ಬೆಳಗಾವಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಕರೆನ್ಸಿ ಪತ್ತೆಯಾದ ಘಟನೆ ನಡೆದಿದೆ. ಕರೋಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ನೋಟು ಪತ್ತೆಯಾಗಿದೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮದ್ ಅಲಿ ಜಿನ್ನಾ ಭಾವಚಿತ್ರವಿರುವ ನೋಟು
10ರೂಪಾಯಿ ಮುಖ ಬೆಲೆ ಹೊಂದಿದೆ. ಈ ವಿಚಾರ ತಾಲೂಕಿನಲ್ಲೀಗ ತೀವ್ರ ಚರ್ಚೆಗೊಳಗಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕೋಡಿ ಪೊಲೀಸರು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸದ್ಯದ ವಾತಾವರಣದಲ್ಲಿ ನೋಟು ಸಿಕ್ಕಿದ್ದು ಸಂಚಲನಕ್ಕೆ ಕಾರಣವಾಗಿದೆ
Previous Articleಬೆಂಗಳೂರಿಗೆ FBI.. ಹುಷಾರ್…!
Next Article ಬಿಸಿಲಿನ ತಾಪಕ್ಕೆ ಹೊರ ಬರುತ್ತಿರುವ ಹಾವುಗಳು