ತಮಿಳ್ ಚಿತ್ರರಂಗದ ಪ್ರಖ್ಯಾತ ನಟ ಮತ್ತು ಸೂಪರ್ ಸ್ಟಾರ್ ರಜನೀಕಾಂತ್ ಅವರ ಪುತ್ರಿ ಐಶ್ವರ್ಯ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರೆ. ಚೆನ್ನೈ ಯ ಕುಟುಂಬ ನ್ಯಾಯಾಲಯ ಇತ್ತೀಚಿಗೆ ಇವರಿಬ್ಬರ ವಿಚ್ಛೇದನವನ್ನು ಸಕ್ರಮಗೊಳಿಸಿದೆ. ಈ ದಂಪತಿಯ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಸಲಾಗದಷ್ಟು ಹದಗೆಟ್ಟಿದೆ ಎಂದು ನಿರ್ಧರಿಸಿ ವಿಚ್ಛೇದನ ನೀಡಲಾಗಿದೆ. ಈ ಸಂಬಂಧ ಮೂರು ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಆಗೆಲ್ಲ ಧನುಷ್ ಗೈರಾಗಿದ್ದು ವ್ಯಾಪಕವಾಗಿ ವರದಿಯಾಗಿತ್ತು. ಈಗ ಕೋರ್ಟ್ ವಿಚ್ಛೇದನದ ದಾಖಲೆಯನ್ನು ಇವರಿಬ್ಬರಿಗೆ ನೀಡಿ ವಿಚ್ಛೇದನವನ್ನು ಅಧಿಕೃತಗೊಳಿಸಲಿದೆ ಎಂದು ವರದಿಯಾಗಿದೆ. ಈ ದಂಪತಿಯ ನಡುವಿನ ವಿರಸದ ಬಗ್ಗೆ ಬಹಳಷ್ಟು ಊಹಾಪೋಹಗಳೆದ್ದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
Previous Articleಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಳ್ಳಿನ ಹಾದಿ.
Next Article ಇಮ್ರಾನ್ ಪರ ಪ್ರತಿಭಟನೆ.ಸಾವಿರಾರು ಬೆಂಬಲಿಗರು ಬಂಧನ