ಬೆಂಗಳೂರು.ಪ್ರದೇಶ ಅಧ್ಯಕ್ಷ ಸ್ಥಾನ ಹುದ್ದೆ ಬದಲಾವಣೆ ಕುರಿತಂತೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಈ ಹುದ್ದೆಗೆ ನೇಮಕಗೊಳ್ಳಲು ಕನಿಷ್ಠ ಮೂರು ತಿಂಗಳ ತಯಾರಿ ಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ
ಪಕ್ಷದ ಅಧ್ಯಕ್ಷ ಸ್ಥಾನ ಎನ್ನುವುದು ಸುಲಭದ ಮಾತಲ್ಲ ಅದು ಕಲ್ಲು ಮುಳ್ಳಿನ ಹಾದಿಯಾಗಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಬೇಕಾದರೆ 2-3 ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳಬೇಕು. ಈಗಿನ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಯಿಲ್ಲ. ಒಂದು ವೇಳೆ ಹೈಕಮಾಂಡ್ ಈ ಬಗ್ಗೆ ಸೂಚನೆ ನೀಡಿದರೆ ಆ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.
ಸಚಿವ ಸಂಪುಟ ಪುನರ್ ರಚನೆಯಾಗಬೇಕು ಎಂಬ ಸುದ್ದಿಯಿದೆ. ಆದರೆ ಯಾವಾಗ, ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಮಂಡಲ ಪುನರ್ ರಚನೆಯಾಗಬಹುದು ಅಥವಾ ಆಗದೇ ಇರಬಹುದು. ಖಾತೆ ಬದಲಾವಣೆಯ ಬಗ್ಗೆಯೂ ಚರ್ಚೆ ಇದೆ ಎಂದು ಹೇಳಿದರು.
ಈ ಅವಧಿಗೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. 2028 ಕ್ಕೆ ಹಕ್ಕು ಪ್ರತಿಪಾದಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಳ್ಳಿನ ಮೇಲೆ ನಿಂತಂತೆ. ಅದನ್ನು ನಿಭಾಯಿಸುವುದು ಕಷ್ಟದ ಜವಾಬ್ದಾರಿ. ಚರ್ಚೆ ನಡೆಯಬೇಕು, ಎಲ್ಲರ ಸಹಕಾರ ಬೇಕು, ಸದ್ಯಕ್ಕೆ ತಾವು ಅದರ ಕುರಿತು ಚಿಂತನೆ ನಡೆಸಿಲ್ಲ ಎಂದು ತಿಳಿಸಿದರು.
Previous Articleದಾವಣಗೆರೆಯಲ್ಲಿ ಶಕ್ತಿ ಪ್ರದರ್ಶಿಸಲು ಮುಂದಾದ ಬಿಜೆಪಿ ನಿಷ್ಠರ ಬಣ*
Next Article ಧನುಷ್ ಐಶ್ವರ್ಯ ವಿಚ್ಛೇದನ ಈಗ ಅಧಿಕೃತ