ಹಿಂದೂಗಳ ಪವಿತ್ರ ಯಾತ್ರಾಸ್ಥಳಗಳಾದ ತಿರುಪತಿ, ಧರ್ಮಸ್ಥಳ, ಕುಕ್ಕೆ, ಕೊಲ್ಲೂರು,ಸೇರಿದಂತೆ ಹಲವು ದೇವಾಲಯಗಳಲ್ಲಿ ಒಂದು ದಿನ ದೇವರ ದರ್ಶನ ಮತ್ತು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಧರ್ಮಸ್ಥಳದಲ್ಲಿ ನವೆಂಬರ್ 8 ರಂದು ಮಧ್ಯಾಹ್ನ ಒಂದು ಗಂಟೆಯಿಂದ ರಾತ್ರಿ ಎಂಟು ಗಂಟಯವರೆಗೆ ಮಂಜುನಾಥನ ದರ್ಶನಕ್ಕೆ ಅವಕಾಶವಿಲ್ಲ. ಆನಂತರದಲ್ಲಿ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತಿದೆಯಾದರೂ,ಯಾವುದೇ ಸೇವೆಗೆ ಅವಕಾಶವಿರುವುದಿಲ್ಲ.
ಮಧ್ಯಾಹ್ನ 1.30 ರವರಗೆ ಮಾತ್ರ ಶ್ರೀ ಕ್ಷೇತ್ರದಲ್ಲಿ ಭೋಜನ ವ್ಯವಸ್ಥೆ ಇರಲಿದೆ.ಅದೇ ರೀತಿಯಲ್ಲಿ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕಾ, ತಿರುಪತಿ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ಸೇವೆ ಮತ್ತು ದರ್ಶನದಲ್ಲಿ ವ್ಯತ್ಯಯವಾಗಲಿದೆ.
ಯಾಕೆ ಗೊತ್ತಾ..ಅಂದು ಚಂದ್ರ ಗ್ರಹಣ.
ಸೂರ್ಯ ಗ್ರಹಣ ಸಂಭವಿಸಿದ 15 ದಿನಗಳ ನಂತ್ರ ಅಂದ್ರೆ ನವೆಂಬರ್ 8ರಂದು ಕಾರ್ತಿಕ ಪೂರ್ಣಿಮೆ ದಿನ ಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದು ವರ್ಷದ ಕೊನೆಯ ಚಂದ್ರ ಗ್ರಹಣ.
ಚಂದ್ರಗ್ರಹಣದ ಆರಂಭ ಅಂದರೆ ಸ್ಪರ್ಶಕಾಲವು ಸಂಜೆ 5:35 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಗ್ರಹಣದ ಮಧ್ಯಭಾಗವು 6:19 ಕ್ಕೆ ಮತ್ತು ಮೋಕ್ಷವು ರಾತ್ರಿ 7:26 ಕ್ಕೆ ಇರಲಿದೆ. ಈ ಗ್ರಹಣದ ಸೂತಕ ಅವಧಿಯು ಗ್ರಹಣಕ್ಕೆ 12 ಗಂಟೆಗಳ ಮೊದಲು ಬೆಳಗ್ಗೆ 5.53 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರನೆಯ ದಿನ ಬೆಳಗ್ಗೆ 7 ರವರೆಗೆ ಮುಂದುವರೆಯಲಿದೆ.
ಹೀಗಾಗಿ ಅಂದು ಎಲ್ಲಾ ದೇವಾಯಗಳಲ್ಲಿ ದರ್ಶನ ಹಾಗೂ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ
ಇನ್ನು ಜ್ಯೋತಿಷಿಗಳ ಪ್ರಕಾರ, 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಸಂಭವಿಸುವುದು ಕೆಲವು ದೊಡ್ಡ ಅಶುಭಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ದೇಶ ಮತ್ತು ಸಮಾಜ ದೊಡ್ಡ ಸಂಕಷ್ಟ ಎದುರಿಸಲಿದೆ ಎಂಬ ಆತಂಕ ಜನರ ಮನದಲ್ಲಿ ಮೂಡಿದೆ
Previous Articleನೆತನ್ಯಾಹು ಮತ್ತೊಮ್ಮೆ ಇಸ್ರೇಲ್ ಪ್ರಧಾನಿ!
Next Article ಗುಂಡು ಹಾರಿಸಿ ಬಂಧಿಸಿದ ಪೊಲೀಸ್