ಮಾಸ್ಕೋ: ಪುಟಿನ್ ಪುತ್ರಿ, ಮಾಜಿ ನರ್ತಕಿ ಕ್ಯಾಟೆರಿನಾ ಟಿಖೋನೋವಾ (Katerina Tikhonova) ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಆದರೆ ಪುಟಿನ್ ಪುತ್ರಿ ಪ್ರೀತಿಸುತ್ತಿರುವ ಈತ ವ್ಲಾಡಿಮಿರ್ ಝೆಲೆನ್ಸ್ಕಿ ಅಲ್ಲ, ಬದಲಿಗೆ ಜರ್ಮನಿಯ ಮ್ಯೂನಿಚ್ ಮೂಲದ ಬ್ಯಾಲೆಟ್ ನೃತ್ಯಗಾರ ಇಗೋರ್ ಝೆಲೆನ್ಸ್ಕಿಯನ್ನು ಕ್ಯಾಟೆರಿನಾ ಪ್ರೀತಿಸುತ್ತಿದ್ದಾರಂತೆ.
ಇಗೋರ್ ಝೆಲೆನ್ಸ್ಕಿ ಹಾಗು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿಗೂ ಯಾವುದೇ ಸಂಬಂಧ ಇಲ್ಲ. ಕೇವಲ ಅಡ್ಡಹೆಸರಿನಲ್ಲಿ ಮಾತ್ರ ಸಾಮ್ಯತೆಯಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ವ್ಲಾಡಿಮಿರ್ ಪುಟಿನ್ ಅವರ ವೈಯಕ್ತಿಕ ಜೀವನದ ಒಂದೊಂದೇ ರಹಸ್ಯಗಳು ಬಹಿರಂಗವಾಗುತ್ತಿವೆ.
ಪುಟಿನ್ ಅವರು ಒಲಿಂಪಿಕ್ಸ್ ಪದಕ ವಿಜೇತೆ ಜಿಮ್ನಾಸ್ಟಿಕ್ ಪಟು ಅಲಿನಾ ಕಬೆವಾ ಜೊತೆ ಇದೆ ಎನ್ನಲಾದ ರಹಸ್ಯಮಯ ಲವ್ ಸ್ಟೋರಿ ಬಹಿರಂಗವಾಗಿತ್ತು. ಈಗ ಅವರ ಪುತ್ರಿ ಜರ್ಮನಿ ಮೂಲದ ಡ್ಯಾನ್ಸರ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಪ್ರೀತಿಗೆ ಸರ್ಕಾರಿ ಹಣ ಬಳಕೆ:
2018-2019ರ ಅವಧಿಯಲ್ಲಿ ಪುಟಿನ್ ಪುತ್ರಿ 50ಕ್ಕೂ ಹೆಚ್ಚು ಬಾರಿ ಮ್ಯೂನಿಚ್‌ಗೆ ಪ್ರಯಾಣಿಸಿದ್ದಾರೆ ಎಂಬ ಅಂಶ ರಷ್ಯಾದ ಸ್ವತಂತ್ರ ಮಾಧ್ಯಮ ಸಂಸ್ಥೆ ಐಸ್ಟೋರಿಸ್ ಮತ್ತು ಜರ್ಮನಿಯ ನಿಯತಕಾಲಿಕೆ ಡೆರ್ ಸ್ಪೀಗೆಲ್‌ನ ಜಂಟಿ ತನಿಖೆಯಿಂದ ತಿಳಿದುಬಂದಿದೆ.
ಕ್ಯಾಟೆರಿನಾ ಪ್ರತಿ ಬಾರಿಯೂ ತಮ್ಮ ಪ್ರಿಯಕರ ಝೆಲೆನ್ಸ್ಕಿಯನ್ನು ನೋಡಲು ಜರ್ಮನಿಯ ಮ್ಯೂನಿಚ್‌ಗೆ ಸರ್ಕಾರಿ ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ ಎಂಬ ವಿಚಾರ ವಿವಾದಕ್ಕೊಳಗಾಗುವ ಸಾಧ್ಯತೆಯಿದೆ.
ಮಾಸ್ಕೋ ಮತ್ತು ಮ್ಯೂನಿಚ್ ನಡುವಿನ ಸರಣಿ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ಮಾಧ್ಯಮಗಳ ತನಿಖೆಯ ವೇಳೆ ಎರಡು ವರ್ಷದ ಬಾಲಕಿಯ ಪಾಸ್‌ಪೋರ್ಟ್ ಇರುವುದೂ ಪತ್ತೆಯಾಗಿದೆ. ಅದು, ಪುಟಿನ್ ಅವರ ಅಪರಿಚಿತ ಮೊಮ್ಮಗಳಾಗಿರುವ ಸಾಧ್ಯತೆ ಇದೆ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ಅಂದಹಾಗೆ, ಪುಟಿನ್ ಪುತ್ರಿ ಪ್ರೀತಿಸುತ್ತಿರುವ 52 ವರ್ಷದ ಇಗೋರ್ ಝೆಲೆನ್ಸ್ಕಿ ಈ ವರ್ಷದ ಏಪ್ರಿಲ್‌ವರೆಗೆ ಬೇರಿಸ್ಚೆಸ್ ಸ್ಟ್ಯಾಟ್ಸ್‌ಬಾಲ್‌ನ ನಿರ್ದೇಶಕರಾಗಿದ್ದರು.
ಝೆಲೆನ್ಸ್ಕಿ ಜೊತೆ ಪುಟಿನ್ ಪುತ್ರಿ ಲವ್: ಪ್ರಿಯಕರನ ಭೇಟಿಗೆ ಸರ್ಕಾರಿ ಹೆಲಿಕಾಪ್ಟರ್ ಬಳಕೆ
Previous Articleರೋಹಿತ್ ಚಕ್ರವರ್ತಿ ಕಿಡಿಗೇಡಿ !!
Next Article ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಮೋಹನ್‌ಕುಮಾರ್ ನಿಧನ