ಚಂದ್ರಾಪುರ(ಮಹಾರಾಷ್ಟ್ರ): ಡೀಸೆಲ್ ಟ್ಯಾಂಕರ್ ಹಾಗು ಟ್ರಕ್ ಡಿಕ್ಕಿಯಾದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರದ ಹೊರವಲಯದಲ್ಲಿ ಗುರುವಾರ ರಾತ್ರಿ 10.30 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣ ಎರಡೂ ವಾಹನಗಳು ಹೊತ್ತಿ ಉರಿದಿವೆ ಎಂದು ತಿಳಿದುಬಂದಿದೆ.
ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಆರು ಕಾರ್ಮಿಕರು ಮತ್ತು ಒಬ್ಬ ಚಾಲಕ ಇದ್ದ. ಡೀಸೆಲ್ ಟ್ಯಾಂಕರ್ ಚಾಲಕ ಹನೀಫ್ ಖಾನ್ (35) ಮತ್ತು ಕಂಡಕ್ಟರ್ ಅಜಯ್ ಪಾಟೀಲ್ (35) ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಕಾರ್ಮಿಕರು ಮರದ ದಿಮ್ಮಿ ಇಳಿಸಲು ತೊಹೊಗಾಂವ್ ಕೊಠಾರಿಯಿಂದ ಚಂದ್ರಾಪುರಕ್ಕೆ ಪ್ರಯಾಣಿಸುತ್ತಿದ್ದರು.