ಬೆಂಗಳೂರು.ಫೆ,18:
ಅರಣ್ಯಗಳಲ್ಲಿ ಕಳ್ಳರಬೇಟೆ, ಮರಗಳ್ಳತನ, ದಂತಕ್ಕಾಗಿ ಆನೆಗಳ ಬೇಟೆ, ಅರಣ್ಯಸಂಪತ್ತು ಕಳ್ಳಸಾಗಾಣಿಕೆ ಮತ್ತಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಇಂತಹ ಅಪರಾಧ ಕೃತ್ಯ ಮಾಡಿದವರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ತನ್ನದೇ ಆದ ಶ್ವಾನದಳ ಹೊಂದಲು ಮುಂದಾಗಿದೆ. ಇದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ.ಇದನ್ನು ದೇಶದ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಎನ್ನಲಾಗಿದೆ.
ಇಲ್ಲಿ ಹುಲಿ, ಚಿರತೆ, ಕಾಡಮ್ಮೆ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಮೂಳೆ, ಚರ್ಮ, ಉಗುರು, ಆನೆ ದಂತ, ವನ್ಯಪ್ರಾಣಿಗಳ ಕಳೆಬರ ಪತ್ತೆ ಹಚ್ಚುವುದು, ಶ್ರೀಗಂಧ, ರಕ್ತಚಂದನ ಮತ್ತಿತರ ಅರಣ್ಯಸಂಪತ್ತು ಪತ್ತೆ ಹಚ್ಚುವುದರ ಬಗ್ಗೆ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ.
ಬೆಲ್ಜಿಯಂ ಮಾಲಿನಾಯ್ಸ್ ತಳಿಯ ಶ್ವಾನಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತಳಿಯ ನಾಯಿಗಳು ಮಾದಕವಸ್ತು, ಬಾಂಬ್, ಅನಿಲ ಸೋರಿಕೆ ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವಲ್ಲಿ ಪರಿಣಿತಿ ಹೊಂದಿವೆ. ಹೀಗಾಗಿ ಈ ತಳಿಯ ನಾಯಿಗಳನ್ನು ತಂದು ಅರಣ್ಯ ಅಪರಾಧಗಳನ್ನು ತಡೆಗಟ್ಟುವ ಹಾಗೂ ಭೇದಿಸುವ ಬಗ್ಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ
ತರಬೇತಿಯ ನಂತರ ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ ಹಾಗು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಗೆ ತಲಾ ಎರಡು ಶ್ವಾನಗಳಂತೆ ನಿಯೋಜಿಸಲಾಗುತ್ತದೆ.ಇಲ್ಲಿ ಶ್ವಾನಗಳುಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಭೇದಿಸಲು ನೆರವು ನೀಡಲಿವೆ.
Previous Articleಮಂತ್ರಿ ರಾಜಣ್ಣ ಯಾಕೆ ಹೀಗಾಡುತ್ತಿದ್ದಾರೆ
Next Article ಹೈಕಮಾಂಡ್ ಗೆ ಯತ್ನಾಳ್ ಹೇಳಿದ್ದೇನು ಗೊತ್ತೆ..