ಬೆಂಗಳೂರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ತಿ ಮಾಲೀಕರು ತಮ್ಮ ಆಸ್ತಿಯ ದಾಖಲೆ ಪತ್ರಗಳು ನಕಲಿಯಾಗದಂತೆ ಹಾಗೂ ಅವುಗಳು ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಕೆಲಸವಾಗಿದೆ. ಇಲ್ಲವಾದರೆ ದಾಖಲೆ ಪಾತ್ರಗಳನ್ನು ನಕಲು ಮಾಡುವ ಅಥವಾ ದುರ್ಬಳಕೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ.
ಇಂತಹ ಸಮಸ್ಯೆಗೆ ಮುಕ್ತಿ ಹಾಡಲು ಬೆಂಗಳೂರು ನಗರ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಬಿಬಿಎಂಪಿ ಮೂಲಕ ರೂಪಿಸಿರುವ ಈ ಯೋಜನೆಯಿಂದ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಯ ಬಗ್ಗೆ ಭದ್ರತೆ ಹಾಗೂ ದಾಖಲೆ ಪತ್ರಗಳು ಯಾವುದೇ ತೊಂದರೆ ಇಲ್ಲದೆ ಲಭ್ಯವಾಗಲಿವೆ. ಇದೆ ಇ- ಖಾತಾ ಯೋಜನೆ.
ಇ- ಖಾತಾ ಪಡೆಯಲು ಆಸ್ತಿ ಮಾಲೀಕರು ಪರದಾಡಬೇಕಾಗಿಲ್ಲ ಅದಕ್ಕೂ ಕೂಡ ಬಿಬಿಎಂಪಿ ಸಾಕಷ್ಟು ಪರ್ಯಾಯ ಕ್ರಮಗಳನ್ನು ರೂಪಿಸಿದೆ ಈ ಮೂಲಕ ಲಂಚ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲಾಗಿದೆ.
ಇ-ಖಾತಾ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿರುವ ಬಿಬಿಎಂಪಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಇ- ಖಾತೆ ಪಡೆಯಬಹುದಾಗಿದೆ.
ಬೆಂಗಳೂರಿನ ಆಸ್ತಿ ಮಾಲೀಕರು ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿ ನಿಮ ಆಸ್ತಿ ತೆರಿಗೆ ರಶೀದಿ,
ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ,
ಮಾಲೀಕರ ಆಧಾರ್ , ಬೆಸ್ಕಾಂ ಬಿಲ್,ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ,ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ ಅಥವಾ ಡಿಸಿ ಪರಿವರ್ತನೆ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ ಸೇರಿದಂತೆ ತಮ್ಮ ಆಸ್ತಿಯ ಯಾವುದೇ ದಾಖಲೆ ಪತ್ರದೊಂದಿಗೆ ಹೋಗಿ ಇ ಖಾತೆಗೆ ಅರ್ಜಿ ಸಲ್ಲಿಸಬಹುದು
ಈ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್ ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ
ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು ಹಾಗೂ ಬಿಬಿಎಂಪಿಗೆ 125 ರೂ.ಪಾವತಿಸಿ ನಿಮ್ಮ ಆಸ್ತಿಯ ಇ- ಖಾತೆ ಪಡೆಯಬಹುದು.
ಇಲ್ಲಿ ಯಾವುದೇ ಲಂಚ ಅಥವಾ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲವಾಗಿದೆ.
Previous Articleಸಂಪುಟ ಸರ್ಜರಿಗೆ ಸಜ್ಜಾದ ಸಿಎಂ- ಐವರು ಮಂತ್ರಿಗಳಿಗೆ ಖೊಕ್.
Next Article ಬಿಗಿಯಾಗುತ್ತಿದೆ ED ಕುಣಿಕೆ.