ಬೆಂಗಳೂರು,ಆ.8:
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 80ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮತ ಕಳ್ಳತನ ಮಾಡುವ ಮೂಲಕ ಗೆಲುವು ಸಾಧಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿತ್ತು ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಆಯೋಜಿಸಿದ್ದ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2024 ರಲ್ಲಿ ಬಿಜೆಪಿ ಹಾಗೂ ಎನ್ ಡಿ ಎ ಗೆ ಬಹುಮತ ಬರುತ್ತಿರಲಿಲ್ಲ. ನರೇಂದ್ರ ಮೋದಿ ಬಹುಮತ ಗಳಿಸಿರಲಿಲ್ಲ. 80 ಕ್ಷೇತ್ರದಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈತಿಕತೆ ಮತ್ತು ಸಂವಿಧಾನದ ಬಗ್ಗೆ ಗೌರವವಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸದಾಗಿ ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್ ಆಫೀಸ್ ತರ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಸಂವಿಧಾನ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು.
ರಾಹುಲ್ ಗಾಂಧಿ ಓರ್ವ ರಾಜಕಾರಣಿ ಆಗಿ ಮಾಡಿದ ಆಪಾದನೆ ಅಲ್ಲ, ಅಧ್ಯಯನ ಮಾಡಿ ಸಾಕ್ಷ್ಯಾಧಾರ ಇಟ್ಟುಕೊಂಡು ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದಲ್ಲಿ ಓರ್ವ ವ್ಯಕ್ತಿಗೆ ಒಂದು ಓಟು. ಎಲ್ಲರಿಗೂ ಸಮಾನತೆ ಇದೆ. ಚುನಾವಣಾ ಆಯೋಗ ಸಂವಿಧಾನ ರೀತಿಯಲ್ಲಿ ನಡೆದುಕೊಳ್ಳಬೇಕು. ಮತದಾನ ಹಕ್ಕು ಸಂವಿಧಾನ ಕೊಟ್ಟಿದ್ದು. ಇದನ್ನು ನಾಶ ಮಾಡಲು ಯಾರಿಂದ ಸಾಧ್ಯವಿಲ್ಲ ಎಂದರು.
ಎಚ್ಚರಿಕೆಯಿಂದ ಚುನಾವಣೆ ಮಾಡಬೇಕು ಹಾಗೂ ನಮ್ಮ ಹಕ್ಕನ್ನು ಚಲಾಯಿಸಬೇಕು. ಬಿಜೆಪಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಮತ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮನುವಾದಿಗಳು ಮೂಲಭೂತ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತ ಕಡಿಮೆ ಪಡೆದುಕೊಳ್ಳುತ್ತೇವೆ. ಇಡೀ ದೇಶದಲ್ಲಿ ಹೀಗೆ ಆಗಿದೆ. ಬಿಜೆಪಿ ಯಾವತ್ತೂ ಬಹುಮತ ಪಡೆದುಕೊಂಡಿಲ್ಲ. ಹಿಂಭಾಗಿಲ ಮೂಲಕ ಅಧಿಕಾರಕ್ಕೆ ಬಂದವರು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಆಂತರಿಕ ಸಮೀಕ್ಷೆಯಲ್ಲಿ 16 ಸ್ಥಾನ ಗೆಲ್ಲಬೇಕಿತ್ತು. ಆದರೆ 9 ಗೆದ್ದೆವು. 7 ಕ್ಷೇತ್ರಗಳಲ್ಲಿ ಮತಕಳ್ಳತ ಮಾಡಲಾಗಿದೆ. ಮತ ಕದಿಯುವುದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇವಿಯಂ ದುರುಪಯೋಗ ಮಾಡಲಾಗಿದೆ. ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಇದು ನಡೆದಿದೆ ಎಂದು ಆರೋಪಿಸಿದರು
ಈ ಕಾರಣಕ್ಕೆ ಪ್ರಧಾನಿ ಮೋದಿ ರಾಜೀನಾಮೆ ಕೊಡಬೇಕಂತೆ
Previous Articleಮತಗಳ್ಳತನಕ್ಕೆ ಕುಮಾರಸ್ವಾಮಿ ಪರಿಹಾರ.
Next Article ಕೆಟ್ಟು ನಿಂತ ಬಸ್ಸಿನಲ್ಲಿ ಸುಟ್ಟು ಕರಕಲಾದ !