ಪಾಂಡವಪುರ ತಾಲ್ಲೂಕಿನ ಚಿನಕುರಳಿ ಎಸ್.ಟಿ.ಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬರು ಬುಧವಾರ ದಿನದಂದು ಮದುವೆ ದಿನವೇ, ತಾಳಿ ಕಟ್ಟಿಸಿಕೊಂಡು, ಆರತಕ್ಷತೆ ಮುಗಿಸಿಕೊಂಡು, ಮಧ್ಯಾಹ್ನದ ವೇಳೆಗೆ ಬಿ.ಕಾಂ ಪರೀಕ್ಷೆಗೆ ಹಾಜರಾಗಿ, ಪರೀಕ್ಷೆ ಬರೆದು, ಮಾದರಿ ವಿದ್ಯಾರ್ಥಿಯಾಗಿ, ವಿದ್ಯಾಬ್ಯಾಸವೂ ಮುಖ್ಯ, ದಾಂಪತ್ಯ ಜೀವನವೂ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪಾಂಡವಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ನಿವಾಸಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿರುವ ಎಸ್.ಟಿ.ಜಿ ಶಿಕ್ಷಣ ಸಂಸ್ಥೆಯಲ್ಲಿ ಬಿ.ಕಾಂ ಪ್ರಥಮ ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದು, ಮೇ.11 ರಂದು ಡಿಜಿಟಲ್ ವಿಷಯಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ ನೆಯ ನಿಗಧಿಯಾಗಿತ್ತು.
ಇದೇ ದಿನದಂದು ವಿದ್ಯಾರ್ಥಿ ಐಶ್ವರ್ಯ ಅವರ ವಿವಾಹವೂ ನಿಗದಿಯಾಗಿತ್ತು. ಪೋಷಕರು ಹಾಗೂ ಹಿರಿಯರ ಸಹಕಾರದೊಂದಿಗೆ ಮಧು ಮಗಳಾಗಿದ್ದ ಐಶ್ವರ್ಯ ಅವರು, ತಮ್ಮ ವಿವಾಹ ದಿನದಂದು ಬೆಳಗ್ಗೆ ಮಹೂರ್ತ ಮುಗಿಸಿ, ನಂತರ ಆರತಕ್ಷತೆಯನ್ನೂ ಮುಗಿಸಿ, ತಕ್ಷಣ ಮಧ್ಯಾಹ್ನ 2 ಗಂಟೆಗೆ ಒಳಗೆ ಪಾಂಡವಪುರ ತಾಲ್ಲೂಕಿನ ಎಸ್.ಟಿ.ಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಿ.ಕಾಂ ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾಗುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ವಿದ್ಯಾರ್ಥಿ ಐಶ್ವರ್ಯ ಅವರು ಇಂತಹ ನಿರ್ಧಾರಕ್ಕೆ ಅತ್ತೆ, ಮಾವ, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ, ಎನ್ನುವ ಮಾತಿಗೆ ಸಾಕ್ಷಿಯಾಗಿದೆ. ಶಿಕ್ಷಣವೇ ಜೀವನದ ಅಸ್ತ್ರ ಎಂಬುದು ಸಾಬೀತುಪಡಿಸಿದ್ದಾರೆ ವಿದ್ಯಾರ್ಥಿನಿ ಐಶ್ವರ್ಯ.