ತುಮಕೂರು: ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬರಿಸುತ್ತಿರೋ ಮಳೆರಾಯನ ಅವಾಂತರ ಒಂದಲ್ಲ ಎರಡಲ್ಲ. ವರುಣಾಘಾತದಿಂದ ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ 1 ಕಿಮಿ ಕಾಲ್ನಡಿಗೆಯಲ್ಲೇ ನಡೆದು ಬಂದ ಘಟನೆ ತುಮಕೂರಿನಲ್ಲಿ ನಡೆದಿದೆ.
ವರ್ಷಧಾರೆಗೆ ಇಡೀ ಕರ್ನಾಟಕವೇ ಬೆಚ್ಚಿ ಬೀದ್ದಿದೆ.
ಕೈಯಲ್ಲಿ ಹಸುಗೂಸು.. ಕಿ.ಮೀ ನಡೆದು ಕೊಂಡೋ ತಾತನ ಅಂತ್ಯಸಂಸ್ಕಾರಕೆ ಬಂದ ಮೊಮ್ಮಗಳು. ಈ ಪ್ರಕರಣ ತುಮಕೂರು ಮಧುಗಿರಿ ತಾಲೂಕಿನ ಗೌರೆಡ್ಡಿ ಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಕೊಡಿಗೇನಹಳ್ಳಿ ಗ್ರಾಪಂಗೆ ಸೇರಿದ ಗೌರೆಡ್ಡಿ ಪಾಳ್ಯದಲ್ಲಿ ವಾಸವಿರುವ ಸರ್ವೋದಯ ಶಾಲೆಯ ಶಿಕ್ಷಕ ಸದಾಶಿವರೆಡ್ಡಿ ತಂದೆ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದ ಸಂಬಂಧಿಕರು ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಆದರೆ, ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ 1 ಕಿಮಿ ಜಮೀನಿನ ಬದುಗಳಲ್ಲಿ ನಡೆದು ಬಂದಿದ್ದಾರೆ. ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು 50 ಕ್ಕು ಹೆಚ್ಚು ಕುಟುಂಬಗಳು ವಾಸವಿದ್ದು ಸೂಕ್ತ ರಸ್ತೆ ಇಲ್ಲದೆ ಅಂತ್ಯ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದೆ ಇಂದಿಗೂ ಪರದಾಡುತ್ತಿದ್ದಾರೆ. ಸೂಕ್ತ ರಸ್ತೆ ಇಲ್ಲದ ಕಾರಣ ಜಯಮಂಗಲಿ ನದಿಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಬಂದು ನದಿ ದಾಟಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಇದೆ. ಎಂದು ಆರೋಪಿಸುತ್ತಾರೆ ಸ್ಥಳೀಯ ರಾಜಣ್ಣ
ಕೊಡಿಗೇನಹಳ್ಳಿಯಿಂದ ಸುಮಾರು 2 ಕಿಮಿ ದೂರದಲ್ಲಿರುವ ಗೌರೆಡ್ಡಿ ಪಾಳ್ಯದಲ್ಲಿ ಸ್ವಾತಂತ್ರö್ಯ ಪೂರ್ವದಿಂದಲೂ ಸುಮಾರು 50 ರಿಂದ 60 ಕುಟುಂಬಗಳು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ನಿತ್ಯ ಶಾಲಾ ಕಾಲೇಜು ಹಾಗೂ ಡೇರಿಗೆ ಹಾಲು ಹಾಕಲು ದಿನಸಿ ತರಲು ಜಯಮಂಗಲಿ ನದಿ ದಡ ಅಥವ ನದಿ ಪಕ್ಕದ ಜಮೀನಿನ ವನ್ನು ಆಶ್ರಯಿಸಿದ್ದಾರೆ. ಮಳೆ ಬಂದು ನದಿ ಹರಿದರೆ ವೃದ್ದರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಪಾಡುಹೇಳ ತೀರದಾಗಿದೆ.
ಚುನಾವಣೆ ಸಂದರ್ಭದಲ್ಲಿ ಮತಯಾಚಿಸುವ ಅಭ್ಯರ್ಥಿಗಳು ರಸ್ತೆ ಹಾಗೂ ಸೇತುವೆ ಮಾಡಿಸುವ ಭರವಸೆ ನೀಡಿ ಹೋಗುತ್ತಾರೆ. ಆದರೆ ಅವರು ಗೆದ್ದ ನಂತರ ಈ ಕಡೆ ತಿರುಗಿಯು ನೋಡುವುದಿಲ್ಲ. ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.
ತಾತನ ಅಂತ್ಯಸಂಸ್ಕಾರಕ್ಕೆ ನೀರಿನಲ್ಲಿ ನಡೆದು ಬಂದ ಬಾಣಂತಿ
Previous Articleಯಡಿಯೂರಪ್ಪ-ಸಂತೋಷ್ ಬಿಗ್ ಫೈಟ್
Next Article ಯುಕ್ರೇನ್ ನಲ್ಲಿ ಸತ್ತ ರಷ್ಯಾದ ಸೈನಿಕರೆಷ್ಟು?