ಬೆಂಗಳೂರು,ಸೆ.11-
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ
ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಅನ್ನ,ನೀರು ಸ್ವೀಕರಿಸಲು ನಿರಾಕರಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾನೆ.
ಉಡುಪಿಯ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಚೌಗಲೆ ನಿನ್ನೆ ಬೆಳಿಗ್ಗೆಯಿಂದ ತಿಂಡಿ ಮಧ್ಯಾಹ್ನ ಊಟ ಮಾಡದೆ ಹಠ ಮಾಡುತ್ತಾ ಉಪವಾಸ ಕುಳಿತಿರುವ ಆತನನ್ನು ನಿಭಾಯಿಸಲು ಜೈಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಕಳೆದ 2023ರಲ್ಲಿ ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ ಉಡುಪಿಯಲ್ಲಿನ ಮನೆಗೆ ನುಗ್ಗಿ ಹಸೀನಾ(48) ಮತ್ತು ಆಕೆಯ ಮಕ್ಕಳಾದ ಅಫ್ಸಾನ್(23), ಅಸೀಮ್ (12) ಮತ್ತು ಅಯ್ನಾಜ್ (21) ಕೊಲೆ ಮಾಡಿದ್ದ. ಸದ್ಯ ಈಗ ಆರೋಪಿ ಪ್ರವೀಣ್ ಸೆಂಟ್ರಲ್ ಜೈಲ್ನ ಪ್ರತ್ಯೇಕ ಸೆಲ್ ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ.
ತನ್ನ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಗರದ ನ್ಯಾಯಾಲಯಕ್ಕೆಗೆ ವರ್ಗಾಯಿಸುವಂತೆ ಒತ್ತಾಯಿಸಿ,
ಬೆಳಗ್ಗಿನ ತಿಂಡಿ, ಮಧ್ಯಾಹ್ನ ಊಟ ಮಾಡದೆ ಉಪವಾಸ ಮಾಡುತ್ತಿದ್ದಾನೆ.
ಈತನಿಗೆ ಜೀವ ಬೆದೆರಿಕೆ ಇರುವ ಹಿನ್ನೆಲೆ ಪ್ರತ್ಯೇಕ ಸೆಲ್ನಲ್ಲಿ ಇಡಲಾಗಿದೆ.ಇಲ್ಲಿರಲು ತಕರಾರು ಎತ್ತಿದ್ದು
ಸೆಂಟ್ರಲ್ ಜೈಲ್ ನ ಪ್ರಧಾನ ಬ್ಲಾಕ್ ಗೆ ತನ್ನನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾನೆ. ಆದರೆ ಪ್ರವೀಣ್ ಚೌಗುಲೆಗೆ ಜೀವ ಬೆದರಿಕೆ ಇರುವುದರಿಂದ ಪ್ರತ್ಯೇಕ ಸೆಲ್ ನ ಅಗತ್ಯ ಇದೆ ಎಂದು ಜೈಲ್ನ ಸಹಾಯಕ ಅಧೀಕ್ಷಕರು ಕೋರ್ಟ್ ಗೆ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೊಪ್ಪದ ಆತ ಸತ್ಯಾಗ್ರಹ ಆರಂಭಿಸಿದ್ದಾನೆ