ಬೆಂಗಳೂರು.
ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಅಗತ್ಯವಿರುವ ಬಹುಮತ ಗಳಿಸಿರುವ ಎನ್ ಡಿ ಎ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲು ಮುಂದಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ.
ಬಿಜೆಪಿ ಮತ್ತು ಎನ್.ಡಿ.ಎ ಮೈತ್ರಿಕೂಟದ ಉನ್ನತ ಮೂಲಗಳ ಪ್ರಕಾರ ಜೂನ್ 8ರ ಮಧ್ಯಾಹ್ನ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಈ ಮೂಲಕ ಅವರು ಮಾಜಿ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರು ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರ ಬದಲಿಗೆ ಬೇರೆಯವರನ್ನು ಪ್ರಧಾನಿ ಹುದ್ದೆಗೆ ತರಬೇಕು ಎಂಬ ಕುರಿತಂತೆ ಚರ್ಚೆಗಳು ನಡೆದಿದೆಯಾದರೂ ಎನ್ ಡಿಎ ಮೈತ್ರಿಕೂಟದ ಪ್ರಮುಖ ಅಂಗ ಪಕ್ಷವಾಗಿರುವ ತೆಲುಗು ದೇಶಂ ಇದಕ್ಕೆ ಅಪಸ್ವರ ಎತ್ತಿದೆ
ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬಿಜೆಪಿಯಬ ಬೇರೆ ಯಾವುದೇ ನಾಯಕರನ್ನು ಈ ಹುದ್ದೆಗೆ ತರಲು ಒಪ್ಪದಿರುವ ಸಂದೇಶ ರವಾನಿಸಿದೆ ಈ ಹಿನ್ನೆಲೆಯಲ್ಲಿ ಮೋದಿ ಅವರ ಹಾದಿ ಸುಗಮವಾದಂತಾಗಿದೆ.
ಸಂಜೆ ಮೈತ್ರಿ ಕೂಟದ ನಾಯಕರ ಸಭೆ ನಡೆಯಲಿದೆ ಈ ಸಭೆಯ ನಂತರ ಮೈತ್ರಿಕೂಟದ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸುವ ಸಾಧ್ಯತೆ ಇದೆ. ವೇಳೆ ನರೇಂದ್ರ ಮೋದಿ ಅವರನ್ನು ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿರುವ ನಿರ್ಧಾರವನ್ನು ತಿಳಿಸಿ ಪ್ರಮಾಣವಚನ ಸಮಾರಂಭಕ್ಕೆ ಕೋರಿಕೆ ಸಲ್ಲಿಸಲಿದ್ದಾರೆ ಎಂದು ಗೊತ್ತಾಗಿದೆ.
Previous Articleವಾಲ್ಮೀಕಿ ಹಗರಣ-CBI ಎಫ್ ಐ ಆರ್ ದಾಖಲು.
Next Article ಇನ್ನು ಮುಂದೆ ಹೇಗಂದರೆ ಹಾಗೆ ಮರ ಕಡಿಯುವಂತಿಲ್ಲ.