ದೆಹಲಿ: ಪುರಾಣ ಪ್ರಸಿದ್ಧ ಗೋರಖ್ನಾಥ್ ದೇವಾಲಯ ಮತ್ತು ವಿಶ್ವದ ಅದ್ಬುತ ತಾಜ್ ಮಹಲ್ ಮೇಲೆ ದಾಳಿಗೆ ಭಯೋತ್ಪಾದಕರು ಸಂಚು ರೂಪಿಸಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದಿರುವ ಗುಪ್ತಚರ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಹಾಗು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.ಈ ಹಿನ್ನೆಲೆಯಲ್ಲಿ ಎರಡು ಪ್ರದೇಶದಲ್ಲಿ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗೋರಖ್‌ಪುರದಲ್ಲಿ ಭಯೋತ್ಪಾದಕ ಮುರ್ತಾಜಾ ಬಂಧನ ಹಾಗು ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆಯಬಹುದು ಎಂದು ಗುಪ್ತದಳ ಮಾಹಿತಿ ನೀಡಿದೆ ಇದನ್ನು ಗಂಭೀರವಾಗಿ ಪರಿಗಣಿಸಿರುವ
ಉತ್ತರ ಪ್ರದೇಶದ ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ರಾಜ್ಯದಾದ್ಯಂತ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿ ತೀವ್ರ ನಿಗಾ ವಹಿಸಿವೆ.
ತಾಜ್ ಮಹಾಲ್ ಮತ್ತು ಗೋರಖ್ನಾಥ್ ದೇವಾಲಯದ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ. ಹೀಗಾಗಿ, ನಿನ್ನೆ ರಾತ್ರಿ ಡಿಡಿಯು ಜಂಕ್ಷನ್‌ನಲ್ಲಿ ಜಿಆರ್‌ಪಿ ಮತ್ತು ಆರ್‌ಪಿಎಫ್ ಜಂಟಿ ತಂಡ ಕಾರ್ಯಾಚರಣೆ ಕೈಗೊಂಡು ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಅರಿವು ಮೂಡಿಸಿದ್ದಲ್ಲದೆ, ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳನ್ನು ತೀವ್ರ ತಪಾಸಣೆ ನಡೆಸಿದರು.
ಹೌರಾ-ದೆಹಲಿ ರೈಲು ಮಾರ್ಗದ ಮಧ್ಯೆ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ಜಿಆರ್ ಪಿ ಹಾಗೂ ಅರ್ ಪಿಎಫ್ ನ ಜಂಟಿ ತಂಡವು ತೀವ್ರ ತಪಾಸಣೆ ನಡೆಸಿತು.