ಬೆಂಗಳೂರು,
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೊ ಪ್ರಯಾಣ ದರ ದುಬಾರಿಯಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೊ ಪ್ರಯಾಣ ದರವನ್ನು ಹೆಚ್ಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪರಿಷ್ಕೃತ ದರಗಳು ಆಗಸ್ಟ್ 1ರಿಂದ ಜಾರಿಗೆ ಬರಲಿದೆ.ಇದಕ್ಕೆ ಪೂರಕವಾಗಿ ಆ್ಯಪ್ ಆಧಾರಿತ ಒಲಾ, ಉಬರ್, ನಮ್ಮ ಯಾತ್ರಿ ಸೇರಿದಂತೆ ಇತರೆ ಸೇವೆಗಳಲ್ಲೂ ಆಟೋ ಪ್ರಯಾಣ ದರ ಹೆಚ್ಚಳವಾಗಲಿದೆ.
ಪರಿಷ್ಕೃತ ಆದೇಶದ ಪ್ರಕಾರಮೊದಲ ಎರಡು ಕಿ.ಮೀ.ಗೆ ಕನಿಷ್ಠ 30 ರೂಪಾಯಿ ಇದ್ದ ದರವನ್ನು 36ಕ್ಕೆ ಏರಿಸಲಾಗಿದೆ.
ಬಳಿಕ ಪ್ರತಿ ಕಿಲೋ ಮೀಟರ್‌ಗೆ 15 ರೂಪಾಯಿ ಇದ್ದಿದ್ದು 18ಕ್ಕೆ ಏರಿದೆ. ಆಟೊದಲ್ಲಿ ಮೂವರು ಅಷ್ಟೇ ಪ್ರಯಾಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 5ವರೆಗೆ ಒಂದೂವರೆ ಪಟ್ಟು ಅಧಿಕ ದರ ವಿಧಿಸಲು ಅವಕಾಶವಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷಕ್ಕೆ 10ರೂಪಾಯಿ ನೀಡಬೇಕಾಗುತ್ತದೆ. ಲಗೇಜು 20 ಕೆ.ಜಿ.ವರೆಗೆ ಉಚಿತವಾಗಿದ್ದು, ಅದಕ್ಕಿಂತ ಹೆಚ್ಚಿಗೆ ಇದ್ದರೆ 10 ರೂಪಾಯಿ ದರ ವಿಧಿಬಹುದಾಗಿದೆ. 50 ಕೆ.ಜಿ.ವರೆಗೆ ಮಾತ್ರ ಪ್ರಯಾಣಿಕರು ಆಟೊದಲ್ಲಿ ಲಗೇಜು ಸಾಗಿಸಬಹುದು ಎಂದು ಹೇಳಿದೆ.
Previous Articleಪೊಲೀಸ್ ಆಡಳಿತಕ್ಕೆ ಮೇಜರ್ ಸರ್ಜರಿ.
Next Article ಉಪನ್ಯಾಸಕರಲ್ಲ ಇವರು ರಾಕ್ಷಸರು.