ಬೆಂಗಳೂರು
ಲೋಕಸಭೆಗೆ ಆಯ್ಕೆಯಾದ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಭರ್ಜರಿ ರಂಗು ಬಂದಿದೆ.
ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ ಅಭ್ಯರ್ಥಿಗಳು ಯಾರು ಎಂದು ಅಂತಿಮವಾಗಿಲ್ಲ ಆದರೂ ಈಗಲೇ ಮತದಾರರ ಮನ ಗೆಲ್ಲಲು ಟಿಕೆಟ್ ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ ಇವರಿಗೆ ಗೌರಿ ಗಣೇಶ ಹಬ್ಬ ವರದಾನವಾಗಿದೆ.
ಟಿಕೆಟ್ ಸಿಗಲಿ, ಬಿಡಲಿ ತಮ್ಮ ಸ್ಪರ್ಧೆ ಖಾಯಂ ಎನ್ನುತ್ತಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ ಇದೀಗ ಮತದಾರರ ಮನೆಗೆಲ್ಲಲು ಗಣೇಶ ಮೂರ್ತಿಗಳನ್ನು ಹಂಚಲು ಮುಂದಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪ್ರತಿಷ್ಠಾಪಿಸಲಾಗುವ ಸಾರ್ವಜನಿಕ ಗಣೇಶ ಉತ್ಸವಗಳಿಗೆ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿತರಿಸುತ್ತಿದ್ದಾರೆ ಜೊತೆಗೆ ಚಂದಾ ಕೂಡ ನೀಡುತ್ತಿದ್ದಾರೆ.
ಮತ್ತೊಂದೆಡೆ ಎನ್ ಡಿ ಎ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಹೇಳುತ್ತಿರುವ ಜಯಮುತ್ತು ಅವರು ಕೂಡಾ ಈ ವಿಷಯದಲ್ಲಿ ಯೋಗೇಶ್ವರ್ ಜೊತೆಗೆ ಪೈಪೋಟಿಗೆ ಇದ್ದಾರೆ ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷ 1001 ಗಣೇಶ ಮೂರ್ತಿಗಳನ್ನು ಹಂಚಲು ನೋಂದಣಿ ಆರಂಭಿಸಿದ್ದಾರೆ. ಒಟ್ಟಾರೆ ಬೊಂಬೆ ನಾಡು ಚನ್ನಪಟ್ಟಣದ ಚುನಾವಣೆ ಕುತೂಹಲ ಮೂಡಿದೆ