ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಜುಲೈ 27ರ ಶುಕ್ರವಾರ ಸಂಜೆ ಸಂಭ್ರಮದ ವಾತಾವರಣ. ನಾಡಪ್ರಭು ಕೆಂಪೇಗೌಡ ಅವರ ಜಯಂತಿಯ ಅಂಗವಾಗಿ ಮಹಾನಗರ ಪಾಲಿಕೆ ನೀಡುವ ನಗರದ ಅತ್ಯುನ್ನತ ಗೌರವ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ಇಲ್ಲಿ ಆಯೋಜಿಸಲಾಗಿತ್ತು.
ಸಮಾಜದ ವಿವಿಧ ವಲಯದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ಗಣ್ಯ ಮಾನ್ಯರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಾಧ್ಯಮ, ಶಿಕ್ಷಣ, ಸಮಾಜಸೇವೆ ಹೀಗೆ ನಾನಾವಲಯದಲ್ಲಿ ಕಳೆದ ಮೂರು ದಶಕಗಳಿಂದ ಕೆಲಸ ಮಾಡುತ್ತಿರುವ ದೀಪಕ್ ತಿಮ್ಮಯ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.
ಜೇಡರ ಬಲೆ ಕಾರ್ಯಕ್ರಮದ ಮೂಲಕ ಮನೆಮಾತಾದ ದೀಪ ತಿಮ್ಮಯ ಅವರು ಆನಂತರ ದೃಶ್ಯ ಮಾಧ್ಯಮದಲ್ಲಿ ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ನಾಡಿನ ಗಮನ ಸೆಳೆದರು ಸಮಾಜದ ಹಲವು ಆನಿಷ್ಠಗಳ ವಿರುದ್ಧ ಮಾಧ್ಯಮಗಳ ಮೂಲಕ ಅರಿವು ಮೂಡಿಸಿದ ಇವರು ನಂತರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಇವರ ಈ ಸೇವೆಯನ್ನು ಗೌರವಿಸಿ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಈ ವೇಳೆ ಪ್ರಕಟಿಸಿದರು.
ಈ ಸಮಾರಂಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಾಜಿ ಮಂತ್ರಿ ಎಚ್ ಎಂ ರೇವಣ್ಣ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಸೇರಿದಂತೆ ಹಲವು ಶಾಸಕರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Previous Articleಬಿಜೆಪಿ ಬಿಕ್ಕಟ್ಟಿಗೆ ಆರ್ ಎಸ್ ಎಸ್ ತೇಪೆ.
Next Article ಒಂದಾದ ಜಾರಕಿಹೊಳಿ ಬ್ರದರ್ಸ್ !