ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪಣತೊಟ್ಟಿರುವ ಕಾಂಗ್ರೆಸ್ ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಆರಂಭಿಸಿದೆ ಪಕ್ಷದನಯುವ ನಾಯಕ ರಾಹುಲ್ ಗಾಂಧಿ ರಾಜ್ಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಪ್ರತಿನಿತ್ಯದ ವಿದ್ಯಮಾನಗಳ ಬಗ್ಗೆ ಖುದ್ದು ಗಮನ ಹರಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಕಾಂಗ್ರೆಸ್ ಹಿನ್ಮಡೆ ಅನುಭವಿಸಿದ್ದಾಗ ಕರ್ನಾಟಕದಲ್ಲಿ ಸಿಕ್ಕ ಗೆಲುವು ಪಕ್ಷಕ್ಕೆ ಮರು ಹುಟ್ಟು ನೀಡಿತ್ತು.ಹೀಗಾಗಿ ಕರ್ನಾಟಕವನ್ನು ಅದೃಷ್ಟದ ಹೆಬ್ಬಾಗಿಲು ಎಂದು ಪರಿಗಣಿಸಿರುವ ರಾಹುಲ್ ಗಾಂಧಿ ತಮ್ಮ ಹೆಚ್ಚಿನ ಗಮನ ಈ ಕಡೆ ಕೇಂದ್ರೀಕರಿಸಿದ್ದಾರೆ.
ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ 150 ಕ್ಷೇತ್ರಗಳ ಟಾರ್ಗೆಟ್ ಕೊಟ್ಟು, ಅದನ್ನು ಸಾಧಿಸಲು ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಪೂರಕವಾಗಿ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ ಹಾಗು ಪ್ರತ್ಯೇಕ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.
ಚುನಾವಣ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ತಂಡದ ಸುನೀಲ್ ಕುನಗೋಳ್ ಎಂಬವರಿಗೆ ಕಾಂಗ್ರೆಸ್ ಸಮೀಕ್ಷಾ ಕಾರ್ಯವನ್ನು ವಹಿಸಿದ್ದು, ಅವರ ಎಬಿಎಂ ಸಂಸ್ಥೆ ಕೆಲಸ ಆರಂಭಿಸಿದೆ.
ಸುನಿಲ್ ತಂಡವು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಎಂ. ಬಿ. ಪಾಟೀಲ್, ಡಿ. ಕೆ. ಶಿವಕುಮಾರ್, ಹರಿಪ್ರಸಾದ್ ಸಹಿತ ರಾಜ್ಯದ ಕಾಂಗ್ರೆಸ್ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರ ಜತೆಯೂ ಚರ್ಚಿಸಿದೆ. ಮತದಾರರ ಅಂತರಾಳ ಅರಿಯುವ ಹಾಗು ಸಮುದಾಯಗಳ ಬೆಂಬಲ ಸಹಿತ ಸ್ಥಳೀಯ ಮಟ್ಟದ ನಾಯಕರ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವುಳ್ಳ 200 ಮಂದಿಯ ತಂಡ ಮುಂದಿನ 3 ತಿಂಗಳ ಕಾಲ ರಾಜ್ಯದ 224 ಕ್ಷೇತ್ರಗಳಲ್ಲಿ ಸುತ್ತಾಡಲಿದೆ ಎಂದು ಮೂಲಗಳು ತಿಳಿಸಿವೆ.
Previous Articleಗೆದ್ದು ಬೀಗುತ್ತಿರುವ ಜೀ ಕನ್ನಡಕ್ಕೆ ಬೀಳುವುದೇ ಕಡಿವಾಣ?
Next Article ಬಿಜೆಪಿಯವರಿಗೆ ನಾಚಿಕೆಯಾಗಬೇಕು