ಬೆಂಗಳೂರು : ಸರ್ಕಾರದ ಕೆಲಸ ದೇವರ ಕೆಲಸ ಇದು ರಾಜ್ಯದ ಆಡಳಿತದ ಕೇಂದ್ರ ಕಚೇರಿ ವಿಧಾನಸೌಧದ ಹೆಬ್ಬಾಗಿಲ ಮೇಲೆ ಹಾಕಲಾಗಿರುವ ಬರಹ.. ಇದರರ್ಥ ಸರ್ಕಾರದ ಕೆಲಸವನ್ನು ಯಾವುದೇ ಬೇಧ ಬಾವವಿಲ್ಲದೆ, ಪಕ್ಷಪಾತ ಮಾಡದೆ ದೇವರಿಗೆ ಮಾಡುವ ಸೇವೆ ಎಂಬಂತೆ ಮಾಡಬೇಕು ಎನ್ನುವುದಾಗಿದೆ. ಇಂತಹ ಸರ್ಕಾರಿ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುವುದು ಅಧಿಕಾರಿಗಳು ಈ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿರುವುದು ಹಿರಿಯ ಅಧಿಕಾರಿಗಳು.ಈ ಅಧಿಕಾರಿಗಳ ನಡುವೆ ಸಮನ್ವಯವಿಲ್ಲದೆ ಜನ ಸಾಮಾನ್ಯರ ಕೆಲಸದ ಕಡತಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ.
ಇದು ಎಲ್ಲಿ ಅಂತಿರಾ.. ಅದು ಆಡಳಿತ ಯಂತ್ರದ ಪ್ರಮುಖ ವಿಭಾಗವಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನಡುವೆ ಕ್ಷಲ್ಲುಕ ಕಾರಣಕ್ಕೆ ಉಂಟಾದ ಮನಸ್ತಾಪ ಇದೀಗ ದೊಡ್ಡ ಮಟ್ಟಕ್ಕೆ ಸಾಗಿದೆ.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಬರುವ ಯಾವುದೇ ಕಡತಗಳು ವಿಲೇವಾರಿಯಾಗುವುದಿಲ್ಲ. ತಮ್ಮ ಗಮನಕ್ಕೆ ಬಾರದಂತೆ ಈ ಕಚೇರಿಯ ಕಡತ ವಿಲೇವಾರಿ ಮಾಡದಂತೆ ಮೌಖಿಕ ಸೂಚನೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅನುಮೋದನೆಗಾಗಿ ಮುಖ್ಯಕಾರ್ಯದರ್ಶಿಗಳಿಗೆ ರವಾನೆಯಾದ ನೂರಾರು ಕಡತಗಳು ವಿಲೇವಾರಿಗೆ ಬಾಕಿ ಇವೆ.
ಇದಕ್ಕೆ ಪ್ರತಿಯಾಗಿ ಮುಖ್ಯಕಾರ್ಯದರ್ಶಿಯಿಂದ ಮುಖ್ಯಮಂತ್ರಿಗಳ ಕಚೇರಿಗೆ ಬಂದ ಕಡತಗಳು ವಿಲೇವಾರಿಯಾಗಿಲ್ಲ. ಸರ್ಕಾರದ ಹಿತಿಯ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಕೆಲವು ಮಂತ್ರಿ ಹಾಗು ಶಾಸಕರನ್ನು ತಲುಪಿದ್ದು ಅವರು ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆನ್ನಲಾಗಿದೆ. ಮುಖ್ಯಮಂತ್ರಿಗಳು ಈ ಸಂಬಂಧ ಇಬ್ಬರಿಗು ತಿಳುವಳಿಕೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿವಲಯ ಹೇಳುತ್ತಿದೆ.ಇದೆಲ್ಲದರ ನಡುವೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿ ಈ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಾದ್ಯಮಗಳಲ್ಲಿ ತಮಗಿರುವ ಸಂಪರ್ಕ ಬಳಸಿ ಈ ವರದಿ ಬರುವಂತೆ ಮಾಡಿದ್ದಾರೆಂದು ಮುಖ್ಯ ಕಾರ್ಯದರ್ಶಿ ಅಸಮಧಾನಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
Previous Articleಹುಬ್ಬಳಿ ಗಲಭೆಗೆ ಎರಡು ರಾಷ್ಟ್ರೀಯ ಪಕ್ಷಗಳೆ ಕಾರಣ..!
Next Article ವಿದ್ಯುತ್ ಅವಗಢ