ಬೆಂಗಳೂರು,ಫೆ.19-
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಅವರು ಆಪ್ತತೆ ಶ್ವೇತಾಗೌಡ ಮಾಡಿದ ವಂಚನೆ ಪ್ರಕರಣಕ್ಕೆ ಸಂಬಂಧ ನಗರ ಪೊಲೀಸರು 2.1 ಕೆ.ಜಿ ಚಿನ್ನಾಭರಣದ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣದ ಸುಳಿವು ಸಿಕ್ಕಿದೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿದ ಆರೋಪದಲ್ಲಿ
ಶ್ವೇತಾಗೌಡರನ್ನು ಬಂಧಿಸಲಾಗಿತ್ತು. ಆರೋಪಿ ಶ್ವೇತಾಗೌಡ ಬಂಧಿತರಾಗಿದ್ದರೂ ಕೂಡ, ಚಿನ್ನದ ಮೂಲ ಗೊತ್ತಾಗಿರಲಿಲ್ಲ. ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ ಹೋಗಿ ಹುಡುಕಾಡಿದರೂ ಕೂಡ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ.
ಆ ಬಳಿಕ ಶ್ವೇತಾಗೌಡ ನೀಡಿದ ಸುಳಿವು ಆಧರಿಸಿ
ಜೋಧಪುರದಲ್ಲಿ ಮೋಹನ್ ಲಾಲ್ ಎಂಬಾತನನ್ನು ಬಂಧಿಸಿದ ಕರೆತಂದಾಗ ಚಿನ್ನ ಎಲ್ಲಿದೆ ಎಂಬ ಮಾಹಿತಿ ಬಯಲಾಗಿದೆ.
ನವರತ್ನ ಜ್ಯುವೆಲರಿ ಮಾಲೀಕ ಸಂಜಯ್ ಭಾಷಾ ಬಳಿ ಶ್ವೇತಾ ಗೌಡ ಪಡೆದಿದ್ದ 2 ಕೆ.ಜಿ 945 ಗ್ರಾಂ ಚಿನ್ನದಲ್ಲಿ 800 ಗ್ರಾಂ ವಶ ಪಡಿಸಿಕೊಳ್ಳಲಾಗಿತ್ತು. ಉಳಿದ 2 ಕೆ.ಜಿ 145 ಗ್ರಾಂ ಚಿನ್ನದ ಸುಳಿವೇ ಸಿಕ್ಕಿರಲಿಲ್ಲ. ಶ್ವೇತಾ ವಿಚಾರಣೆ ವೇಳೆ ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್‌ಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಳು.
ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್ ಬಂಧಿಸಿ ವಿಚಾರಣೆ ನಡೆಸಿದಾಗ ಚೆನ್ನಾರಾಮ್‌ನ ಸಂಬಂಧಿ ಮೋಹನ್ ಲಾಲ್ ಚಿನ್ನಾಭರಣ ಪಡೆದಿರೋದಾಗಿ ಮಾಹಿತಿ ನೀಡಿದ್ದ. ಮೋಹನ್ ಲಾಲ್‌ನ ಜೋಧಪುರದಿಂದ ಬಂಧಿಸಿ ಕರೆತಂದಾಗ ಬಾಗಲಗುಂಟೆಯ ತೋಟದ ಗುಡ್ಡದಹಳ್ಳಿಯ ಬೇರಾರಾಮ್ ಬಳಿಯಿದೆ ಎಂದು ಮಾಹಿತಿ ನೀಡಿದ್ದಾನೆ.
ಬೇರಾ ರಾಮ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ನಂಬರ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರು ಬಿಟ್ಟು ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದಾನೆ. ಸದ್ಯ ನಾಪತ್ತೆಯಾಗಿರುವ ಬೇರಾ ರಾಮ್‌ಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ