Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಾಂಗ್ರೆಸ್ಸಿನಲ್ಲಿ ಶತ್ರು ಸಂಹಾರ ನಡೆಯಲಿದೆಯಾ
    ರಾಜಕೀಯ

    ಕಾಂಗ್ರೆಸ್ಸಿನಲ್ಲಿ ಶತ್ರು ಸಂಹಾರ ನಡೆಯಲಿದೆಯಾ

    vartha chakraBy vartha chakraಜನವರಿ 9, 20253 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಜ.9:
    ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದು ಜನವರಿ 14ರಂದು ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ತೆರಳುತ್ತಿದೆ.
    ಇದರ ನಡುವೆ ಜನವರಿ 13ರಂದು ಕರೆದಿರುವ ಶಾಸಕಾಂಗ ಪಕ್ಷದ ಸಭೆ ಕುತೂಹಲ ಮೂಡಿಸಿದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶತ್ರು ಸಂಹಾರಕ್ಕೆ ಹೆಸರಾದ ತಮಿಳುನಾಡಿನ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗಿರುವುದು ವಿದ್ಯಮಾನಗಳಿಗೆ ರಂಗೇರುವಂತೆ ಮಾಡಿದೆ.
    ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಯ ಬೇಡಿಕೆ ಏಕಾಏಕಿ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಮಂತ್ರಿಗಳ ಔತಣ ಕೂಟ ಸಭೆಗಳು ನಡೆದಿದ್ದವು ಇಂತಹ ಸಭೆಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗಲಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವರಿಷ್ಠರ ಗಮನ ಸೆಳೆದಿದ್ದರು ಇದನ್ನು ಪರಿಗಣಿಸಿದ ಹೈಕಮಾಂಡ್ ಔತಣಕೂಟ ಸಭೆಗಳಿಗೆ ಬ್ರೇಕ್ ಹಾಕಿದೆ.
    ತಮ್ಮ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ಬೆನ್ನಲ್ಲೇ ಶಿವಕುಮಾರ್ ಅವರ ವಿರುದ್ಧ ಮಂತ್ರಿಗಳಾದ ಪರಮೇಶ್ವರ ಕೆ ಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
    ಇದರ ನಡುವೆ ಗಾಂಧಿ ನಡಿಗೆ ಕಾರ್ಯಕ್ರಮದ ಕುರಿತು ಚರ್ಚಿಸುವ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 13ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಇದಾದ ಬಳಿಕ ನವೀಕರಣಗೊಂಡ ಎಐಸಿಸಿ ಕಚೇರಿ ಉದ್ಘಾಟನೆಗಾಗಿ ದೆಹಲಿಗೆ ತೆರಳುತ್ತಿದ್ದು ವಿದ್ಯಮಾನಗಳ ಬಗ್ಗೆ ಕುತೂಹಲ ಮೂಡಿಸಿದೆ.
    ಜನವರಿ 15ರಂದು ಎಐಸಿಸಿ ಕಚೇರಿ ಉದ್ಘಾಟನೆ ನಡೆಯಲಿದೆ ಅದಕ್ಕೂ ಒಂದು ದಿನ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೃಹ ಮಂತ್ರಿ ಪರಮೇಶ್ವರ್ ಕೈಗಾರಿಕೆ ಮಂತ್ರಿ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳುತ್ತಿದ್ದಾರೆ ಈ ವೇಳೆ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನೇಮಕಾತಿ ಸಂಪುಟ ವಿಸ್ತರಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
    ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಸುಧೀರ್ಘ ಅವಧಿಗೆ ಈ ಹುದ್ದೆಯನ್ನು ನಿಭಾಯಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬದಲಾಯಿಸಬೇಕು ಎಂಬ ಆಗ್ರಹ ಕೇಳಿ ಬಂದಿದ್ದು ಅದರ ಕುರಿತಾಗಿಯೂ ಹೈಕಮಾಂಡ್ ಜೊತೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ವಿಶೇಷ ಪೂಜೆ; ಇಂತಹ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ
    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬೆಳಿಗ್ಗೆ ತಮಿಳುನಾಡಿನ ಕುಂಭಕೋಣಂಗೆ ತೆರಳಿ ಪ್ರತ್ಯಂಗಿರ ಹೋಮದಲ್ಲಿ ಭಾಗಿಯಾಗಿದ್ದಾರೆ. ಹೆಲಿಕಾಫ್ಟರ್‌ನಲ್ಲಿ ಪತ್ನಿ ಉಷಾ ಅವರೊಂದಿಗೆ ತೆರಳಿದ ಡಿ.ಕೆ.ಶಿವಕುಮಾರ್‌ ಶ್ರೀ ಮಹಾ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ವೈಕುಂಠ ಏಕಾದಶಿಗೂ ಮುನ್ನ ಡಿ.ಕೆ.ಶಿವಕುಮಾರ್‌ ದೇವಸ್ಥಾನಗಳ ದರ್ಶನಕ್ಕೆ ತೆರಳಿರುವುದು ಕುತೂಹಲ ಕೆರಳಿಸಿದೆ.
    ಪ್ರತ್ಯಂಗಿರಾ ದೇವಿ ಶತ್ರು ಸಂಹಾರಕ್ಕೆ ಹೆಸರಾದ ದೇವಿ ಎಂಬ ಪ್ರತೀತಿಯಿದೆ. ಹೀಗೆ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರು ರಾಜಕೀಯವಾಗಿ ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ನಿರಂತರವಾಗಿ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗಿದ ಪರಿಣಾಮ ಅವರು ಮತ್ತೆ ರಾಜಕೀಯವಾಗಿ ಹೆಚ್ಚಿನ ಪ್ರವರ್ಧಮಾನಕ್ಕೆ ಬಂದಿದ್ದರು ಸತತವಾಗಿ ಎರಡು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಹೇಳಲಾಗುತ್ತಿದೆ.
    ಪ್ರತ್ಯಂಗಿರಾ ದೇವಿಯ ಆರಾಧನೆಯಿಂದ ಜಯಲಲಿತಾ ಅವರಿಗೆ ರಾಜಕೀಯವಾಗಿ ಸಾಕಷ್ಟು ಲಾಭ ಉಂಟಾಗಿತ್ತು ಎಂಬ ಮಾತುಗಳ ಹಿನ್ನೆಲೆಯಲ್ಲಿ ಪ್ರಮುಖ ರಾಜಕಾರಣಿಗಳು ಇದೀಗ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗುತ್ತಿದ್ದಾರೆ ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಕೂಡ ತಮ್ಮ ಪತ್ನಿ ಜೊತೆ ಅಲ್ಲಿಗೆ ತೆರಳಿ ವಿಶೇಷ ಪೂಜೆ ನೆರವೇರಿಸುತ್ತಿರುವುದು ಕುತೂಹಲ ಮೂಡಿ‌ಸಿದೆ

    Verbattle
    Verbattle
    Verbattle
    ಕಾಂಗ್ರೆಸ್ ತಮಿಳುನಾಡು ಬೆಂಗಳೂರು ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬಿಜೆಪಿಯಲ್ಲೂ ಡಿನ್ನರ್ ಪಾಲಿಟಿಕ್ಸ್.
    Next Article ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    vartha chakra
    • Website

    Related Posts

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಫೆಬ್ರವರಿ 20, 2026

    3 ಪ್ರತಿಕ್ರಿಯೆಗಳು

    1. Gkoclb on ಫೆಬ್ರವರಿ 12, 2026 11:32 ಅಪರಾಹ್ನ

      mgm betting app promo betmgm-play betmgm super bowl promo

      Reply
    2. Skxjlb on ಫೆಬ್ರವರಿ 20, 2026 3:07 ಫೂರ್ವಾಹ್ನ

      Savor the essence of casino elegance online. what is crowncoins offers high-definition streams for immersive experiences. Elegance meets excitement here!

      Reply
    3. Skxjlb on ಫೆಬ್ರವರಿ 20, 2026 3:10 ಫೂರ್ವಾಹ್ನ

      Savor the essence of casino elegance online. what is crowncoins offers high-definition streams for immersive experiences. Elegance meets excitement here!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • c168 com ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • Krovlyanub ರಲ್ಲಿ ಮೂವರು ಡಿಸಿಎಂ ‌ಬೇಡಿಕೆಗೆ ಮದ್ದಿಟ್ಟ ಹೈಕಮಾಂಡ್ | Congress High Command
    • aviator_ycMl ರಲ್ಲಿ ಬದಲಾವಣೆಯ ಬೌಂಡರಿ ಬಾರಿಸಲು ಮನ್ಸೂರ್ ಕರೆ | Mansoor Khan
    Latest Kannada News

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಫೆಬ್ರವರಿ 20, 2026

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.