ಮೈಸೂರು,ಏ.6-ಮಚ್ಚು ಹಿಡಿದು ರೀಲ್ಸ್ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಕಾನೂನು ಸಂಕಷ್ಟ ಅನುಭವಿಸಿದ ಪ್ರಕರಣ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಯುವಕನೊಬ್ಬ ಗನ್ ಹಿಡಿದು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ನಗರದ ಟಿ.ಕೆ.ಬಡಾವಣೆಯ ಯುವಕನೊಬ್ಬ ಗನ್ ಹಿಡಿದು ವೀಡಿಯೋ ಮಾಡಿದ್ದಾನೆ. ಜ್ಯುವೆಲರಿ ಶಾಪ್‌ವೊಂದರ ಮಾಲೀಕನ ಮಗ ಈತ ಎಂದು ತಿಳಿದುಬಂದಿದೆ. ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಗನ್ ಹಿಡಿದು ಸರ್ಕಾರಿ ವಾಹನದಲ್ಲಿ ಕುಳಿತು ವಿಡಿಯೋ ಪ್ರಸಾರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರಸ್ವತಿಪುರಂ ಹಾಗೂ ಕೃಷ್ಣರಾಜ ಪೊಲೀಸರಿಂದ ಆರೋಪಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ಇದು ಹಳೆಯ ವೀಡಿಯೋ ಎಂದು ಯುವಕ ಮಾಹಿತಿ ನೀಡಿದ್ದಾರೆ.
ತಾನು ಹಿಡಿದಿರುವುದು ಅಸಲಿ ಗನ್ ಅಲ್ಲ, ಅದು ಪಟಾಕಿ ಗನ್. ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ವೀಡಿಯೋ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸರ್ಕಾರಿ ವಾಹನ ಯಾವುದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
Previous Articleಮೂರು ತಿಂಗಳಲ್ಲಿ 50 ಕಿಲೋ ಚಿನ್ನ ತಂದ ನಟಿ ರನ್ಯಾ
Next Article ಏನಿದು ಅಮಾನವೀಯ ಘಟನೆ