ಬೆಂಗಳೂರು,ಸೆ.-
ಸದ್ಗುರು ಜಗ್ಗಿ ವಾಸುದೇವ್ ಅವರ ಪ್ರವಚನಗಳು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿವೆ ಅನೇಕ ಮಂದಿ ಅವರ ಭಕ್ತರುಧಾರ್ಮಿಕ ಹಾಗೂ ಅಧ್ಯಾತ್ಮಿಕ ಜ್ಞಾನ, ಮನಸ್ಸಿಗೆ ಶಾಂತಿ, ನೆಮ್ಮದಿಗಾಗಿ ಜಗ್ಗಿ ವಾಸುದೇವ್ ರವರ ವಿಡಿಯೋ ವೀಕ್ಷಿಸುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಇದೀಗ ಜಗ್ಗಿ ವಾಸುದೇವ್ ಅವರ ನಕಲಿ ವಿಡಿಯೋ ಸೃಷ್ಟಿಸಿ ವಂಚನೆಯ ಜಾಲ ಬೀಸಿದ್ದಾರೆ.
ಈ ಮೋಸದ ಜಾಲಕ್ಕೆ ಬಿದ್ದ ಬೆಂಗಳೂರಿನ ಮಹಿಳೆ ಒಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ.
ಈ ಮಹಿಳೆ ಜಗ್ಗಿ ವಾಸುದೇವ್ ಅವರ ಯುಟ್ಯೂಬ್ ವಿಡಿಯೋ ನೋಡುವಾಗ ಡಿಜಿಟಲ್ ಮೋಸಕ್ಕೊಳಗಾಗಿ 3.75 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಕಳೆದ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಹಂತಹಂತವಾಗಿ ನಡೆದಿರುವ ಮೋಸದ ಜಾಲ ಇದಾಗಿದೆ.ನಗರದ ಸೈಬರ್ ಕ್ರೈಂ ಪೊಲೀಸರಿಗೆ ನಗರದ ಸಿವಿ ರಾಮನ್ ನಗರ ವರ್ಷಾ ಗುಪ್ತಾ ನೀಡಿರುವ ದೂರಿನನ್ವಯ, ಫೆಬ್ರವರಿ 25ರಂದು ಧರ್ಮಗುರುವೊಬ್ಬರ ವಿಡಿಯೋವೊಂದನ್ನು ಯುಟ್ಯೂಬ್ ನಲ್ಲಿ ವೀಕ್ಷಿಸುತ್ತಿದ್ದಾಗ, ಆ ವಿಡಿಯೋದಲ್ಲಿದ್ದ ಧರ್ಮಗುರು, ತಾವೊಂದು ಹಣಕಾಸು ಸಂಸ್ಥೆಯನ್ನು ನಡೆಸುತ್ತಿದ್ದು ಅದರಲ್ಲಿ 250 ಡಾಲರ್ ಬಂಡವಾಳ ಹಾಕಿದರೂ ದೈವಕೃಪೆಯಿಂದ ಅದು ಮುಂಬರುವ ದಿನಗಳಲ್ಲಿ ದೊಡ್ಡ ಸಂಪತ್ತಾಗಿ ಬೆಳೆಯುತ್ತದೆ ಎಂದು ಹೇಳಿದರು.
ಆ ಯುಟ್ಯೂಬ್ ನಲ್ಲಿರುವ ಟ್ರೇಡಿಂಗ್ ಲಿಂಕ್ ಕ್ಲಿಕ್ ಮಾಡಿದ ಅವರು, ಅಲ್ಲಿ ತಮ್ಮ ಹೆಸರು, ಫೋನ್ ನಂಬರನ್ನು ಕೆಲವೇ ನಿಮಿಷಗಳಲ್ಲಿ, ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ, ತನ್ನನ್ನು ವಾಲೀದ್ ಬಿ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಮೈರಾಕ್ಸ್ ಎಂಬ ಆ್ಯಪ್ ನ ಪ್ರತಿನಿಧಿ ಎಂದು ಹೇಳಿ, ಆ ಆ್ಯಪ್ ಅನ್ನು ತಮ್ಮ ಮೊಬೈಲ್ ಗೆ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ಅದರ ಮೂಲಕವೇ ಹಣ ಹೂಡಿಕೆ ಮಾಡಬೇಕು, ಹೂಡಿಕೆಗಳ ಬಗ್ಗೆ ನಿಮಗೆ ಕೋಚಿಂಗ್ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದಾನೆ.
ಅದರಂತೆ, ಆಕೆ ಆ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ. ಆನಂತರ, ಆ ಮಹಿಳೆಗೆ ಝೂಮ್ ವಿಡಿಯೋ ಕಾಲಿಂಗ್ ವ್ಯವಸ್ಥೆಯ ಮೂಲಕ ಹೂಡಿಕೆಯ ತರಬೇತಿ ನೀಡಿದ್ದಾರೆ. ಆನಂತರ ಆ ಮಹಿಳೆಯ ಕಡೆಯಿಂದ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕೆಲವೊಮ್ಮೆ ವಾಲೀದ್ ಸಿಗದಿದ್ದಾಗ ಮೈಕಲ್ ಎಂಬಾತ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ಹಾಗೂ ಹೂಡಿಕೆಯ ಬಗ್ಗೆ ಆಕೆಗೆ ತಿಳುವಳಿಕೆ ನೀಡುತ್ತಿದ್ದ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.
ಅವರು ಹೇಳಿದಂತೆ ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ ತಮ್ಮ ಬ್ಯಾಂಕ್ ಖಾತೆಗಳಿಂದ ಹಾಗೂ ಕ್ರೆಡಿಟ್ ಕಾರ್ಡ್ ಗಳಿಂದ ಸುಮಾರು 3.75 ಕೋಟಿ ರೂ.ಗಳನ್ನು ಈ ಮಹಿಳೆ ಕಳುಹಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು, ಇದೊಂದು ಅಂತರಾಷ್ಟ್ರೀಯ ಮಾದರಿಯ ದೊಡ್ಡ ಮೋಸದ ಜಾಲ ಎಂದು ಅಂದಾಜಿಸಿದ್ದು ತನಿಖೆ ಆರಂಭಿಸಿದ್ದಾರೆ.
Previous Articleಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
Next Article Drugs peddler ಗಳ ಜೊತೆ ಇದ್ದ ಪೊಲೀಸರು.