ಬೆಂಗಳೂರು,ಅ.13-ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಉದಯ್ ಗರುಡಾಚಾರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಅಪೂರ್ಣ ಪ್ರಮಾಣ ಪತ್ರ ನೀಡಿದ್ದಾರೆ. ಕೆಲವು ಸತ್ಯ ಸಂಗತಿಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತು.
ಇದೇ ವೇಳೆ ಅವರಿಗೆ ನೀಡಿರುವ ಜೈಲು ಶಿಕ್ಷೆಯ ಅವಧಿ ವರ್ಷಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಶಾಸಕರ ಪರ ವಕೀಲರ ಮನವಿಯಂತೆ ಇದೇ ಕೋರ್ಟ್ ಜಾಮೀನು ನೀಡಿತು.
ಅರ್ಜಿದಾರರು 25,000 ರೂಪಾಯಿ ವಯಕ್ತಿಕ ಬಾಂಡ್, ಶ್ಯೂರಿಟಿ ಒದಗಿಸಲು ಕೋರ್ಟ್ ಸೂಚನೆ ನೀಡಿತು.ಇದರಿಂದ ಶಾಸಕ ಉದಯ್ ಗರುಡಾಚಾರ್‌ಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ.
ಉದಯ್ ಗರುಡಾಚಾರ್ 2018 ರಲ್ಲಿ ಚಿಕ್ಕಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ತಾವು ಮತ್ತು ತಮ್ಮ ಪತ್ನಿ ಆರ್‌ಒಸಿಯಿಂದ ಅನರ್ಹಗೊಂಡಿದ್ದ ವಿಷಯ ಮತ್ತು ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿ ಯಾಗಿದ್ದರೂ ಹೂಡಿಕೆದಾರ ಎಂದು ನಮೂದು ಮಾಡಿದ್ದರು ತಮ್ಮ ಪತ್ನಿ ನಿರ್ದೇಶಕರಾಗಿರುವುದನ್ನು ನಮೂದಿಸದ ಆರೋಪ. ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ ಗಳ ಬಗ್ಗೆ ಹೆಚ್.ಜಿ.ಪ್ರಶಾಂತ್ ಎನ್ನುವರು ದೂರು ಸಲ್ಲಿಬೆಂಗಳೂ ಇದರ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ