Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗರ್ಭಿಣಿಯರ ಕಾಡುವ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌
    ಸುದ್ದಿ

    ಗರ್ಭಿಣಿಯರ ಕಾಡುವ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌

    vartha chakraBy vartha chakraಏಪ್ರಿಲ್ 16, 2022Updated:ಏಪ್ರಿಲ್ 16, 2022ಯಾವುದೇ ಟಿಪ್ಪಣಿಗಳಿಲ್ಲ5 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
     ವರ್ಷಕ್ಕೆ 3,75,000 ಅಮೆರಿಕದ ಮಹಿಳೆಯರು ಈ ಕಾಯಿಲೆಯಿಂದಾಗಿ ಆಸ್ಪತೆಗೆ ದಾಖಲಾಗುತ್ತಾರೆ. ಡೀಹೈಡ್ರೇಷನ್‌, ವಿಟಮಿನ್‌ ಮತ್ತು ಖನಿಜಗಳ ಕೊರತೆ, ದೇಹದ ತೂಕ 5 ಪ್ರತಿಶತದಷ್ಟು ಕಡಿಮೆಯಾಗುವುದು ಈ ರೋಗದ ವಿಶಿಷ್ಟ ಲಕ್ಷಣ. ಕಾಯಿಲೆ ಉಲ್ಬಣವಾದಂತೆ ಪಕ್ಕೆಲುಬುಗಳ ಮುರಿತ, ರೆಟಿನಾಗಳ ಸಮಸ್ಯೆ, ಕಿವಿಯ ತಮಟೆ ಮೇಲೆ ಪರಿಣಾಮ, ಅನ್ನನಾಳದ ಮೇಲೆ ಪರಿಣಾಮ, ಮಿದುಳಿನ ಸಮಸ್ಯೆ ಜತೆಗೆ ರೋಗಿಗಳು ಭ್ರಮೆಗೆ ತುತ್ತಾಗುವ ಸಾಧ್ಯತೆಯೂ ಇದೆ.  

    ಜೀವವೊಂದಕ್ಕೆ ಜನ್ಮ ನೀಡುವ ಹೆಣ್ಣಿನ ಜೀವನದ ಮಹತ್ತರ ಘಟ್ಟವೊಂದರ ಬಗ್ಗೆ ಸಮಾಜಕ್ಕಿರುವ ಅರಿವು ಕೊಂಚ ಕಡಿಮೆ. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ವಾಕರಿಕೆ, ವಾಂತಿಯಂತಹ ಲಕ್ಷಣಗಳು ಸರ್ವೇಸಾಮಾನ್ಯವೆಂದೇ ಜನರು ಭಾವಿಸುತ್ತಾರೆ. ಈ ಲಕ್ಷಣಗಳು ತೀವ್ರವಾಗಿ, ಸಮಸ್ಯೆ ಪುನರಾವರ್ತನೆಯಾದರೂ ಅದನ್ನು ನಿರ್ಲಕ್ಷಿಸುವುದನ್ನು ನಾವು ನೀವೆಲ್ಲರೂ ನೋಡಿಯೇ ಇರುತ್ತೇವೆ. ಆದರೆ, ಇಂತಹದ್ದೊಂದು ಸಮಸ್ಯೆ ತಾಯಿಯ ಗರ್ಭದಲ್ಲಿರುವ ಮಗುವನ್ನೇ ಕೊಲ್ಲುವಷ್ಟು ಕ್ರೂರವಾಗಬಹುದು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ವೈದ್ಯಕೀಯ ಭಾಷೆಯಲ್ಲಿ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌ ಎಂದು ಹೆಸರಿಸಲಾಗಿರುವ ಈ ಸಮಸ್ಯೆ ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ಲಕ್ಷಣದ ತೀವ್ರ ಸ್ವರೂಪವಾಗಿದ್ದು, ಎಷ್ಟೋ ದಂಪತಿಗಳ ಕನಸನ್ನೇ ತಿಂದು ಹಾಕಿದೆ. ಈ ಸಮಸ್ಯೆ ಕುರಿತಾದ ವರದಿ ಇಲ್ಲಿದೆ. 

    ಮೊದಲ ಕೂಸಿನ ಕನಸು ಕಮರಿತು 
    ಪ್ರತಿ ಹೆಣ್ಣಿಗೂ ತನ್ನ ಗರ್ಭದಲ್ಲೊಂದು ಕೂಸು ಹುಟ್ಟಬೇಕೆಂಬ ಆಸೆ ಇರುತ್ತದೆ. ಇಂತಹದ್ದೇ ಆಸೆ ಹೊತ್ತ‌ ಮಹಿಳೆಯೊಬ್ಬರಿಗೆ ಗರ್ಭವತಿಯಾದ ಮೊದಲ 6 ವಾರದಲ್ಲಿ ವಾಂತಿ ಕಾಣಿಸಿಕೊಂಡಾಗ ಇದು ಗರ್ಭಧಾರಣೆಯ ಲಕ್ಷಣವೆಂದೇ ಭಾವಿಸಿದ್ದರು. ಆ ಬಗ್ಗೆ ಹೆಚ್ಚೇನು ಚಿಂತಿಸಿರಲಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವ ಇತರ ದಂಪತಿಗಳಂತೆಯೇ ಕೊಠಡಿಯೊಂದರಲ್ಲಿ ಆಟಿಕೆಗಳನ್ನು ಸಂಗ್ರಹಿಸುತ್ತಾ, ಕೂಸು ಹುಟ್ಟುವ ಮೊದಲೇ ಹೆಸರು ಏನಿಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಾ ಸಂತಸವಾಗಿದ್ದರು. ಆದರೆ, ಈ ಎಲ್ಲ ಖುಷಿಯನ್ನೂ ಅದೊಂದು ರೋಗ ತಿಂದು ಹಾಕಿಬಿಟ್ಟಿತ್ತು. ಅದೇ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌! ಮಗುವಿನ ನಿರೀಕ್ಷೆಯಲ್ಲಿದ್ದ ಆ ತಾಯಿಯ ಕನಸು ಕೊನೆಗೊಂಡಿದ್ದು ಗರ್ಭಪಾತದಲ್ಲಿ. 

    ನಿರ್ಲಕ್ಷ್ಯವೇ ಕುತ್ತಾಯಿತೇ?
    ವಾಂತಿ ಶುರುವಾದ ಮೊದಲ ದಿನಗಳು ಇದು ಸಾಮಾನ್ಯವೆಂದೇ ದಂಪತಿ ಭಾವಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಈ ಲಕ್ಷಣ ತೀವ್ರ ಸ್ವರೂಪಕ್ಕೆ ಬದಲಾಗಿಬಿಟ್ಟಿತ್ತು. ದಿನಕ್ಕೆ ಕನಿಷ್ಠ 20 ಬಾರಿಯಾದರೂ ಆಕೆ ವಾಂತಿ ಮಾಡುತ್ತಿದ್ದಳು. ಪತಿಯ ಬಳಿ ಇದು ಸಾಮಾನ್ಯ ಲಕ್ಷಣದಂತಿಲ್ಲ, ತೀವ್ರ ಪ್ರಮಾಣದಲ್ಲಿ ವಾಂತಿಯಾಗುತ್ತಿದೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಳು. ದಿನಪೂರ್ತಿ ತಮ್ಮ ಕೋಣೆಯಲ್ಲಿಯೇ ಬಂಧಿಯಾಗಿ, ಕನಿಷ್ಠ ಊಟ, ತಿಂಡಿಗೂ ತೀವ್ರ ಹಿಂಸೆಯಾಗುತ್ತಿತ್ತು. ಲಕ್ಷಣ ತೀವ್ರವಾದಂತೆ ಆಕೆಯ ಸ್ನಾಯುಗಳ ಮೇಲೂ ಪ್ರಭಾವ ಬೀರಿ, ಸ್ನಾನ ಮಾಡುವುದಕ್ಕೂ, ಬಟ್ಟೆ ಬದಲಿಸುವುದಕ್ಕೂ ಕಷ್ಟವಾಗುತ್ತಿತ್ತು. ಎಲ್ಲಿಯೇ ಹೋದರೂ ಜತೆಯಲ್ಲಿ ವಾಂತಿಮಾಡಲು ಬಕೆಟ್‌ ಕೊಂಡೊಯ್ಯಬೇಕಿತ್ತು. ಕೊನೆಯ ಹಂತದಲ್ಲಂತೂ ಆಕೆ ಹಾಸಿಗೆಯಿಂದ ಮೇಲೇಳಲು ಕೂಡ ಆಗದ ಅಸ್ವಸ್ಥ ಸ್ಥಿತಿಯಲ್ಲಿ ಇರುತ್ತಿದ್ದಳು. ಒಂದರ್ಥದಲ್ಲಿ ಮೊದಲಿಗೆ ಲಕ್ಷಣವನ್ನ ನಿರ್ಲಕ್ಷಿಸಿದ್ದೇ ಇಷ್ಟೆಲ್ಲ ಗಂಭೀರ ಸಮಸ್ಯೆಗೆ ಕಾರಣವಾಯಿತು ಎಂದೆನಿಸುತ್ತದೆ ಎಂದು ಆಕೆಯ ಪತಿ ಅಭಿಪ್ರಾಯ ಪಟ್ಟಿದ್ದಾರೆ.

    ಅಪರೂಪದ ಕಾಯಿಲೆ ಹೈಪರ್‌ಮೆಸಿಸ್‌
    ಹೈಪರ್‌ಮೆಸಿಸ್‌ ಗ್ರಾವಿಡಾರಮ್‌ ಗರ್ಭಿಣಿಯರಲ್ಲಿ‌ ಕಾಣಿಸಿಕೊಳ್ಳುವ ಅಪರೂಪದ ಕಾಯಿಲೆ. ಗರ್ಭ ಧರಿಸುವವರಲ್ಲಿ 1% ಮಂದಿಗೆ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ತೀವ್ರ ಮತ್ತು ನಿರಂತರವಾದ ವಾಕರಿಕೆ ಮತ್ತು ವಾಂತಿ ಈ ರೋಗದ ಪ್ರಮುಖ ಲಕ್ಷಣ. ಕೆಲ ವೈದ್ಯರು ಈ ಸಮಸ್ಯೆಯನ್ನು ಹೈಪರ್‌ಮೆಸಿಸ್‌ ಎಂದು ಆರಂಭದಲ್ಲಿ ಗ್ರಹಿಸಲಾಗದೇ ಸೈಕೋಸೊಮ್ಯಾಟಿಕ್‌ ಎಂದು ಭಾವಿಸಿ ಎಷ್ಟೋ ಬಾರಿ ನಿರ್ಲಕ್ಷಿಸಿ ಬಿಟ್ಟಿರುತ್ತಾರೆ. ಆದರೆ, ಹೈಪರ್‌ಮೆಸಿಸ್‌ ಗ್ರಾವಿಡಾರಮ್‌ನ ನಿರ್ಲಕ್ಷ್ಯ ತೀವ್ರ ಅಪಾಯಕಾರಿ. ವರ್ಷಕ್ಕೆ 3,75,000 ಅಮೆರಿಕದ ಮಹಿಳೆಯರು ಈ ಕಾಯಿಲೆಯಿಂದಾಗಿ ಆಸ್ಪತೆಗೆ ದಾಖಲಾಗುತ್ತಾರೆ. ಡೀಹೈಡ್ರೇಷನ್‌, ವಿಟಮಿನ್‌ ಮತ್ತು ಖನಿಜಗಳ ಕೊರತೆ, ದೇಹದ ತೂಕ 5 ಪ್ರತಿಶತದಷ್ಟು ಕಡಿಮೆಯಾಗುವುದು ಈ ರೋಗದ ವಿಶಿಷ್ಟ ಲಕ್ಷಣ. ಕಾಯಿಲೆ ಉಲ್ಬಣವಾದಂತೆ ಪಕ್ಕೆಲುಬುಗಳ ಮುರಿತ, ರೆಟಿನಾಗಳ ಸಮಸ್ಯೆ, ಕಿವಿಯ ತಮಟೆ ಮೇಲೆ ಪರಿಣಾಮ, ಅನ್ನನಾಳದ ಮೇಲೆ ಪರಿಣಾಮ, ಮಿದುಳಿನ ಸಮಸ್ಯೆ ಜತೆಗೆ ರೋಗಿಗಳು ಭ್ರಮೆಗೆ ತುತ್ತಾಗುವ ಸಾಧ್ಯತೆಯೂ ಇದೆ 

    ಜತೆಗಾರರ ಮನೋಬಲ ಅತ್ಯಗತ್ಯ
     ಆರೋಗ್ಯ ಸ್ಥಿತಿ ಹದಗೆಟ್ಟಾಗ ಅದರಲ್ಲಿಯೂ ಇಂತಹ ಸಮಸ್ಯೆಗಳಿಗೆ ತುತ್ತಾದಾಗ ರೋಗಿಗಳ ಆರೈಕೆ ಮಾಡುವುದರ ಜತೆಗೆ ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸುವುದು ಕೂಡ ಅತೀ ಮುಖ್ಯವಾಗುತ್ತದೆ. ಸಮಸ್ಯೆಯನ್ನು ನಿರ್ಲಕ್ಷಿಸದೇ ತಮ್ಮ ಸಂಗಾತಿ ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು? ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಎಂಬುದರಿಂದ ರೋಗ ಲಕ್ಷಣಗಳು ಕಡಿಮೆಯಾಗುತ್ತಿವೆಯೇ ಅಥವ ಉಲ್ಬಣಗೊಳ್ಳುತ್ತಿವೆಯೇ ಎಂಬುದರ ಮೇಲ್ವಿಚಾರಣೆ ನಡೆಸುವವರೆಗೂ ರೋಗಿಗಳ ಜತೆಗಿರುವ ಸಂಗಾತಿಗಳ ಪಾತ್ರ ಜವಾಬ್ದಾರಿಯುತವಾಗಿರಲೇ ಬೇಕಿರುತ್ತದೆ. ಈ ಕಾಯಿಲೆಯಿಂದ‌‌ ಬಳಲುತ್ತಿದ್ದ ಮಹಿಳೆ ತಮ್ಮ ಕೆಲಸವನ್ನೂ ತೊರೆಯಬೇಕಾಯಿತು. ಆ ಸಂದರ್ಭದಲ್ಲಿ ಧೃತಿಗೆಡದ ಪತಿ, ಆರ್ಥಿಕ ಪರಿಸ್ಥಿತಿ ನಿಭಾಯಿಸುವುದರ ಜತೆಗೆ ಮನೆಯಲ್ಲಿನ ದೈನಂದಿನ ಕೆಲಸ, ಪತ್ನಿಯ ಆರೈಕೆಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅಲ್ಲದೇ, ಕೊರೋನಾ ಸಂದರ್ಭವಾಗಿದ್ದ ಕಾರಣ, ಪತ್ನಿಯ ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಕಾಳಜಿ ವಹಿಸಿದ್ದರು. ಮನೆಗೆಲಸಗಳ ಸಂಪೂರ್ಣ ಹೊರೆಯಿಂದಾಗಿ ಪತಿಗೆ ಆಗಾಗ ಬೇಸರವಾಗುತ್ತಿತ್ತಾದರೂ, ಅದರ ಪರಿಣಾಮ ಪತ್ನಿಯ ಮೇಲೆ ಬೀಳದಂತೆ ಜಾಗ್ರತೆ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಹೈಪರ್‌ಮೆಸಿಸ್‌ ಹೊಸದಲ್ಲ
    ಆ್ಯಮಿ ತುತ್ತಾಗಿದ್ದ ಕಾಯಿಲೆ ಹೊಸದೇನಲ್ಲ. 1950ರ ಅವಧಿಯಲ್ಲಿವರದಿಯಾದ ತಾಯಿಯರ ಮರಣ ಪ್ರಮಾಣದಲ್ಲಿಪ್ರಮುಖ ಕಾರಣ ಇದೇ ಕಾಯಿಲೆಯಾಗಿದೆ. ಗರ್ಭಾವಸ್ಥೆಯಲ್ಲಿ ಈ ರೋಗದ ಪರಿಣಾಮ ತೀವ್ರವಾಗಿರಲಿದ್ದು, ಇದರಿಂದಾಗಿ ಕೆಲವರು ಹೊಟ್ಟೆಯಲ್ಲೇ ಮಕ್ಕಳನ್ನು ಕಳೆದುಕೊಂಡರೇ, ಕೆಲವು ತಾಯಂದಿರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾದಂತಹ ಪ್ರಸಂಗವೂ ವರದಿಯಾಗಿದೆ. ಮತ್ತೂ ಕೆಲವು ಸಂದರ್ಭಗಳಲ್ಲಿಈ ಕಾಯಿಲೆಗೆ  ತುತ್ತಾದ ತಾಯಿಯ ಮಗುವಿಗೆ ಬುದ್ಧಿಶಕ್ತಿ, ಜ್ಞಾಪಕ ಶಕ್ತಿ (ಎಡಿಎಚ್‌ಡಿ) ಸಂಬಂಧಿತ ತೊಂದರೆಗಳು ವರದಿಯಾಗಿದ್ದಿದೆ. 

    ಸಾವಿರ ವರುಷಗಳ ಇತಿಹಾಸ 
    ಸುಮಾರು 1,900 ವರ್ಷಗಳ ಹಿಂದೆಯೂ ಮಹಿಳೆಯರು ಈ ರೋಗಗಳಿಗೆ ತುತ್ತಾಗಿದ್ದರು ಎಂದು ಇಂದಿನ ಸಂಶೋಧನೆಗಳು ಬಹಿರಂಗಪಡಿಸಿವೆ. ಆದರೆ, ವೈದ್ಯರು ಈ ಕಾಯಿಲೆಯನ್ನು ಗುರುತಿಸುವಲ್ಲಿ ಅಥವ ವ್ಯಾಖ್ಯಾನಿಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. 19 ಮತ್ತು 20ನೇ ಶತಮಾನದ ಆರಂಭದಲ್ಲಿ ಗರ್ಭಾಶಯದಲ್ಲಿ ಗಾಯಗಳಾಗುವ ಕಾರಣ ಈ ರೀತಿ ವಾಂತಿಯಾಗುತ್ತದೆ ಅಥವ ಅಸಮತೋಲನ ಕಾರಣವಿರಬಹುದೆಂದು ಊಹಿಸಲಾಗಿತ್ತು. ಜತೆಗೆ ಪ್ರೊಜೆಸ್ಟರಾನ್‌ , ರಕ್ತಸ್ರಾವ, ಥಾಲಿಡೋಮೈಡ್‌, ಹಿಸ್ಟೀರಿಯಾದಂತಹ ರೋಗಗಳಿಗೆ ಮಹಿಳೆಯರು ತುತ್ತಾಗಿದ್ದಾರೆಂದೂ ಹಲವು ವೈದ್ಯರು ಭಾವಿಸಿದ್ದರು ಎನ್ನಲಾಗಿದೆ.

    ಮಾನಸಿಕ ಒತ್ತಡ ಹೆಚ್ಚು 
    ಗರ್ಭಾವಸ್ಥೆಯಲ್ಲಿ ಕೆಲ ಮಹಿಳೆಯರಿಗೆ ಉಂಟಾಗುವ ಮಾನಸಿಕ ಒತ್ತಡವನ್ನು ಜನರು ಹುಚ್ಚು ಎಂದು ತಪ್ಪಾಗಿ ಭಾವಿಸಿದ್ದ ಅನೇಕ ಉದಾಹರಣೆಗಳಿವೆ. ಆದರೆ, ಸಂಶೋಧನೆಗಳ ಪ್ರಕಾರ ಹೈಪರ್‌ಮೆಸಿಸ್‌ ಗ್ರಾವಿಡಾರಮ್‌ ಹೊಂದಿರುವ ಶೇ.80ಮಹಿಳೆಯರು ಈ ರೀತಿ ಮಾನಸಿಕ ಒತ್ತಡಗಳಿಗೆ ಗುರಿಯಾಗಿರುತ್ತಾರೆ ಎಂದು 2008ರ ಅಧ್ಯಯನವೊಂದು ಸಾಬೀತುಪಡಿಸಿದೆ. ಈ ಮಾನಸಿಕ ಒತ್ತಡಗಳಿಗೆ ಪ್ರಮುಖ ಕಾರಣವೆಂದರೆ ಉದ್ಯೋಗ ನಷ್ಟ  ವೈದ್ಯಕೀಯ ವೆಚ್ಚ.

    ದಾಂಪತ್ಯ ಕೊನೆಗೊಳಿಸುವ ಸಾಧ್ಯತೆ 
    ಖಿನ್ನತೆ, ಆತಂಕ ಮತ್ತು ಆತ್ಮಹತ್ಯೆ ಆಲೋಚನೆಗಳು ಕೂಡ ಈ ಕಾಯಿಲೆಗೆ ತುತ್ತಾದ ಗರ್ಭಿಣಿಯರಿಗೆ ಕಾಡುತ್ತಿರುತ್ತದೆ. 2016ರ ಅಧ್ಯಯನದ ಪ್ರಕಾರ ಗರ್ಭ ಧರಿಸಿದ ಪೈಕಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ವೈವಾಹಿಕ ಸಮಸ್ಯೆಗಳನ್ನು ಹೊಂದಿದ್ದಾರೆ. ಶೇ.41 ಮಹಿಳೆಯರು ಸಂಗಾತಿಯೊಂದಿಗೆ ಸಮಸ್ಯೆ (ಉದ್ಯೋಗದ ವಿಚಾರ, ಆರ್ಥಿಕ ಪರಿಸ್ಥಿತಿ ಹಾಗೂ ಕಾಳಜಿ )ಹೊಂದಿರುತ್ತಾರೆ. ಈ ಸಮಸ್ಯೆಗೆ ತುತ್ತಾದ ಮಹಿಳೆಯರ ಪೈಕಿ ಶೇ.3ರಷ್ಟು ಮಹಿಳೆಯರು ವಿಚ್ಚೇದನ ಪಡೆದುಕೊಂಡಿದ್ದಾರೆ.  

    ಕುಟುಂಬ, ಸ್ನೇಹಿತರ ಅಗತ್ಯವಿದೆ
    ಯಾವುದೇ ಗರ್ಭಿಣಿ ಈ ರೋಗಕ್ಕೆ ತುತ್ತಾಗಿದ್ದಾರೆಂದು ತಿಳಿದ ಬಳಿಕ ಆಕೆಯ ಸಂಪೂರ್ಣ ಜವಾಬ್ದಾರಿ ಸಂಗಾತಿಯ ಹೆಗಲಿಗೇರುತ್ತದೆ. ಸಮಸ್ಯೆಯನ್ನು ಪವಾಡಗಳ ಮೂಲಕ ಬಗೆಹರಿಸಲಾಗುವುದಿಲ್ಲ. ವೈದ್ಯರ ಸಲಹೆ, ಚಿಕಿತ್ಸೆಗಳು ಅಗತ್ಯ. ಜತೆಗೆ ಮಾನಸಿಕವಾಗಿ ರೋಗಿಯನ್ನು ಸದೃಢವಾಗಿರಲು ಒಂಟಿತನ ಕಾಡದಿರುವಂತೆ, ತಾನು ಮತ್ತೊಬ್ಬರಿಗೆ ಹೊರೆ ಎಂದು ಆಕೆಗೆ ಕಾಡದಂತೆ ನೋಡಿಕೊಳ್ಳುವುದು ಅಗತ್ಯವಾಗಿದ್ದು, ಇದಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರ ಅಗತ್ಯವಿದೆ‌.

    ಸಮಸ್ಯೆಗೆ ಒಳಗಾದವರು ಈ ಸಲಹೆಗಳ ಪಾಲಿಸಿ   

    1. ಆಪ್ತರೊಂದಿಗೆ ಸಮಯ ಕಳೆಯಿರಿ : ಸಮಸ್ಯೆಗಳು ಸಾಮಾನ್ಯ ಇದೂ ಕೂಡ ಒಂದು ಆರೋಗ್ಯ ಸಮಸ್ಯೆ ಅಷ್ಟೇ.. ಇದನ್ನು ನಾನು ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಬಹಳ ಮುಖ್ಯ. ಸಂಗಾತಿಯೊಂದಿಗೆ ಮಾತ್ರವಲ್ಲದೇ, ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಸಾಧ್ಯವಾಷ್ಟು  ಸಕಾರಾತ್ಮಕ ಚಿಂತನೆಗಳ ಅಳವಡಿಸಿಕೊಳ್ಳಿ.

    2. ಸ್ವತಃ ಕಾಳಜಿ ಇರಲಿ :
    ಸಾಮಾನ್ಯವಾಗಿ ಇಂತಹ ರೋಗ ನಿಮ್ಮ ಅನುಭವಕ್ಕೆ ಬಂದರೂ ಅದನ್ನು ಬೇರೆಯವರಿಗೆ ವಿವರಿಸಿದರೂ ಅರ್ಥೈಸಿಕೊಳ್ಳುವುದು ಕಷ್ಟ. ಅಂತಹ ಸಂದರ್ಭದಲ್ಲಿ ನಿಮ್ಮ ಸಮಸ್ಯೆ ಕೇಳುವವರೇ ಯಾರು ಇಲ್ಲ ಎನಿಸುವುದು ಸಹಜ. ಅಂತಹ ಪರಿಸ್ಥಿತಿಗಳಲ್ಲಿ ಆ ವಿಚಾರಗಳನ್ನು ಕುಟುಂಬಸ್ಥರ ಜತೆಗೆ ಹಂಚಿಕೊಳ್ಳಿ. ಆಗುತ್ತಿರುವ ಸಮಸ್ಯೆಗಳನ್ನು ವೈದ್ಯರಿಗೆ ಬಿಡಿಸಿ ಹೇಳಿ. ನಿಮ್ಮ ಕಾಳಜಿ ಕೂಡ ನಿಮ್ಮದೇ ಹೊಣೆ ಎಂಬುದು ನೆನಪಿರಲಿ.

    3. ಸಹಾಯ ಸ್ವೀಕಾರ ತಪ್ಪಲ್ಲ: ನಿಮ್ಮ ಕಷ್ಟದ ಪರಿಸ್ಥಿತಿಗಳಲ್ಲಿ ಸ್ನೇಹಿತರು, ಕುಟುಂಬಸ್ಥರ ಸಹಾಯ ತೆಗೆದುಕೊಳ್ಳುವುದು ತಪ್ಪೇನಲ್ಲ. ಮನೆಗೆಲಸ, ಊಟದ ತಯಾರಿ ಇಂತಹ ವಿಚಾರಗಳಲ್ಲಿ ನಿಮ್ಮ ಸಂಗಾತಿಗೆ ಪೂರ್ತಿ ಹೊರೆಯಾಗದಿರಲು ಕುಟುಂಬಸ್ಥರ ಸಹಾಯ ಕೇಳಿ. ಸಹಾಯ ಪಡೆಯಲು ಹಿಂಜರಿಯದಿರಿ.
     
    4. ಸಹನೆ ಎಂದಿಗೂ ಕಳೆದುಕೊಳ್ಳಬೇಡಿ: ವಿಚಾರ ರೋಗಕ್ಕೆ ತುತ್ತಾದ ಮಹಿಳೆ ಹಾಗು ಅವಳ ಸಂಗಾತಿ ಇಬ್ಬರಿಗೂ ಅನ್ವಯಿಸುತ್ತದೆ. ಆಕೆಯ ಸಮಸ್ಯೆಗಳಿಗೆ ಬೇಸತ್ತು ಎಂದಿಗೂ ಸಹನೆ ಕಳೆದುಕೊಳ್ಳಬಾರದು ಹಾಗೆಯೇ ಮಹಿಳೆ ಕೂಡ ಸಹನೆ ಕಳೆದುಕೊಂಡು ಕೆಟ್ಟ ನಿರ್ಣಯಗಳತ್ತ ಹೆಜ್ಜೆ ಇಡದಿರುವುದು ಬಹಳ ಮುಖ್ಯ.

    5. ಅನುವಂಶಿಕವಾಗಿರಬಹುದು  ಅಮೆರಿಕದ ಸಂಶೋಧಕ ಫೆಜ್ಜೋ ಅವರ ತಂಡವು ಹೈಪರ್‌ಮೆಸಿಸ್‌ ಗ್ರಾವಿಡಾರಮ್‌ ಅನುವಂಶಿಕ ಮತ್ತು ಹಾರ್ಮೋನ್‌ಗಳಿಗೆ ಸಂಬಂಧಿಸಿದ ಕಾಯಿಲೆ ಎಂಬ ವಾದವನ್ನು ಮಂಡಿಸಿದೆ. ಕಾಯಿಲೆಗೆ ಗುರಿಪಡಿಸುವ ಹಾರ್ಮೋನ್‌ಗಳನ್ನು ಗುರಿಯಾಗಿಸುವ ಔಷಧಗಳ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಕ್ಯಾಚೇಕ್ಸಿಯಾ, ಬೊಜ್ಜು ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಿರುವ ಔಷಧಗಳನ್ನೇ ಈ ರೋಗಕ್ಕೂ ಬಳಸಬಹುದು. ಆದರೆ, ಅವುಗಳ ಪರಿಣಾಮ ನಿಧಾನಗತಿಯದ್ದಾಗಿರುತ್ತದೆ. ಈ ರೀತಿ ಚಿಕಿತ್ಸೆ ಪಡೆದ ಮಹಿಳೆಯರು ರೋಗಕ್ಕೆ ತುತ್ತಾಗಿದ್ದರೂ 9 ತಿಂಗಳ ನಂತರ ಮಗುವಿಗೆ ಜನ್ಮ ನೀಡುತ್ತಾರೆ ಅನೇಕ ಪ್ರಕರಣಗಳಲ್ಲಿ ಹೆರಿಗೆಯ ನಂತರ ಸಮಸ್ಯೆ ಕೊನೆಗೊಂಡಿರುವುದೂ ಇದೆ.   

    6. ಭರವಸೆಯೇ ಬದುಕು ಮರೆಯದಿರಿ  ಹೈಪರ್‌ಮೆಸಿಸ್‌ಗೆ ತುತ್ತಾಗಿದ್ದು, ಆ ರೋಗದಿಂದ ಚೇತರಿಸಿಕೊಂಡಿದ್ದು ಒಂದು ಹಂತವಾದರೆ, ರೋಗದಿಂದಾಗಿ ತನ್ನ ಮಗುವನ್ನು ಕಳೆದುಕೊಂಡಿದ್ದು, ಆ ನೋವಿನಿಂದ ಚೇತರಿಸಿಕೊಳ್ಳುವುದು ಮತ್ತೊಂದು ಸವಾಲು.‌ 4 ಮಕ್ಕಳನ್ನು ಹೊಂದಬೇಕು ಎಂಬ ಆಸೆಯಿದ್ದ ದಂಪತಿಯ ಮೊದಲ ಮಗುವೇ ರೋಗಕ್ಕೆ ಬಲಿಯಾದಾಗ ಆದ ಸಂಕಟ ಹೇಳತೀರದ್ದು. ಇದೇ ರೀತಿಯ ಭಾವನೆ ಮಗುವನ್ನು ಕಳೆದುಕೊಂಡ ಮಹಿಳೆಯಲ್ಲಿ ಇರುತ್ತದೆ. ಆದರೆ ಭರವಸೆಯನ್ನು ಎಂದಿಗೂ ಬಿಡದಿರಿ. ಏಕೆಂದರೆ 2021ರ ಜೂನ್‌ 12ರಂದು ಈ ರೋಗಕ್ಕೆ ತುತ್ತಾಗಿದ್ದ ಮಹಿಳೆಯ ಹಿಂದಿನ ನೋವನ್ನು ಮರೆಸುವ ಅದ್ಭುತ ಘಟಿಸಿತ್ತು. ದಂಪತಿಗೆ ಹೆಣ್ಣು ಮಗುವಿನ ಜನನವಾಗಿತ್ತು. ಮಗುವಿನ ಜನನದ ಬಳಿಕ ಜೀವನ ಉತ್ತಮವಾಗಿದ್ದು, ದಂಪತಿ ಖುಷಿಯಾಗಿದ್ದಾರೆ. ಗರ್ಭವತಿಯಾದರೆ ಮತ್ತೆ ಸಮಸ್ಯೆಗೆ ತುತ್ತಾಗಬಹುದೆಂಬ ಆತಂಕ ಆಕೆಯಿಂದ ದೂರವಾಗಿದ್ದು, ಆಕೆಯ ಬದುಕಿನ ಹಿಂದಿನ ಸಂತಸ ಮರಳಿದೆ. ಅಂತಿಮವಾಗಿ ಆ ದಂಪತಿ ಹೇಳುವುದು ಭರವಸೆಯೇ ಬದುಕು ಎಂದಿಗೂ ನಂಬಿಕೆ ಕಳೆದುಕೊಳ್ಳದಿರಿ ಎನ್ನುವ ಮಾತಷ್ಟೇ.  

    #Health #medical
    Share. Facebook Twitter Pinterest LinkedIn Tumblr Email WhatsApp
    Previous Articleವೈಭವದ ಕರಗ..
    Next Article ಮಾಂಸಹಾರದಿಂದ ಕ್ಯಾನ್ಸರ್ ಉಲ್ಬಣ !
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Frankjak ರಲ್ಲಿ ದರ್ಶನ್ ಪ್ರಕರಣ: ಸರ್ಕಾರಕ್ಕೆ ನೋಟಿಸ್.
    • Jamesfluts ರಲ್ಲಿ ಶಿವಾನಂದ ಪಾಟೀಲ್ ಒಳಸಂಚಿನ ರಾಜಕಾರಣಿಯೇ? | Shivanand Patil
    • Ralphhow ರಲ್ಲಿ ಯಡಿಯೂರಪ್ಪ ಅವರಿಗೆ Z category ಭದ್ರತೆ | Yediyurappa
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe