸಲಾಗಿದೆ.
ಕೋರ್ಟಿಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಕೋರ್ಟ್ ಸಮನ್ಸ್ ನೀಡಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ದಿನಾಂಕವನ್ನೂ ನಿಗಧಿ ಮಾಡಲಾಗಿದೆ. ಹಾಗಾಗಿ ಜಾಕ್ವೆಲಿನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುತಿಸಿದ ಅಷ್ಟೂ ವಸ್ತುಗಳನ್ನು ನಾನು ನನ್ನ ಸ್ವಂತ ದುಡಿಮೆಯಿಂದ ತಂದಿದ್ದು ಎಂದು ಜಾಕ್ವೆಲಿನ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಸುಕೇಶ್ ತಮಗೆ ಯಾವುದೇ ಗಿಫ್ಟ್ ನೀಡಿಲ್ಲವೆಂದು ಹೇಳಿದ್ದಾರೆ.
Previous Articleಕರ್ನಾಟಕಕ್ಕೆ ಉತ್ತರಪ್ರದೇಶ ಮಾದರಿಯಂತೆ
Next Article ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ