ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಪಣ ತೊಟ್ಟಿರುವ ಆಡಳಿತರೂಢ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಬಿಜೆಪಿ ಕೇವಲ ನಿರ್ದಿಷ್ಟ ಜಾತಿಯ ಮತಗಳಿಗೆ ಸೀಮಿತವಾಗದೆ ಸಣ್ಣಪುಟ್ಟ ಸಮುದಾಯಗಳನ್ನು ಓಲೈಸಿಕೊಂಡಿತ್ತು ಇದೇ ತಂತ್ರವನ್ನು ಇಲ್ಲಿಯೂ ಬಳಸಲು ಬಿಜೆಪಿ ಚಿಂತಕರ ಚಾವಡಿ ಸಲಹೆ ಮಾಡಿದೆ.
ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿಗೆ ಈಗಲೂ ಗಟ್ಟಿಯೇ. ಲಿಂಗಾಯತರನ್ನು ಯಡಿಯೂರಪ್ಪ ಮೂಲಕ ಬಿಜೆಪಿ ಹೇಗಾದರೂ ಒಲಿಸಿಕೊಳ್ಳುತ್ತದೆ. ಎಡಗೈ ದಲಿತ ಸಮುದಾಯದಲ್ಲಿ ಬೇರೆ ಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ಇದೆ. ಈಗ ಬಿಜೆಪಿಗೆ ಸಮಸ್ಯೆಯಾಗಿರುವುದು ಹಿಂದುಳಿದ ಮತ್ತು ಒಕ್ಕಲಿಗ ಸಮುದಾಯದ್ದು, ಇವುಗಳ ಓಲೈಕೆಗೆ ಬಿಜೆಪಿ ಮುಂದಾಗಿದೆ.
ಸುಮಾರು 200 ಜಾತಿಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ ಅವುಗಳಲ್ಲಿ ಕುರುಬ, ತಿಗಳ, ಈಡಿಗ, ಉಪ್ಪಾರ ಇತ್ಯಾದಿ ಸಮುದಾಯಗಳು. ರಾಜ್ಯದಲ್ಲಿ ಶೇ.30ಕ್ಕಿಂತ ಹೆಚ್ಚಿವೆ. ಒಕ್ಕಲಿಗ, ಲಿಂಗಾಯತ ಸಮುದಾಯಗಳಂತೆ ಈ ವರ್ಗಗಳಲ್ಲಿ ಐಕ್ಯತೆ ಕಡಿಮೆ. ಹಿಂದುಳಿದ ಎನ್ನುವುದು ಜಾತಿಯ ವರ್ಗೀಕರಣವಾಗಿ ಮಾತ್ರ ಉಳಿದಿದೆ. ಹೀಗಾಗಿ, ಯಾವ ಪಕ್ಷಕ್ಕೂ ಅದು ಮತ ಬ್ಯಾಂಕ್ ಆಗಿ ಪರಿಗಣಿತವಾಗಿಲ್ಲ.
ಕುರುಬ ಸಮುದಾಯ ಮಾತ್ರ ರಾಜಕೀಯವಾಗಿ ನಿರ್ಧಾರಿತ ಸ್ಥಿತಿಯಲ್ಲಿದ್ದಾರೆ. ಒಕ್ಕಲಿಗರಿಗೆ ದೇವೇಗೌಡರು ಪರಮೋಚ್ಚ ನಾಯಕರಾಗಿರುವಂತೆ ಕುರುಬರಿಗೆ ಸಿದ್ದರಾಮಯ್ಯರೇ ಮೇರು. ಹಿಂದುಳಿದ ವರ್ಗಗಳಲ್ಲಿ ಕುರುಬರ ಸಂಖ್ಯೆ ಶೇ. 8ಕ್ಕಿಂತ ಹೆಚ್ಚು ಇದೆ. ಇವರನ್ನು ಬಿಟ್ಟು ಇತರ ನೂರಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳನ್ನು ಓಲೈಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಪರವಾಗಿಲ್ಲದ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಯ ಗುರಿ.
ಇದರ ಜೊತೆಗೆ ಪ್ರತೀ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಪ್ರಾದೇಶಿಕವಾರು ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ರಾಜ್ಯ ಭೇಟಿಯ ಸಮಯದಲ್ಲಿ ನೀಡಿದ ಸಲಹೆಯ ಮೇರೆಗೆ ಇಂತಹ ನಿರ್ಧಾಕ್ಕೆ ಬರಲಾಗಿದೆ ಹೀಗಾಗಿ ರಾಜ್ಯ ಬಿಜೆಪಿಗೆ ಇದು ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ನೋಡಬೇಕಿದೆ.
Previous Articleಕನ್ನಡದಲ್ಲಿ ಮಾತನಾಡಿ ಜೈರಾಮ್ ರಮೇಶ್
Next Article ಹಣಕ್ಕಾಗಿ ಜಾಕ್ವೆಲಿನ್ ಮಾಡಿದ್ದೇ ಇದು..