ಕೊಡಗು,ಅ.17:
ಕರ್ನಾಟಕದ ಜೀವನಾಡಿ ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಿ ಆರಾಧಿಸುವ ಜೀವನದಿ ಕಾವೇರಿ ತೀರ್ಥ ಸ್ವರೂಪಿಣಿ ಯಾಗಿ ಕುಂಡಿಕೆಯಿಂದ ಧುಮ್ಮಿಕ್ಕುವ ಮೂಲಕ ಜೀವನದಿಯಾಗಿ ಹರಿದಳು
ಕಾವೇರಿ ಉಗಮಸ್ಥಾನ ಭಾಗಮಂಡಲ ಸಮೀಪದ
ತಲಕಾವೇರಿಯಲ್ಲಿ ಗುರುವಾರ ಬೆಳಿಗ್ಗೆ 7.40ಕ್ಕೆ ಕಾವೇರಿ ಪವಿತ್ರ ತೀರ್ಥೋದ್ಭವವಾಯಿತು ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಹರ್ಷೋದ್ಘಾರಗಳು ಮುಗಿಲು ಮುಟ್ಟಿದವು.
ಈ ಅಪರೂಪದ ಧಾರ್ಮಿಕ ಕೈಂಕರ್ಯಕ್ಕೆ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು
ಕಾವೇರಿ ಕುಂಡಿಕೆಯಿಂದ ಅವಿರ್ಭವಿಸುವ ಕ್ಷಣವನ್ನು ಆನಂದಿಸಿ ಸ್ನಾನ ಮಾಡಲು ಆಗಮಿಸಿದ್ದ ಭಕ್ತ ವೃಂದ ಕಾವೇರಿ ಮಾತೆಗೆ ಪೂಜೆ ನೆರವೇರಿಸಿದರು
ಕೊಡಗು ಮಾತ್ರವಲ್ಲದೇ ಹಲವು ಭಾಗದವರಿಗೆ ಕಾವೇರಿ ಆರಾಧ್ಯ ದೇವತೆ. ಕಾವೇರಿ ಮಾತೆಯಿಂದಲೇ ಬದುಕು ಕಟ್ಟಿಕೊಂಡಿರುವವರೂ ಈ ದಿನ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿಯ ಪವಿತ್ರ ತೀರ್ಥವನ್ನು ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ತುಂಬಿಕೊಂಡು ಹೋದರು.
Previous Articleಲಾರೆನ್ಸ್ ಬಿಷ್ಣೋಯ್ ರಕ್ತ ಚರಿತ್ರೆ
Next Article ಬಾಬಾ ಸಿದ್ದಿಕಿ ಕುಟುಂಬ ಸದಸ್ಯರಿಗೆ ಸಾಂತ್ವನ.