ಬೆಂಗಳೂರು,ಆ.29-ಚಿನ್ನದ ತಂತಿಗೆ ರೋಡಿಯಂ ಲೇಪಿಸಿ ಕಳ್ಳ ಸಾಗಾಟ ಯತ್ನ ನಡೆಸಿದ ಪ್ರಯಾಣಿಕನೊಬ್ಬ ಕಂದಾಯ ಗುಪ್ತಚಾರ ನಿರ್ದೇಶನಾಲಯದ(ಡಿಆರ್ ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಾನೆ.
ಕಳೆದ ಆ. 27 ರಂದು ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಮೇಲೆ ಸಂಶಯ ವ್ಯಕ್ತವಾದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಕಳ್ಳ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಟ್ರಾಲಿ ಬ್ಯಾಗ್ನಲ್ಲಿ ಮರೆಮಾಚಿ ಚಿನ್ನ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ 30,60,750 ಮೌಲ್ಯದ 583 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.
Previous Articleತೆಲಂಗಾಣ ಮೂಲದ ಶಿಕ್ಷಕ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಾ ಸಿಕ್ಕಿ ಬಿದ್ದ
Next Article ಅತ್ತೆ, ಪತ್ನಿ, ಮಗಳ ಕೊಲೆಗೆ ಯತ್ನಿಸಿದ ಪತಿರಾಯ..