ಚೆನ್ನೈ: ಹೊಟ್ಟೆಪಾಡಿಗಾಗಿ ಮಹಿಳೆಯಯೊಬ್ಬರು ಒಂದೆರಡು ವರ್ಷವಲ್ಲ, ಬರೋಬ್ಬರಿ ಮೂರು ದಶಕಗಳ ಕಾಲ ಗಂಡಸಿನಂತೆ ಬದುಕಿದ ವಿಷಯ ಬೆಳಕಿಗೆ ಬಂದಿದೆ.
ಮದುವೆಯಾದ 15 ದಿನಕ್ಕೆ ಗಂಡನನ್ನು ಕಳೆದುಕೊಂಡ ಪೇಚಿಯಮ್ಮಳ್‌ಗೆ ಆಗಿನ್ನೂ 20 ವರ್ಷ. ಗರ್ಭಿಣಿಯಾದ ಆಕೆ ಹೆಣ್ಣು ಮಗುವಿಗೂ ಜನ್ಮ ನೀಡುತ್ತಾಳೆ. ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿ ಹೊರಟಾಗ ಒಂಟಿ ಮಹಿಳೆ ಎಂದು ಕೆಟ್ಟ ದೃಷ್ಟಿ ಬೀರಿದವರೇ ಅಧಿಕ. ಅದರಿಂದಾಗಿ ತನ್ನ ತಲೆಗೂದಲನ್ನು ಕತ್ತರಿಸಿಕೊಂಡು, ಲುಂಗಿ ಧರಿಸಿ ಗಂಡಸಿನ ರೀತಿ ಕಾಣಿಸಿಕೊಂಡು ‘ಮುತ್ತು ‘ ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ಹೋಟೆಲ್, ಪೈಂಟಿಂಗ್, ಟೀ ಶಾಪ್ ಸೇರಿದಂತೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ ಹಣ ಸಂಪಾದಿಸಿ ಮಗಳನ್ನು ಸಾಕಿದ್ದಾರೆ.
ಮುತ್ತು ಮಾಸ್ಟರ್ ಎಂದೇ ಕರೆಸಿಕೊಳ್ಳುವ ಈಕೆ ಗಂಡಸಿನ ವೇಷ ಹಾಕಿದ್ದರಿಂದ ಕೆಲಸದ ಜಾಗದಲ್ಲಿ ನನಗೆ ಸುರಕ್ಷತೆಯನ್ನು ಕೊಟ್ಟಿತು. ಮಗಳ ಒಳಿತಿಗಾಗಿ ನಾನು ಆರಿಸಿಕೊಂಡ ದಾರಿ ನನಗೆ ಸರಿ ಎನಿಸಿತು ಎಂದು ಹೇಳಿದ್ದಾರೆ.
ಹೊಟ್ಟೆಪಾಡಿಗಾಗಿ 30 ವರ್ಷ ಗಂಡಸಿನಂತಿದ್ದ ಮಹಿಳೆ!
Previous Articleಗ್ಯಾನ್‌ವಾಪಿ ಮಸೀದಿಯಲ್ಲಿ ನಂದಿ ವಿಗ್ರಹ, ಶಿವಲಿಂಗ ಪತ್ತೆ
Next Article ಫ್ಯಾಟ್ ಸರ್ಜರಿ ವೇಳೆ ನಟಿ ಚೇತನಾ ರಾಜ್ ಸಾವು!