ಬೆಂಗಳೂರು
ಹೊಸ ವರ್ಷ ಸ್ವಾಗತಿಸಲು ಸಜ್ಜಾಗುತ್ತಿರುವ ಉದ್ಯಾನ ನಗರಿ ಬೆಂಗಳೂರು ಕಳೆದ ವರ್ಷ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಗುರುತುಸಲ್ಪಡುವ ಈ ನಗರದಲ್ಲಿ ಆನ್ ಲೈನ್ ವ್ಯಾಪಾರ ಕೂಡ ಅತ್ಯಂತ ಜನಪ್ರಿಯ.
ಬೆಂಗಳೂರು ನಗರದ ಬಹುತೇಕ ನಿವಾಸಿಗಳು ಆನ್ ಲೈನ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ. ಈ ರೀತಿ 2024ರಲ್ಲಿ ಆನ್ ಲೈನ್ ಮೂಲಕ ದೇಶಾದ್ಯಂತ ಯಾವ ಯಾವ ಪ್ರದೇಶಗಳಲ್ಲಿ ಏನೇನು ಖರೀದಿಸಿದ್ದಾರೆ ಎಂಬ ಅಂಕಿ ಅಂಶಗಳನ್ನು ಆನ್ ಲೈನ್ ಮಾರಾಟ ಸಂಸ್ಥೆಗಳು ಬಿಡುಗಡೆ ಮಾಡಿವೆ.
ಇದರಲ್ಲಿ ಬೆಂಗಳೂರಿನವರು ಹೆಚ್ಚಿನ ಪ್ರಮಾಣದಲ್ಲಿ ಕಾಂಡೊಮ್ ಗಳನ್ನು ಖರೀದಿ ಮಾಡಿದ್ದಾರೆ ಅದರಲ್ಲೂ ರಾತ್ರಿ ಹತ್ತರಿಂದ 11 ಗಂಟೆ ಸುಮಾರಿಗೆ ಮಾಡಲಿರುವ ಆನ್ ಲೈನ್ ಆರ್ಡರ್ ನ ಪೈಕಿ 25ರಲ್ಲಿ ಒಂದು ಆರ್ಡರ್ ಕಾಂಡೊಮ್ ಆಗಿರುತ್ತದೆ ಎಂದು ಆನ್ ಲೈನ್ ಮಾರಾಟ ಸ್ವಿಗ್ಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಬೆಂಗಳೂರಿನ ನಂತರ ಹೈದರಾಬಾದ್ ಎರಡನೇ ಸ್ಥಾನದಲ್ಲಿದ್ದರೆ ಮುಂಬೈ ಮೂರನೇ ಸ್ಥಾನದಲ್ಲಿದೆ ಪುಣೆ ನಾಲ್ಕನೇ ಸ್ಥಾನದಲ್ಲಿದ್ದು ಚೆನ್ನೈ ಐದನೇ ಸ್ಥಾನದಲ್ಲಿದೆ ಎಂಬ ಅಂಕಿ ಅಂಶಗಳನ್ನು ನೀಡಿದೆ.
ಇದಲ್ಲದೆ ಕಳೆದ ವರ್ಷ ಬೆಂಗಳೂರಿಗರು ಅತಿಹೆಚ್ಚಿನ ಪ್ರಮಾಣದಲ್ಲಿ ಒಳ ಉಡುಪುಗಳನ್ನು ಖರೀದಿ ಮಾಡಿದ್ದಾರೆ ಇದಾದ ಬಳಿಕ ಅತಿಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿದ್ದಾರೆ ಎಂದು ಸ್ವಿಗ್ಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
Previous Articleಲಕ್ಷ್ಮೀ ಹೆಬ್ಬಾಳ್ಕರ್ -ಸಿ.ಟಿ.ರವಿ ನಡುವೆ ಸಂಧಾನಕ್ಕೆ ಯತ್ನ.
Next Article ಬೆಂಗಳೂರಲ್ಲಿ ರಾಶಿ ರಾಶಿ ಗಾಂಜಾ.