ಬೆಂಗಳೂರು : ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವಾದ್ಯಂತ ತೆರೆ ಕಂಡಿತ್ತು. ಈ ಚಿತ್ರದೊಂದಿಗೆ ಕರುನಾಡಿನ ಪ್ರೇಕ್ಷಕರು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು. ಎಲ್ಲೆಡೆಯಿಂದ ಚಿತ್ರಕ್ಕೆ ಅದ್ಭುತ ಸ್ವಾಗತ ದೊರೆಯಿತು. ‘ಜೇಮ್ಸ್ ಜಾತ್ರೆ’ ಹೆಸರಿನಲ್ಲಿ ಅಭಿಮಾನಿಗಳು ಪುನೀತ್ ಚಿತ್ರವನ್ನು ಸಂಭ್ರಮಿಸಿದರು. ಪುನೀತ್ ಭಾಗದ ಚಿತ್ರೀಕರಣವಾಗಿದ್ದರೂ ಅಪ್ಪು ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ ಚಿತ್ರತಂಡ ಶಿವರಾಜ್ಕುಮಾರ್ ಧ್ವನಿಯಲ್ಲಿ ಚಿತ್ರವನ್ನು ರಿಲೀಸ್ ಮಾಡಿತ್ತು. ಆದರೆ ಪುನೀತ್ ಧ್ವನಿಯನ್ನು ಚಿತ್ರಕ್ಕೆ ಅಳವಡಿಸಲು ತಂಡ ಪ್ರಯತ್ನ ಮುಂದುವರೆಸಿತ್ತು. ಅಂತಿಮವಾಗಿ ಅದರಲ್ಲಿ ಯಶಸ್ವಿಯೂ ಆಯಿತು. ಪರಿಣಾಮವಾಗಿ ಇಂದಿನಿಂದ (ಏ.22) ‘ಜೇಮ್ಸ್’ ಅಪ್ಪು ಧ್ವನಿಯಲ್ಲೇ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.
ಇನ್ನು ಮುಂದೆ ಪುನೀತ್ ರಾಜ್ಕುಮಾರ್ ಧ್ವನಿಯಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿಯೇ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ. ಇದಲ್ಲದೇ ಹಲವೆಡೆ ಫ್ಯಾನ್ಸ್ ಶೋಗಳನ್ನು ಏರ್ಪಡಿಸಲಾಗಿದೆ.
ಅಂದಹಾಗೆ ಧ್ವನಿ ತಂತ್ರಜ್ಞರು ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಇದು ಅವರಿಗೆ ಸಿಕ್ಕ ಮೊದಲ ಜಯವಾಗಿದೆ. ಈ ಬಗ್ಗೆ ಇತ್ತೀಚೆಗೆ ಚಿತ್ರತಂಡ ಸಂತಸ ಹಂಚಿಕೊಂಡಿತ್ತು.