ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಭಾನುವಾರ ನಡೆದ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ. ಚಾರ್ಜ್‌ಗೆ ಹಾಕಿದ್ದ ಫೋನ್ ತೆಗೆಯುವಾಗ ವಿದ್ಯುತ್ ಸ್ಪರ್ಶದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಾರಂಗಪುರ ಗ್ರಾಮದ ನಿವಾಸಿ ೨೨ ವರ್ಷದ ನೀತು (22) ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್‌ನಿಂದ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ನೀತುವಿನ ಚೀರಾಟದ ಸದ್ದು ಕೇಳಿದ ಅಕ್ಕ ಪಕ್ಕ ಇದ್ದವರು ಬಂದು ನೋಡಿದಾಗ ನೀತು ಚಾರ್ಜ್ ಗೆ ಹಾಕಿದ್ದ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದು ಕಂಡು ಬಂದಿತು. ಅವರು ಆಕೆಯನ್ನು ಒಂದು ಕೋಲಿನ ಸಹಾಯದಿಂದ ಬೇರ್ಪಡಿಸಿ ಹತ್ತಿರದ ಬನ್ಸ್ಡಿ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಬನ್ಸ್ಡಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರಕಾರ ನೀತುರನ್ನು ಸರ್ಕಾರಿ ಆಸ್ಪತ್ರೆಗೆ ಗಂಭೀರ ಪರಿಸ್ಥಿತಿಯಲ್ಲಿ ತರಲಾಯಿತು ಆದರೆ ಆಕೆ ಮೃತಪಟ್ಟಿರುವುದು ಸಾಬೀತಾಗಿದೆ ಆದರೆ ಈ ಪ್ರಕರಣದಲ್ಲಿ ಕುಟುಂಬದವರಿಂದ ಯಾವುದೇ ದೂರು ದಾಖಲಾಗಿಲ್ಲ
Previous Articleಸನ್ಯಾಸಿಯಾಗಲು ಹೊರಟ ಉನ್ನತ ಅಧಿಕಾರಿ.
Next Article ಅಧ್ಯಕ್ಷ ಬೈಡೆನ್ ಆರೋಪಿ ಮಗನನ್ನು ಖುಲಾಸೆ ಮಾಡಿದ್ದು!