ಬೆಂಗಳೂರು,ಆ.31-
ದೂರದ ಉತ್ತರ ಪ್ರದೇಶದಿಂದ ಲಕ್ನೋ ಮಾರ್ಗವಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಇಲ್ಲಿ ಸರಗಳವು ಮತ್ತು ಮನೆ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಸಿಲಿಕಾನ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ
ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್, ಪತ್ನಿ ಮುಬೀನಾ ಹಾಗೂ ಸೋನು ಯಾದವ್ ಬಂಧಿತ ಆರೋಪಿಗಳು.
ಈ ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಮನೆ ಕಳ್ಳತನ ಮಾಡುತ್ತಿದ್ದರು.ಇವರು ಕೇವಲ ಬೆಂಗಳೂರು ಮಾತ್ರವಲ್ಲದೆ ಮಹಾರಾಷ್ಟ್ರದ ಮುಂಬೈ ಪುಣೆ, ಸೂರತ್ ಹೈದರಾಬಾದ್ ಮತ್ತು ಗುಜರಾತ್ ನ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ ಮಾಹಿತಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಿಂದ ಸುಮಾರು 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದಮೇ 10ರಂದು ಬೆಂಗಳೂರಿನ ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಸಂಜಯನಗರ ಪೊಲೀಸರು ಪ್ರಕರಣದ ತನಿಖೆಗಾಗಿ ಒಂದು ವಿಶೇಷ ತಂಡ ರಚನೆ ಮಾಡಿದ್ದರು.
ಈ ತಂಡ ಕಳುವಾಗಿದ್ದ ಮನೆಯ ಸುತ್ತಮುತ್ತಲಿನ ಕಟ್ಟಡಗಳಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರ ಸುಳಿವು ಸಿಕ್ಕಿತ್ತು. ಆಗ ಆರೋಪಿಗಳ ಬೆನ್ನು ಬಿದ್ದ ಪೊಲೀಸರ ಕೈಗೆ ಓರ್ವ ಆರೋಪಿ ಸೋನು ಯಾದವ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದ .ಬಳಿಕ ಆತನನ್ನು ವಿಚಾರಿಸಿದಾಗ ಅಸಲಿ ಸತ್ಯ ಬಾಯಿಬಿಟ್ಟದ್ದಾನೆ.
ಬಂಧಿತ ಕಳ್ಳ ನೀಡಿದ ಮಾಹಿತಿಯನ್ನು ಆಧರಿಸಿ ಉಳಿದ ಆತನ ಸಹಚರರ ಬಂಧನಕ್ಕೆ ತೆರಳಿದ ಪೊಲೀಸ್ ತಂಡಕ್ಕೆ ಹಲವಾರು ಕುತೂಹಲಕಾರಿಯಾದ ಅಂಶಗಳು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಐನಾತಿ ಕಳ್ಳರ ಹೆಜ್ಜೆ ಜಾಡು ಬೆನ್ನು ಹತ್ತಿದ್ದಾರೆ.
ಅಂತರರಾಜ್ಯ ಕಳ್ಳರಾದ ಅಕ್ಬರ್ ಮತ್ತು ಮುಬೀನಾ ಮನೆ ಕಳವು ಕೆಲಸ ಮಾಡುತ್ತಿದ್ದರೂ, ಅವರ ಮಕ್ಕಳನ್ನು ಮಾತ್ರ ಸ್ಟಾಂಡರ್ಡ್ ಶಾಲೆಗಳಲ್ಲಿ ಓದಿಸುತ್ತಿದ್ದರು. ಇನ್ನು ಆರೋಪಿ ಸೋನು ಯಾದವ್ ಕೊಟ್ಟ ಮಾಹಿತಿ ಹಿಡಿದು ಹೊರಟ ಪೊಲೀಸರಿಗೆ ಅಕ್ಬರ್ ಸುಳಿವು ಸಿಕ್ಕಿರಲಿಲ್ಲ, ಹೀಗಾಗಿ ಅವರ ಮಕ್ಕಳು ಓದುತಿದ್ದ ಶಾಲೆಗೆ ಹೋದ ಪೊಲೀಸರು ಅಲ್ಲಿನ ಪ್ರಿನ್ಸಿಪಾಲ್ ಬಳಿ ಮನವಿ ಮಾಡಿ ಮಕ್ಕಳ ಸ್ಯಾಟ್ ಮಾಹಿತಿ ಓಪನ್ ಮಾಡಿದಾಗ ಆರೋಪಿಗಳ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಆಗ ಪೊಲೀಸರು ಅದರ ಆಧಾರದ ಮೇಲೆ ಆರೋಪಿಯ ಮನೆ ಪತ್ತೆ ಹಚ್ಚಿದರು.ಸುಮಾರು ಮೂರು ನಾಲ್ಕು ದಿನಗಳ ಕಾಲ ಅಲ್ಲಿಯೇ ಹೊಂಚು ಹಾಕಿ ಕುಳಿತು ಸ್ಥಳೀಯ ಪೊಲೀಸರ ಸಹಾಯಪಡೆದು ವಶಕ್ಕೆ ಪಡೆದುಕೊಂಡು ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ.
Previous Articleಹಾಸನದಲ್ಲಿ ಬಾಂಗ್ಲಾ ವಲಸಿಗರು.
Next Article ದೇವನಹಳ್ಳಿ Airport ಲ್ಲಿ ಸಿಕ್ಕಿದ ಉಗ್ರ.