ಬೆಂಗಳೂರು.ಫೆ,18:
ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆಯನ್ನು ನಿವಾರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಇವರಿಗೆ ವಿತರಿಸಲು ನೀಡಲಾಗಿದ್ದ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕುತ್ತಿದ್ದ ಜಾಲವನ್ನು ಹುಬ್ಬಳ್ಳಿ- ಧಾರವಾಡ ಪೊಲೀಸರು ಭೇದಿಸಿದ್ದಾರೆ
ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಳೇಗಬ್ಬೂರಿನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿದ್ದಾರೆ.
ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋಧಿ, ರವಾ, ಅಕ್ಕಿ, ಹಾಲಿನಪುಡಿ, ಬೆಲ್ಲ, ಉಪ್ಪಿಟ್ಟಿನ ಮಸಾಲಾ ಪುಡಿ, ಸಾಂಬಾರ ಮಸಾಲಾ ಪುಡಿ, ಸಕ್ಕರೆ, ಕಡ್ಲೆಬೆಳೆ, ಹೆಸರುಕಾಳು ಸೇರಿದಂತೆ 17 ಬಗೆಯ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಸರ್ಕಾರದಿಂದ ಉಚಿತವಾಗಿ ಪೂರೈಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ, ಅಲ್ಲಿಂದ ಬೇರೆಡೆಗೆ ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕಮಲವ್ವ ಬೈಲೂರ ಅವರು ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದಾಗ ಪೌಷ್ಟಿಕ ಆಹಾರಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಅಂಗನವಾಡಿ ಕಾರ್ಯಕರ್ತೆಯರಾದ ಶಮಿಮಾಬಾನು ಮುಜಾವರ, ಶಮಿಮಾಬಾನು ದಾರುಗಾರ, ಬೇಬಿಆಯಿಶಾ ಕಾರಿಗಾರ, ರೇಷ್ಮಾ ವಡ್ಡೊ, ಶಾಹೀನಾ ಚಕ್ಕೇಹಾರಿ, ಪೈರೋಜಾ ಮುಲ್ಲಾ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ ಸೇರಿದಂತೆ ಗೋದಾಮಿನ ಮಾಲೀಕ ಮೊಹ್ಮದ್‌ಗೌಸ್ ಖಲೀಪಾ, ಬಾಡಿಗೆದಾರ ಗೌತಮಸಿಂಗ್ ಠಾಕೂರ ಸೇರಿ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು
ಇವರಿಂದ 4 ಲಕ್ಷ ಮೌಲ್ಯದ 329 ಚೀಲಗಳಲ್ಲಿರುವ 4.84 ಟನ್ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಾಗೂ 3 ಲಕ್ಷ ಮೌಲ್ಯದ ಬುಲೆರೊ ವಾಹನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಪ್ರಮುಖ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
Previous Articleಬೇಸಿಗೆಗೆ ಇಂಧನ ಮಂತ್ರಿ ಜಾರ್ಜ್ ಪ್ಲಾನ್ ಗೊತ್ತಾ
Next Article ಕೊನೆಗೂ ಪತ್ತೆಯಾಯಿತು ಕದ್ದ ಚಿನ್ನ


1 ಟಿಪ್ಪಣಿ
Diversify your evening with thrilling tournaments. crowns coins ensures secure transactions and fast payouts. Join and hit the jackpot!