ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಇದೀಗ ತಪ್ಪಾಯ್ತು,ನನ್ನನ್ನು ಕ್ಷಮಿಸಿ ಎಂದು ತನ್ನ ಅಭಿಮಾನಿಗಳು ಮತ್ತು ದೇಶದ ಜನರಲ್ಲಿ ಬೇಡಿಕೊಂಡಿದ್ದಾರೆ. ಯಾಕೆ ಗೊತ್ತಾ ಅಕ್ಷಯ್ ಕುಮಾರ್ ಸಾಮಾಜಿಕ ಕಳಕಳಿಯ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.ಸ್ಟಾರ್ ನಟನ ಈ ಜವಾಬ್ದಾರಿ ಹಲವರ ಮೆಚ್ಚುಗೆಗೆ ಪಾತ್ತವಾಗಿತ್ತು.
ಇತ್ತೀಚೆಗೆ ಈ ನಟ ವಿಮಲ್ ಎಲೈಚಿ ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.ಇದನ್ನು ಗಮನಿಸಿದ ಅವರ ಅಭಿಮಾನಿಗಳು ಈ ಹಿಂದೆ ಅಕ್ಷಯ್ ಕುಮಾರ್ ಎಂದಿಗೂ ನಾನು ತಂಬಾಕನ್ನು ಉತ್ತೇಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು ಈ ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಅವರ ಅಭಿಮಾನಿಗಳು ಸ್ಟಾರ್ ನಟನನ್ನು ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿನ ಈ ಪೋಸ್ಟ್ ಬಾರಿ ಸದ್ದು ಮಾಡಿತ್ತು ಹಲವಾರು ಮಂದಿ ಅಕ್ಷಯ್ ಕುಮಾರ್ ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎಚ್ಚೆತ್ತ ಅಕ್ಷಯ್ ಕುಮಾರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಹಾಗು ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ. ತಂಬಾಕು ಬ್ರಾಂಡ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಅದರಿಂದ ಪಡೆದ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ದಾನ ಮಾಡುವುದಾಗಿ ಅವರು ಹೇಳಿದ್ದಾರೆ.
‘ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ.
ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.
ನಾನು ಭವಿಷ್ಯದ ಆಯ್ಕೆಗಳನ್ನು ಮಾಡುವಾಗ ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಹಾರೈಕೆಗಳನ್ನು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ
Previous Articleಡೆಲ್ಲಿ ಸ್ಪಿನ್ ಬಲೆಗೆ ಸಿಲುಕಿ ಒದ್ದಾಡಿದ ಪಂಜಾಬ್
Next Article ತಿ.ನರಸೀಪುರ ಪಟ್ಟಣಕ್ಕೆ ಜನತಾ ಜಲಧಾರೆ ರಥಯಾತ್ರೆ