ಬೆಂಗಳೂರು,ಜ.21-
ಉದ್ಯಮಿ ಹಾಗೂ ವಿಧಾನಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರಿಗೆ ಐನಾತಿ ಕಳ್ಳರು ಪಂಗನಾಮ ಹಾಕಿದ್ದಾರೆ.
ಟಿ.ಎ.ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನಾಭರಣಗಳನ್ನು ಹಾಲ್ ಮಾರ್ಕ್ ಹಾಕಿರುವುದಾಗಿ ಪಡೆದು ವಂಚಿಸಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಲ್ ಮಾರ್ಕ್ಸ್ ಸೀಲ್ ಹಾಕಲು ನೀಡಿದ್ದ 1.249 ಕೆ.ಜಿ ತೂಕದ ಚಿನ್ನಾಭರಣ ವಂಚಿಸಲಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮ್ಯಾನೇಜರ್ ನೀಡಿದ ದೂರಿನನ್ವಯ ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಕಳೆದ ಜನವರಿ 14ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ 1 ಕೆಜಿ 249 ಗ್ರಾಂ ಚಿನ್ನದ ಆಭರಣಗಳನ್ನು ಹಾಲ್ ಮಾರ್ಕ್ ಹಾಕಲು ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ನೀಡಲಾಗಿತ್ತು.
ಜನವರಿ 15ರಂದು ಚಿನ್ನಾಭರಣ ಕೊಡುವಂತೆ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ನ ಮಾಲೀಕ ಭರತ್ ಚಟಡ್ ಅವರನ್ನ ಕೇಳಿದಾಗ, “ತಮ್ಮ ಸಂಸ್ಥೆಯ ಉದ್ಯೋಗಿ ಕಳ್ಳತನ ಮಾಡಿದ್ದಾನೆ” ಎಂದು ಉತ್ತರಿಸುತ್ತಿದ್ದಾರೆ ಎಂದು ದೂರಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ ಮ್ಯಾನೇಜರ್ ನೀಡಿರುವ ದೂರಿನನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Previous Articleಬೆಂಗಳೂರಿನಲ್ಲಿ ಇದು ಮಾತ್ರ ನಿಲ್ಲುತ್ತಿಲ್ಲ.
Next Article ಬ್ಯಾಂಕ್ ದರೋಡೆ ಮಾಡಿದ ಮೇಲೇನಾಯ್ತು ಗೊತ್ತಾ

4 ಪ್ರತಿಕ್ರಿಯೆಗಳು
El mejor casino online es Betano https://betanogame.org/es/. Desbloquea el 100% hasta €500 más giros gratis y disfruta de acción sin parar. Pagos rápidos, torneos enormes y diversión interminable te esperan.
Jogue no Mostbet e sinta o gosto da verdadeira vitГіria – Site Mostbet , Entre agora no Mostbet e comece com 125% a mais + 310 rodadas de presente .