ಎಚ್ ಡಿ ಕೋಟೆ : ಶಾನವನ್ನೆ ಅಖಾಡವಾಗಿ ಮಾಡಿಕೊಂಡು ಲಕ್ಷ ಲಕ್ಷ ಹಣ ಹಾಗೂ ಆಸ್ತಿ ಪಾಸ್ತಿ ಪಣಕ್ಕಿಟ್ಟು ಇಸ್ಪೀಟ್ ಆಟವಾಡುತ್ತಿರುವ ದೃಶ್ಯ ಮೈಸೂರಿನ ಸರಗೂರು ತಾಲೂಕು ಅಗತ್ತೂರು ಗ್ರಾಮದ ಕಾಳಿಕಾಂಭ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದಿದೆ.
ಜಾತ್ರಾ ಮಹೋತ್ಸವದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಗ್ಯಾಂಬ್ಲಿಂಗ್ ಗೆ ಸ್ಮಶಾನವೇ ಅಖಾಡವಾಗಿದೆ. ಇದನ್ನೆಲ್ಲಾ ನೋಡಿಯೂ ನೋಡದಂತೆ ಖಾಕಿ ಕಣ್ಮುಚ್ಚಿ ಕುಳಿತಿದೆ.
ಜಾತ್ರೆ ಮುಗಿದರೂ ಇಸ್ಪೀಟ್ ಆಟ ಮಾತ್ರ ನಿಂತಿಲ್ಲ. ರುಧ್ರಭೂಮಿಯನ್ನೇ ಅಖಾಡ ಮಾಡಿಕೊಂಡಿರುವ ಗ್ಯಾಂಬ್ಲರ್ಸ್ಗಳು ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡವಾಡುತ್ತಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಬಂದ ಅತಿಥಿಗಳು ಇಸ್ಪೀಟ್ ಅಖಾಡಕ್ಕಿಳಿದಿದ್ದಾರೆ.
ಏಪ್ರಿಲ್ 18 ರಿಂದ 21 ರವರೆಗೆ ಕಾಳಿಕಾಂಬ ಜಾತ್ರಾ ಮಹೋತ್ಸವ ನಡೆದಿದೆ. ಆದ್ರೆ ಜಾತ್ರೆ ಆರಂಭವಾಗುವ ಮುನ್ನವೇ ಇಸ್ಪೀಟ್ ಅಖಾಡ ಇಲ್ಲಿ ಶುರುವಾಗಿದೆ. ಈಗ ಜಾತ್ರೆ ಮುಗಿದರೂ ಕಳೆದ ಒಂದು ವಾರದಿಂದ ನಿರಂತರವಾಗಿ ಇಸ್ಪೀಟ್ ಆಟ ನಡೆಯುತ್ತಿದೆ. ಈ ಮೂಲಕ ಜಾತ್ರೆ ಮುಗಿದಿದ್ದರೂ ಇಸ್ಪೀಟ್ ಸಂಭ್ರಮ ಇನ್ನೂ ಮುಗಿದಿಲ್ಲ.
ವಿಪರ್ಯಾಸ ಅಂದ್ರೆ ಗ್ರಾಮದ ರುಧ್ರಭೂಮಿಯೇ ಇಸ್ಪೀಟ್ ಅಖಾಡವಾಗಿ ಪರಿವರ್ತನೆಯಾಗಿದೆ. ಲಕ್ಷಾಂತರ ರೂಪಾಯಿ ಬಾವು ನಡೆದಿದೆ. ಅಂದರ್ ಬಾಯರ್ ಸದ್ದು ಚಿರಶಾಂತಿಯಿಂದ ಮಲಗಿರುವ ಆತ್ಮಗಳನ್ನ ಪರಿತಪಿಸುವಂತೆ ಮಾಡಿದೆ. ವಿವಿದೆಡೆಯಿಂದ ಬಂದ ಭಕ್ತರು ಜಾತ್ರಾಮಹೋತ್ಸವದಲ್ಲಿ ಭಾಗಿಯಾಗದೆ ಇಸ್ಪೀಟ್ ಆಟದಲ್ಲಿ ಮುಳುಗಿದ್ದಾರೆ.
ಇಸ್ಪೀಟ್ ಆಟ ನಡೆಸಲು ಬಿಡ್ ಸಹ ನಡೆದಿದೆ ಎನ್ನಲಾಗಿದೆ. ಮೂವರು ವ್ಯಕ್ತಿಗಳು 2 ಲಕ್ಷ 40 ಸಾವಿರಕ್ಕೆ ಬಿಡ್ ಮಾಡಿ ಇಸ್ಪೀಟ್ ಅಡ್ಡೆ ಪಡೆದಿದ್ದಾರೆಂದು ಹೇಳಲಾಗಿದೆ. ಈಗಾಗಲೇ ಹಲವು ಮಂದಿ ಆಸ್ತಿಪಾಸ್ತಿಗಳನ್ನ ಅಡವಿಟ್ಟು ಕಳೆದುಕೊಂಡಿದ್ದಾರೆಂದು ಹೇಳಲಾಗಿದೆ. ಸ್ಮಶಾನದಲ್ಲಿ ಇಸ್ಪೀಟ್ ಎಲೆಗಳ ರಾಶಿ ತುಂಬಿದೆ.
ನೂರಾರು ವಾಹನಗಳು ಜಮಾಯಿಸಿವೆ. ರಾತ್ರಿಯ ಕತ್ತಲಲ್ಲೂ ಇಸ್ಪೀಟ್ ಎಲೆಗಳು ಸದ್ದು ಮಾಡುತ್ತಿವೆ.
ಈ ಮೂಲಕ ಪೋಲಿಸ್ ಇಲಾಖೆ ಕಣ್ಮುಚ್ಚಿ ಕುಳಿತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ಅಂದರ್ ಬಾಯರ್ ಗೆ ಕಡಿವಾಣ ಹಾಕುವವರೇ ಇಲ್ಲವಾಗಿದೆ