ಕಾಶ್ಮೀರದ ಪೆಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಲು ಭಾರತ ಕಾದು ಕುಳಿತ್ತಿತ್ತು. ಇದಕ್ಕೆ ಮೊದಲ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತೇ ಬರುತ್ತಿರುವ ಪಾಕಿಸ್ತಾನಕ್ಕೆ ನೀರು ಸೇರಿದಂತೆ ಇತರೆ ಮಾರ್ಗಗಳಿಂದ ದಾಳಿ ಮಾಡಿತ್ತು. ಇದೀಗ ಅಂತಿಮವಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆ. ಈ ಆಪರೇಷನ್ ಸಿಂದೂರಕ್ಕೆ ಪಾಕಿಸ್ತಾನ ಪತಗ ಇ ದರ ಬೆನ್ನಲ್ಲೇ ಪಾಕಿಸ್ತಾನ ಪತರಗಟ್ಟಿದೆ. ಪೆಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಭಾರತ ಯಾವ ಸಂದರ್ಭದಲ್ಲೂ ಬೇಕಾದರೂ ಪಾಕಿಸ್ತಾನದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿತ್ತು. ಅದಂತೆ ಮಂಗಳವಾರ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಎಲ್ಲಾ ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪಾಕಿಸ್ತಾನ ಬೆದರಿದೆ. ಇದಕ್ಕೆ ಪೂಕರವೆಂಬಂತೆ ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ (Pakistan defense minister Khawaja Asif) ಶಾಂತಿ ಪಠಣ ಮಾಡಿದ್ದಾರೆ. ಈ ಮೂಲಕ ಮೊದಲೆಲ್ಲ ಬಡಾಯಿ ಬೊಗಳೆ ಬಿಡುತ್ತಿದ್ದ ಆಸಿಫ್ ಯುಟರ್ನ್ ಹೊಡೆದಿದ್ದಾರೆ. ಭಾರತ ಉಗ್ರದ ನೆಲೆ ಗುರಿಯಾಗಿಸಿ ಏರ್ಸ್ಟ್ರೈಕ್ ಮಾಡಿದ ನಂತರ ಪಾಕಿಸ್ತಾನ ರಕ್ಷಣಾ ಸಚಿವ ಅಸಿಫ್ ಪ್ರತಿಕ್ರಿಯಿಸಿದ್ದು, ಭಾರತ ದಾಳಿ ಮಾಡಿದರೆ ಮಾತ್ರ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ. ಕಳೆದ ಹದಿನೈದು ದಿನಗಳಿಂದ ನಾವು ಭಾರತದ ವಿರುದ್ಧ ಯಾವುದೇ ಬಗೆಯ ಕ್ರಮಕೈಗೊಳ್ಳುವಿದಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿದಾಳಿ ಮಾಡುತ್ತೇವೆ. ಇನ್ನು ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಸಹ ಖಂಡಿತವಾಗಿಯೂ ಈ ಉದ್ವಿಗ್ಬತೆಯನ್ನು ಶಮನಗೊಳಿಸುತ್ತೇವೆ ಎಂದಿದ್ದಾರೆ ಎಂದು ಬ್ಲೂಮ್ಬರ್ಗ್ ಟಿವಿಷನ್ ವರದಿ ಮಾಡಿದೆ ಎಂದು ಪಿಟಿಐ ತಿಳಿಸಿದೆ.
